ಸಿದ್ದಾಪುರ ಕೋಡಿಗದ್ದೆಯಲ್ಲಿ ಪ್ರತಿಷ್ಠಾಪನಾಮಹೋತ್ಸವ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಕೋಡಿಗದ್ದೆಯ ಶ್ರೀಶಂಭುಲಿಂಗೇಶ್ವರ ಮಹಿಷಾಸುರಮರ್ದಿನಿ ದೇವಾಲಯದಲ್ಲಿ ಮೇ.೬ ರಿಂದ ಮೇ.೯ರವರೆಗೆ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ರತಿಷ್ಠಾಪನಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಜಯ ಹೆಗಡೆ ದೊಡ್ಮನೆ,
ಕೋಡಿಗದ್ದೆಯ ಶ್ರೀಶಂಭುಲಿಂಗೇಶ್ವರ ಮಹಿಷಾಸುರಮರ್ದಿನಿ ದೇವಾಲಯವು ಶಕ್ತಿಯುತವಾದ ಸ್ಥಳವಾಗಿದೆ ದೇಶದ ಬೇರೆ ಬೇರೆ ಭಾಗದಿಂದ ಜನರು ಇಲ್ಲಿಗೆ ಬರುತ್ತಾರೆ ಇಲ್ಲಿಯ ಪ್ರಸಾದ ಪೂಜೆ ತುಂಬಾ ಸತ್ಯಯುತವಾಗಿದೆ ಸಾಕಷ್ಟು ಜನರು ಇದರ ಉಪಯೋಗ ಪಡೆದಿದ್ದಾರೆ. ಇದೊಂದು ಅನಾದಿ ಕಾಲದ ಕ್ಷೇತ್ರವಾಗಿದ್ದು ಋಷಿಮುನಿಗಳು ಇಲ್ಲಿ ಈಗಲೂ ತಪಸ್ಸು ಮಾಡುತ್ತಿದ್ದಾರೆ ಎಂದು ಈ ಭಾಗದ ನಡೆದಾಡುವ ದೇವರು ಎಂದು ಕರೆಸಿಕೊಳ್ಳುತ್ತಿದ್ದ ವರದಹಳ್ಳಿ ಶ್ರೀಧರಸ್ವಾಮೀಜಿಯವರು ತಿಳಿಸಿದ್ದರು.

ಶ್ರೀಧರ ಸ್ವಾಮೀಜಿಯವರು ಈ ಕ್ಷೇತ್ರದಲ್ಲಿ ನಾಲ್ಕು ತಿಂಗಳಕಾಲ ತಪಸ್ಸು ಆಚರಿಸಿದ್ದರು. ಇಂತಹ ಕ್ಷೇತ್ರದಲ್ಲಿ ಶ್ರೀಶಂಭುಲಿಂಗೇಶ್ವರ ಹಾಗೂ ಶ್ರೀಮಹಿಷಾಸುರಮರ್ದಿನಿ ದೇವಾಲಯವಿದ್ದು ಎರಡು ದಶಕದ ಹಿಂದೆ ಈ ಎರಡೂ ದೇವಾಲಯಕ್ಕೂ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಹಿಷಾಸುರ ಮರ್ದಿನಿ ದೇವರ ವಿಗ್ರಹವು ಭಿನ್ನವಾಗಿರುವುದರಿಂದ ದೇವರಲ್ಲಿ ಪ್ರಸಾದವನ್ನು ಕೇಳಿ,ಅಷ್ಟಮಂಗಲದಲ್ಲಿ ಪ್ರಶ್ನೆ ಮಾಡಿ ಒಪ್ಪಿಗೆ ಪಡೆದು ಈಗ ನೂತನ ಶಿಲಾಮೂರ್ತಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಮೇ.೬ರಂದು ದೇವತಾ ಪ್ರಾರ್ಥನೆ,ಗಣಪತಿಪೂಜೆ,ಶುದ್ಧಿಕರ್ಮಗಳು,ಪುಣ್ಯಾಹ,ಪ್ರಧಾನ ಸಂಕಲ್ಪ,ದೇವನಾಂದಿ,ಕೌತುಕ ಬಂಧನ,ಅಗ್ನಿಗ್ರಹಣ,ಗುರುಮೂಲಮAತ್ರ ಹವನ,ಗಣೇಶ ಶಾಂತಿ,ಸಂಜೆ ಯಾಗಶಾಲಾ ಪ್ರವೆಶ,ಕುಂಡಮAಟಪ ಸಂಸ್ಕಾರ,ಭೂತಶುದ್ಧಿ,ವಾಸ್ತುರಾಕ್ಷೆÆÃಘ್ನ,ಅಧಿವಾಸ ಪೂಜೆ,ಬಲಿ ನಡೆಯಲಿದೆ.
ಮೇ.೭ರಂದು ನವಗ್ರಹ ಶಾಂತಿ,ಪ್ರತಿಷ್ಠಾಹೊಮ,ರತ್ನನ್ಯಾಸ,ಬಿAಬಶುದ್ಧಿ ಹೋಮ,ಬಿಳಿಗ್ಗೆ ೧೦.೨೨ಕ್ಕೆ ಸಲ್ಲುವ ಮಿಥುನ ಲಗ್ನದಲ್ಲಿ ದೇವಿಯ ನೂತನ ವಿಗ್ರಹ ಪ್ರತಿಷ್ಠೆ ಮಾಡಲಾಗುವುದು ಪ್ರಾಣ ಪ್ರತಿಷ್ಠೆ,ಕಲಾನ್ಯಾಸ,ಧ್ವಜಾರೋಹಣ,ಧ್ವಜ ಬಲಿಪೂಜೆ ನಡೆಯಲಿದೆ. ಸಂಜೆ ಮೃತ್ತಿಕಾಹರಣ,ಬೀಜವಾಪನ,ಭೇರಿ ತಾಡನ,ರಂಗಪೂಜೆ ಇತ್ಯಾದಿ ನಡೆಯಲಿದೆ. ಮೇ.೮ರಂದು ಅಧಿವಾಸ ಹೋಮ,ಪೂಣ್ಕಲಾವೃದ್ಧಿನಿರೀಕ್ಷಾ ಬಲಿಪೂಜೆ. ಸಂಜೆ ಮಂಡಲದರ್ಶನ,ಬ್ರಹ್ಮಕಲಶ ಸ್ಥಾಪನೆ,ದಂಡಬಲಿ,ಗ್ರಾಮದೇವತಾಬಲಿ,ಅಷ್ಟಾವಧಾನ ಸೇವೆ,

ಮೇ.೯ರಂದು ಮಂಗಲಚಂಡಿಕಾ ಯಾಗಾರಂಭ,ಬ್ರಹ್ಮಕಲಶಾಭಿಷೇಕ,ಶಕ್ತಿಹೋಮ,ಅವಶಿಷ್ಟಹೋಮ,ಅವಭೃತ,ಪೂರ್ಣಾಹುತಿ,ಧ್ವಜಾವಹರೋಹಣ,ಮಹಾಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಎಸ್.ಭಟ್ಟಕಲ್ಲಾಳ,ಶ್ರೀಧರ ಭಟ್ಟ ಗಡಿಹಿತ್ಲು,ಶ್ರೀಧರ ನಾಯ್ಕ ಹುರಕೋಡು,ಶಾಂತಾರಾಮ ಭಟ್ಟ,ಅಣ್ಣಪ್ಪ ನಾಯ್ಕ ಕೋಡಿಗದ್ದೆ,ಗಣಪತಿ ಹೆಗಡೆ ಮುಂತಾಧವರು ಉಪಸ್ಥಿತರಿದ್ದರು.

About the author

Adyot

Leave a Comment