ಆದ್ಯೋತ್ ಸುದ್ದಿನಿಧಿ:
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ಶುಕ್ರವಾರ ತಾಲೂಕಿನ ಹಲವಾರು ಕಡೆಗಳಲ್ಲಿ ನಟ ಡಾ.ಶಿವರಾಜಕುಮಾರ ದಂಪತಿಗಳು ರೋಡ್ ಶೋ ಹಾಗೂ ಬಹಿರಂಗ ಪ್ರಚಾರ ನಡೆಸಿದರು
.
ಕಳೆದ ಐದಾರು ದಿನಗಳಿಂದ ಸೊರಬಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಡಾ.ಶಿವರಾಜ ಕುಮಾರ ದಂಪತಿಗಳು ಶುಕ್ರವಾರ ತಾಲೂಕಿನ ಗಡಿ ಗ್ರಾಮ ಕಾನಗೋಡಿಗೆ ಪ್ರವೇಶಿಸಿ ಅಲ್ಲಿರುವ ಪುನಿತರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಪಟ್ಟಣದ ಕೊಂಡ್ಲಿ,ಹಾಳದಕಟ್ಟಾ,ರಾಜಮಾರ್ಗದ ಮೂಲಕ ರಾಮಕೃಷ್ಣ ಹೆಗಡೆ ವೃತ್ತಕ್ಕೆ ಬಂದು ಅಲ್ಲಿ ಪ್ರಚಾರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಿವರಾಜಕುಮಾರ,ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ, ಅನೆಕ ಧಾರ್ಮಿಕ ಕ್ಷೇತ್ರಕ್ಕೆ ಕ್ರೀಡಾಚಟುವಟಿಕೆಗೆ, ಅರೋಗ್ಯ ಸಮಸ್ಯೆ ಇರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇಂತಹ ಒಳ್ಳೆಯ ವ್ಯಕ್ತಿಯಿಂದ ನೀವು ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಒಂದು ವೇಳೆ ಗೆದ್ದುಬಂದನಂತರ ಅಭಿವೃದ್ಧಿ ಕೆಲಸವನ್ನು ನಿರ್ಲಕ್ಷಿಸಿದರೆ ನೀವು ಅವರ ಮನೆಯ ಮುಂದೆ ಹೋಗಿ ಈಗ ಇದೆಲ್ಲದಕ್ಕೂ ಅವಕಾಶವಿದೆ ಆದ್ದರಿಂದ ಈ ಬಾರಿ ಭಿಮಣ್ಣನವರಿಗೆ ಮತ ನೀಡಿ ಗೆಲ್ಲಿಸಿ. ಅವರ ಗೆಲುವಿನ ಸಂಭ್ರಮಾಚರಣೆಗೆ ನಾನು ಪುನಃ ಬರುತ್ತೇನೆ ಎಂದು ಹೇಳಿದರು.
ಭೀಮಣ್ಣ ನಾಯ್ಕ ಮಾತನಾಡಿ,೩೦ ವರ್ಷಗಳ ರಾಜಕೀಯ ಅನುಭವ ಹಾಗೂ ಕಳೆದ ೧೫ ವರ್ಷಗಳಿಂದ ಸಿರ್ಸಿ ಸಿದ್ದಾಪುರ ಕ್ಷೇತ್ರದ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಯಾವುದೇ ಪ್ರಗತಿ ಆಗಿಲ್ಲ ಕ್ಷೇತ್ರಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದೆ. ಇಂದಿನ ನಿಮ್ಮ ಈ ಹುಮ್ಮಸ್ಸು ನೋಡಿ ನನಗೆ ತುಂಬಾ ಖುಷಿಯಾಗಿದೆ ಇದೆ ಹುಮ್ಮಸ್ಸು ಮೇ ಹತ್ತರಂದು ನಡೆಯಲಿರುವ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಬಟನ್ ಒತ್ತಿ ಮತ ಚಲಾಯಿಸುವವರೆಗೂ ಇರಬೇಕು ಇಂದು ನಾನು ಶಿವರಾಜ್ ಕುಮಾರ್ ಸಮ್ಮುಖದಲ್ಲಿ ಭರವಸೆಯನ್ನು ಕೊಡುತ್ತಿದ್ದೇನೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಜೊತೆ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ್ ಮಾತನಾಡಿ,ಕಲೆ ಕ್ರೀಡೆ ಧಾರ್ಮಿಕ ಕಾರ್ಯಕ್ರಮ ಗಳಿಗೆ ತನು ಮನ ಧನ ಸಹಕಾರ ನೀಡಿದವರು ನಮ್ಮ ಅಭ್ಯರ್ಥಿ ಭೀಮಣ್ಣ ನಾಯ್ಕ
ಬಿಜೆಪಿಯು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಸಾಮಾಜಿಕ ನ್ಯಾಯಕ್ಕೆ ಬೆಲೆ ನೀಡದ, ಸಾಮಾಜಿಕ ಕಳಕಳಿ ಸಾಮಾಜಿಕ ಭದ್ರತೆ ಇಲ್ಲದ ಕಾಗೇರಿಯವರನ್ನು ಈ ಬಾರಿ ಮನೆಗೆ ಕಳಿಸಬೇಕು ಇಂಥ ಶಾಸಕರು ನಮ್ಮೊಂದಿಗಿರುವುದು ನಮ್ಮ ದೌರ್ಭಾಗ್ಯ. ಅಂಥವರಿಗೆ ಐದು ವರ್ಷ ವಿಶ್ರಾಂತಿ ನೀಡಬೇಕು ಎಂದು ಹೇಳಿದರು.
ರೋಡ್ ಶೋದಲ್ಲಿ ಭಾಗವಹಿಸಿದ್ದ ಗೀತಾ ಶಿವರಾಜಕುಮಾರ ಮಾತನಾಡಿದರು.
ನಂತರ ತಾಲೂಕಿನ
ಅವರಗುಪ್ಪ,ಕಡಕೇರಿ,ಕವಂಚೂರು,ಮನಮನೆ,ಕೋಲಸಿರ್ಸಿ,ಬಿದ್ರಕಾನ,ಹಾರ್ಸಿಕಟ್ಟಾದಲ್ಲಿ ರೋಡ್ ಶೋ ಹಾಗೂ ಪ್ರಚಾರ ಸಭೆ ನಡೆಸಲಾಯಿತು.