ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವುದು ನಿಶ್ಚಿತ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಗೊಳಗೋಡಿನಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರವಾಗಿ ವಿಧಾನಪರಿಷತ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಆದ್ಯೋತ್ ವೆಬ್ ನ್ಯೂಸ್ ಜೊತೆ
ಮಾತನಾಡಿದ ಶ್ರೀನಿವಾಸ ಪೂಜಾರಿ,
ಮೇ.೩ ನೇ ತಾರೀಖಿನಂದು ಪ್ರಧಾನಿ ನರೇಂದ್ರ ಮೋದಿಯವರು ಜಿಲ್ಲೆಗೆ ಬರಲಿದ್ದು ಬಿಜೆಪಿಯ ಕಾರ್ಯಕರ್ತರಲ್ಲಿ ಇನ್ನಷ್ಟು ಬಲತುಂಬಲಿರುವುದಲ್ಲದೆ ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಸಾಕಷ್ಟು ಅಭಿವೃದ್ಧಿಯ ಕೆಲಸವನ್ನು ಮಾಡುತ್ತಿದೆ. ಜಗತ್ತಿನ ಎದುರು ಇಂದು ಭಾರತ ತಲೆ ಎತ್ತಿನಿಂತಿದೆ ಎಂದರೆ ಅದಕ್ಕೆ ಕಾರಣ ಮೋದಿಯವರು.ಇಂದು ಭಾರತ ನೆಮ್ಮದಿಯಿಂದ,ಭದ್ರತೆಯಿಂದ ಸುರಕ್ಷಿತವಾಗಿ ಇರುವುದಕ್ಕೆ ಕಾರಣ ಬಿಜೆಪಿ ಸರಕಾರದ ನೇತೃತ್ವವಹಿಸಿರುವ ಮೋದಿಯವರು. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ ಯೋಜನೆಯಿಂದ ೫೪ ಲಕ್ಷ ರೈತರಿಗೆ ಅನುಕೂಲವಾಗಿದೆ. ಸಂಧ್ಯಾಸುರಕ್ಷ ಯೋಜನೆಯಿಂದ ವೃದ್ಧರು ಸಮಾಧಾನದಿಂದ ಬದುಕುವಂತಾಗಿದೆ. ಜಿಲ್ಲೆಯ ಅರಣ್ಯ ಒತ್ತುವರಿ ಸಮಸ್ಯೆಯ ಬಗ್ಗೆ ಈಗಾಗಲೇ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಶೀಘ್ರದಲ್ಲೆ ಈ ಸಮಸ್ಯೆ ಬಗೆಹರಿಯಲಿದೆ. ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಮಟ್ಟದ ನಾಯಕರು ಇಂತಹವರು ಜಗತ್ತಿನ ಗೌರವಕ್ಕೆ ಪಾತ್ರರಾಗಿರುವ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕರವಾಗಿ ಮಾತನಾಡಿದ್ದು ಖಂಡನೀಯ. ಅವರು ಕ್ಷಮೆ ಕೇಳಿದ್ದರೂ ಅವರ ಹೇಳಿಕೆ ಕ್ಷಮೆಗೆ ಅರ್ಹವಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲಿದ್ದು ೧೪೦-೧೫೦ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಯಾವುದೇ ಮೈತ್ರಿ ಇಲ್ಲದೆ ಬಿಜೆಪಿ ಸರಕಾರ ಬರಲಿದೆ ಎಂದು ಆತ್ಮವಿಶ್ವಾಸದಿಂದ ಪೂಜಾರಿ ಹೇಳಿದರು.
ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಕಾಡ್೯ ಚೈನಾ ಸೆಟ್ ನ ಗ್ಯಾರಂಟಿ ಕಾರ್ಡ ನಷ್ಟೆ ಆಗಿದ್ದು ಜನರು ಈ ಗ್ಯಾರಂಟಿ ಕಾರ್ಡನ್ನು ನಂಬುವುದಿಲ್ಲ ಶಿರಸಿ-ಸಿದ್ದಾಪುರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲೂ ಬಂಡಾಯವಿಲ್ಲ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲಾ ಆರೂ ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ಪೂಜಾರಿ ಹೇಳಿದರು.

ಇದಕ್ಕೂ ಮೊದಲೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ ಪೂಜಾರಿ, ಬೂತ್ ಅಧ್ಯಕ್ಷರು ಸಾಕಷ್ಟು ಪ್ರಭಾವಶಾಲಿಗಳಾಗಿರುತ್ತಾರೆ ತಳಮಟ್ಟದ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಅಧಿಕಾರ ಅವರಿಗೆ ಇರುತ್ತದೆ ಆದ್ದರಿಂದ ಅವರು ಜನರ ಸಂಪರ್ಕ ಇರಿಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಆಗಿರುವ ಅಭಿವೃದ್ಧಿ ಕಾರ್ಯಗಳು ಜನರಿಗೆ ತಿಳಿಯುವಂತೆ ಮಾಡಬೇಕು ಈ ಭಾಗದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ ಹಲವು ಯೋಜನೆಗಳ ಉಪಯೋಗ ತಮ್ಮ ಕ್ಷೇತ್ರಕ್ಕೆ ಆಗುವಂತೆ ಮಾಡಿದ್ದಾರೆ ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೆಕು ಎಂದು ಹೇಳಿದರು.
ಗೋವಾ ರಾಜ್ಯದ ಮಾಜಿ ಶಾಸಕ ಸಿದ್ದಾರ್ಥ ಜಿ.,ಬಿಜೆಪಿ ಮಂಡಳ ಪ್ರದಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಇಲ್ಲಿಯ ವೃದ್ಧರೊಬ್ಬರು ಶ್ರೀನಿವಾಸ ಪೂಜಾರಿಯವರಿಗೆ ಶಾಲು ಹೊದೆಸಿ ಹಾರ ಹಾಕಲು ಬಂದಾಗ ವೃದ್ಧರಿಗೆ ತಾನೆ ಹಾರ ಹಾಕಿ ಕಾಲಿಗೆ ನಮಸ್ಕರಿಸಿ ವಿನಯತೆಯನ್ನು ಮೆರೆದರು.

About the author

Adyot

Leave a Comment