ಹೊನ್ನಾವರ, ಮಂಕಿ ಬ್ಲಾಕ್ ಕಾಂಗ್ರೆಸ್ ನಿಂದ ಸಚೀವ ವೈದ್ಯರಿಗೆ ಸನ್ಮಾನ

ಆದ್ಯೋತ್ ಸುದ್ದಿನಿಧಿ: ಹೊನ್ನಾವರ
ಮಂಕಿ ಬ್ಲಾಕ್ ಕಾಂಗ್ರೆಸ್ ನಿಂದ ಕೆಳಗಿನೂರು ಒಕ್ಕಲಿಗರ ಸಭಾಭವನದಲ್ಲಿ ರಾಜ್ಯದ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯರಿಗೆ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಭೆ ನಡೆಯಿತು.

ಮಂಕಾಳ ವೈದ್ಯ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಲಿದೆ‌ ನನ್ನ ಕ್ಷೇತ್ರದಲ್ಲಿ ಒಬ್ಬ ಬಡವ ನಿಶ್ಚಿಂತೆಯಿಂದ ಮನೆ ಕಟ್ಟುತ್ತಾನೆ.
ಜನತೆ ಸುರಕ್ಷಿತವಾಗಿ, ಸಮರ್ಪಕವಾಗಿ ಇರಲು ಅವಶ್ಯಕ ವಾತಾವರಣವನ್ನು ನಾನು ನೀಡುತ್ತೆನೆ.ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಬದುಕಿದ್ದಾಗ ಎಷ್ಟು ಜನರಿಗೆ ಸಹಾಯ ಮಾಡಬಹುದು ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಾಜಕಾರಣದಲ್ಲಿದ್ದವನು ನಾನು. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಕಾರ್ಯಕರ್ತರಿಗೆ,ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಂತವರು ರಾಜಕೀಯವಾಗಿ ಬೆಳೆಯುವುದು ಕಷ್ಟ. ಕಾರ್ಯಕರ್ತರು ಚುನಾವಣೆಯಲ್ಲಿ ಶ್ರಮಿಸಿದ್ದಾರೆ. ಮಧ್ಯರಾತ್ರಿ ಸಮಯದಲ್ಲಿ ಸಹಾಯಹಸ್ತ ಕೇಳಿದರು ಖಂಡಿತವಾಗಿಯೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಿವೇದಿತಾಆಳ್ವಾ ಮಾತನಾಡಿ,ನಾನು ಈ ಭಾಗದಲ್ಲಿ ಈ ಹಿಂದೆ 2018ರಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸಂಶಿ ತೂಗು ಸೇತುವೆ ನಿರ್ಮಾಣ ಮಾಡುವಾಗ ಸಾಕಷ್ಟು ಸಹಕಾರ ಕೊಟ್ಟಿದ್ದರು.ಇಂದು ಅವರಿಗೆ ಇಡೀ ರಾಜ್ಯಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಹೈ ಕಮಾಂಡ್ ಮಂಕಾಳ ವೈದ್ಯರ ಮೇಲೆ ವಿಶ್ವಾಸ ಇಟ್ಟು ಈ ಸ್ಥಾನ ಕೊಟ್ಟಿದ್ದಾರೆ. ನಮಗೆಲ್ಲರಿಗೂ ಮುಂದೆ ಅಭಿವೃದ್ಧಿ ಆಗುತ್ತದೆ ಎನ್ನುವ ವಿಶ್ವಾಸ ಇದೆ. ಅವರು ನಮ್ಮೆಲ್ಲರ ಜೊತೆ ನಿಂತುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ನಾಮಧಾರಿ ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ ನಾಯ್ಕ ,ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಗೌಡ, ಕೃಷ್ಣ ಗೌಡ, ಗಣಪಯ್ಯ ಗೌಡ, ವನಿತಾ ನಾಯ್ಕ, ಪುಷ್ಪಾ ನಾಯ್ಕ, ಉಷಾ ನಾಯ್ಕ, ವಾಮನ ನಾಯ್ಕ, ಚಂದ್ರಹಾಸ ಕೊಚರೇಕರ್, ಮಂಜುನಾಥ ನಾಯ್ಕ, ಎಂ.ಎನ್.ಸುಬ್ರಹ್ಮಣ್ಯ, ಉಲ್ಲಾಸ ನಾಯ್ಕ, ಯೋಗೇಶ ರಾಯ್ಕರ್,ಹೊನ್ನಾವರ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ಟ, ತಿಮ್ಮಪ್ಪ ಗೌಡ, ಐ.ವಿ.ನಾಯ್ಕ,ಉಪಸ್ಥಿತರಿದ್ದರು.

About the author

Adyot

Leave a Comment