ಸಿದ್ದಾಪುರ 23 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ 23 ಗ್ರಾಪಂನ ಎರಡನೇ ಅವಧಿಯ. ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಮಂಗಳವಾರ ನಡೆದಿದೆ.ಮಹಿಳೆಯರಿಗೆ ಶೇ.50 ಮೀಸಲಾತಿ ನಿಗದಿ ಪಡಿಸಲಾಗಿದೆ

ಸಭೆಯ ನೇತೃತ್ವವಹಿಸಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಚುನಾವಣಾ ಆಯೋಗದ ನಿರ್ದೇಶನದಂತೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ.ಈ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಇರುವುದಿಲ್ಲ. ಯಾವುದೇ ಗೊಂದಲಗಳಿಲ್ಲದೆ ನಡೆಯಲಿದೆ. ಈ ಕುರಿತು ಗೊಂದಲಗಳಿದ್ದಲ್ಲಿ ಸಭೆಯ ನಂತರ ಚರ್ಚಿಸಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ,ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಚುನಾವಣಾ ಆಯೋಗದ ನಿರ್ಧೆಶನದಂತೆ ನಡೆಸುತ್ತಿದ್ದೆವೆ. ೧೯೯೩ ನೇ ಸಾಲಿನಿಂದ ಇಲ್ಲಿಯವರೆಗೆ ಯಾವ ಗ್ರಾಮ ಪಂಚಾಯತನಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗಧಿಯಾಗಿತ್ತು ಎಂಬುದನ್ನು ಸಾಪ್ಟವೇರನಲ್ಲಿ ಅಳವಡಿಸಲಾಗಿದೆ.೨೩ ಪಂಚಾಯತನಲ್ಲಿ ೧೨ ಸ್ಥಾನ ಮಹಿಳೆಗೆ ನಿಗದಿಯಾಗಿದೆ.ಕಾರಣ ಮಹಿಳೆಯರಿಗೆ ೫೦% ಮೀಸಲಾತಿ ಇರುತ್ತದೆ.ಈ ಪ್ರಕ್ರಿಯೆ ವೆಬಸೈಟನ ಮುಖಾಂತರ ಸ್ಕ್ರೀನನಲ್ಲಿ ಈ ಹಿಂದೆ ಗ್ರಾಮ ಪಂಚಾಯತಗೆ ಬಂದಿರುವ ಮೀಸಲಾತಿ ಇನ್ನೂ ಈಗ ಬರುವ ಮಿಸಲಾತಿ ಪಟ್ಟಿ ಕಾಣಿಸಿ ನಿಗಧಿ ಪಡಿಸಲಿದ್ದಾರೆ. ಮತ್ತು ಕೆಲವೊಂದು ಚೀಟಿ ಎತ್ತುವ ಮೂಲಕ ನಿಗದಿಯಾಗಲಿದೆ ಎಂದು ಹೇಳಿದರು.

ಸಹಾಯಕ ಆಯುಕ್ತ ಆರ್. ದೇವರಾಜ ಹಾಗೂ ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ ಗ್ರಾಪಂನ ಸದಸ್ಯರು ಉಪಸ್ಥಿತರಿದ್ದರು.
ಸಿದ್ದಾಪುರ ತಾಲೂಕು ೨೩ ಗ್ರಾಪಂ ಅಧ್ಯಕ್ಷಉಪಾಧ್ಯಕ್ಷ ಮೀಸಲಾತಿ;-
ನಿಲ್ಕುಂದ– ಅಧ್ಯಕ್ಷ-ಸಾಮಾನ್ಯ ಉಪಾಧ್ಯಕ್ಷ -ಸಾಮಾನ್ಯ, ಹೆಗ್ಗರಣಿ– ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಅ ವರ್ಗ, ಅಣಲೇಬೈಲ್-ಅಧ್ಯಕ್ಷ ಅ ವರ್ಗ, ಬ ವರ್ಗ ಮಹಿಳೆ,ಹಸರಗೋಡು– ಅಧ್ಯಕ್ಷ ಸಾಮಾನ್ಯ,ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ತಾರೇಹಳ್ಳಿಕಾನಸೂರು-ಅಧ್ಯಕ್ಷ ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸಾಮಾನ್ಯ ಮಹಿಳೆ,ತ್ಯಾಗಲಿ-ಅ ವರ್ಗ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಹಾರ್ಸಿಕಟ್ಟಾ– ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಬಿದ್ರಕಾನ– ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಅ ವರ್ಗ,ಕೋಲಸಿರ್ಸಿ– ಅಧ್ಯಕ್ಷ ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಅ ವರ್ಗ ಮಹಿಳೆ,ಕಾನಗೋಡು-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ,ಶಿರಳಗಿ-ಅಧ್ಯಕ್ಷ ಅ ವರ್ಗ,ಉಪಾಧ್ಯಕ್ಷ ಸಾಮಾನ್ಯ ಮಹಿಳೆ,ಕವಂಚುರು– ಅದ್ಯಕ್ಷ ಅ ವರ್ಗ ಸಾಮಾನ್ಯ,ಉಪಾದ್ಯಕ್ಷ ಸಾಮಾನ್ಯ ಮಹಿಳೆ,ಮನಮನೆ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಅ ವರ್ಗ ಮಹಿಳೆ,ಹಲಗೇರಿ– ಅಧ್ಯಕ್ಷ ಅ ವರ್ಗ ಮಹಿಳೆ,ಉಪಾಧ್ಯಕ್ಷ ಬ ವರ್ಗ,ಬೇಡ್ಕಣಿ-ಅಧ್ಯಕ್ಷ ಬ ವರ್ಗ,ಉಪಾದ್ಯಕ್ಷ ಸಾಮಾನ್ಯ ಮಹಿಳೆ,ಸೋವಿನಕೊಪ್ಪ– ಅಧ್ಯಕ್ಷ ಸಾಮಾನ್ಯ ಮಹಿಳೆ,ಉಪಾದ್ಯಕ್ಷ ಅ ವರ್ಗ,ಕ್ಯಾದಗಿ– ಅಧ್ಯಕ್ಷ ಅ ವರ್ಗ,ಉಪಾಧ್ಯಕ್ಷ ಸಾಮಾನ್ಯ ಮಹಿಳೆ,ಇಟಗಿ– ಅಧ್ಯಕ್ಷ ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸಾಮಾನ್ಯ,ಬಿಳಗಿ-ಅಧ್ಯಕ್ಷ ಸಾಮಾನ್ಯ,ಉಪಾಧ್ಯಕ್ಷ ಅ ವರ್ಗ ಮಹಿಳೆ,ವಾಜಗೋಡು– ಅಧ್ಯಕ್ಷ ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸಾಮಾನ್ಯ,ದೊಡ್ಮನೆ– ಅಧ್ಯಕ್ಷ ಬ ವರ್ಗ ಮಹಿಳೆ,ಉಪಾಧ್ಯಕ್ಷ ಸಾಮಾನ್ಯ,ತಂಡಾಗುಂಡಿ– ಅಧ್ಯಕ್ಷ ಸಾಮಾನ್ಯ,ಉಪಾಧ್ಯಕ್ಷ ಎಸ್ ಸಿ ಮಹಿಳೆ,ಕೊರ್ಲಕೈ-ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ
——

ಈ ಸಂದರ್ಭದಲ್ಲಿ ಕಾನಗೋಡು ಗ್ರಾಪಂ ಸದಸ್ಯ ಶಿವಾನಂದ ಕಾನಗೋಡು ತಾಲೂಕಿಗೆ ಎಸ್‌ಟಿ ಮೀಸಲಾತಿ ನೀಡದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಕೋಲಸಿರ್ಸಿ ಗ್ರಾಪಂನ ಕೆ.ಆರ್.ವಿನಾಯಕ ಕಳೆದ ಮುರು ಅವಧಿಯಲ್ಲೂ ಕೇವಲ ಮಹಿಳೆಯರಿಗೆ ಮಿಸಲಾತಿ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಇವೆಲ್ಲ ಚುನಾವಣಾ ಆಯೋಗದಿಂದ ನಿಗದಿಯಾಗಿರುತ್ತದೆ ನಮ್ಮ ಹಸ್ತಕ್ಷೇಪ ಇರುವುದಿಲ್ಲ ಎಂದು ಸಮಾಧಾನಪಡಿಸಿದರು.
ಹೆಗ್ಗರಣೆ ಗ್ರಾಪಂನಲ್ಲಿ 2015ರಿಂದ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬರುತ್ತಿದ್ದು ಮೀಸಲಾತಿ ಪ್ರಕ್ರಿಯೆ ಸರಿಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಕಾರಣ ಮೀಸಲಾತಿಯನ್ನು ಪುನರಪರಿಶೀಲನೆ ಮಾಡಬೇಕು ಎಂದು ಹೆಗ್ಗರಣೆ ಗ್ರಾಪಂ ಸದಸ್ಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

About the author

Adyot

Leave a Comment