ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಚಂದಾವರ್ ಚೆಕ್ ಪೋಸ್ಟ್ ನಲ್ಲಿ ಆಟೋ ರಿಕ್ಷಾದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ 50ಸಾವಿರ ರೂ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಂದಾವರ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುವಾಗ ಬ್ಯಾಗ್ ನಲ್ಲಿ93.50ಲಕ್ಷರೂ. ಇರುವುದು ಕಂಡುಬಂದಿದೆ.ತಕ್ಷಣ ಸಿಬ್ಬಂದಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಎಪ್ಎಸ್ಟಿ ತಂಡ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಸರಿಯಾದ ದಾಖಲೆ ಇಲ್ಲದ ಕಾರಣ ಹಣವನ್ನು ವಶಪಡಿಸಿಕೊಂಡರಲ್ಲದೆ ಆಟೋ ಚಾಲಕ ಭರತ್ ಎಂ ಶಿವಮೊಗ್ಗ ಹಾಗೂ ರವಿ ಪಂಡಿತ ಕಾಗಲ್, ಕುಮಟಾ ಎನ್ನುವವರನ್ನು ವಶಕ್ಕೆ ತೆಗೆದು
ಕೊಂಡಿದ್ದಾರೆ.
ರವಿ ಪಂಡಿತ ಕಾಗಲ್ ಕುಮಟಾ ಇವರು ಕುಮಟಾ ತಾಲೂಕಿನ ಕಾಗಲ್ ಗ್ರಾಮ ಪಂಚಾಯತ್ ಸದಸ್ಯರಿದ್ದು, ಕ್ಯಾಶ್ಯು ಫಾಕ್ಟರಿ ಹಾಗೂ ಅಡಿಕೆ ಫ್ಯಾಕ್ಟರಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.