ಸಿದ್ದಾಪುರ ಬರಪೀಡಿತ ತಾಲೂಕು ಘೋಷಿಸಲು ಆಗ್ರಹ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.೭೭ರಷ್ಟು ಮಳೆ ಕಡಿಮೆಯಾಗಿದ್ದು ಕೂಡಲೇ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕೆಂದು ಉತ್ತರಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ ಬೇಡ್ಕಣಿ ನೇತೃತ್ವದಲ್ಲಿ ಪದಾಧಿಕಾರಿಗಳು ಉಪತಹಸೀಲ್ದಾರ ಡಿ.ಎಂ.ನಾಯ್ಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ ವರ್ಷ ಜೂನ್ ತಿಂಗಳಲ್ಲಿ 394 ಮಿ.ಮಿ. ಮಳೆಯಾಗಿತ್ತು ಆದರೆ ಈ ವರ್ಷ ಇಲ್ಲಿಯವರೆಗೆ ಕೇವಲ 89.3 ಮಿಮಿ ಮಳೆಯಾಗಿದೆ. ಕಳೆದ ನವಂಬರ್ ನಂತರ ಮಳೆಯೇ ಆಗಿಲ್ಲ ಮೇ. ತಿಂಗಳಲ್ಲಿ 27 ಮಿಮಿ ಮಳೆಯಾಗಿದೆ ಇದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಬಾವಿ,ಕೆರೆ,ಹೊಳೆಗಳು ಬತ್ತಿ ಹೋಗಿದೆ. ಅಡಿಕೆ ತೋಟಗಳು ನೀರಿಲ್ಲದೆ ಒಣಗಿದೆ.ಸುಮಾರು 350-400ಹೆ.ಭತ್ತದ ಬಿತ್ತನೆ ಆಗಬಕಿತ್ತು ಆದರೆ ನೀರಿಲ್ಲದ ಕಾರಣ ಬಿತ್ತನೆ ಮುಂದಕ್ಕೆ ಹೋಗುತ್ತಿದೆ ಮುಂದೆ ಮಳೆಯಾದರೂ ಬೆಳೆ ಬೆಳೆಯುವುದು ಕಷ್ಟವಾಗುತ್ತದೆ ಅಡಿಕೆ ಶಿಂಗಾರಗಳು ಒಣಗಿ ಮುಂದೆ ಬೆಳೆ ಸಿಗದ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಸರಕಾರ ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗೀತಾ ಹೆಗಡೆ,ಸಂಚಾಲಕ ಜಿ.ಬಿ.ನಾಯ್ಕ,ಕಾರ್ಯಾಧ್ಯಕ್ಷ ಜಿ.ಟಿ.ನಾಯ್ಕ,ತಾಲೂಕು ಕಾರ್ಯದರ್ಶಿ ಗಂಗಾಧರ ಗೌಡ,ಮುಖಂಡರಾದ ಸೀತಾರಾಮ ನಾಯ್ಕ,ನಾರಾಯಣ ನಾಯ್ಕ,ಶಿವಾನಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
#####
ಅಟೋ,ಕ್ಯಾಬ್,ಖಾಸಗಿಬಸ್ ವಾಹನಗಳ ಮಾಲಿಕರಿಗೆ ಮಾಸಾಶನ ಕೊಡಲು ಆಗ್ರಹ
#####
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈಗಾಗಲೆ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ ಇದು ಒಳ್ಳೆಯದೇ ಆಗಿದ್ದು ಆದರೆ ಇದರಿಂದ ಇನ್ನೂ ಹಲವು ಜನರಿಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾರಿಗೆ ಇಲಾಖೆಯ ಬಸ್‌ಗಳು ತುಂಬಿ ತುಳುಕುತ್ತಿದೆ ಆದರೆ ಜೀವನ ನಡೆಸುವುದಕ್ಕೆಂದು ಅಟೋ,ಕ್ಯಾಬ್,ಖಾಸಗಿ ಬಸ್ ನಡೆಸುತ್ತಿದ್ದವರು ಪ್ರಯಾಣಿಕರಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಇದರಿಂದ ಮಕ್ಕಳ ಶಿಕ್ಷಣ ಸೇರಿದಂತೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಸರಕಾರ ಇಂತಹ ಯೋಜನೆ ಮಾಡುವಾಗ ಸಾಧಕ-ಬಾಧಕವನ್ನು ವಿಚಾರ ಮಾಡಬೇಕಿತ್ತು ಒಬ್ಬರಿಗೆ ಅನುಕೂಲ ಮಾಡಲು ಹೋಗಿ ಇನ್ನೊಬ್ಬರಿಗೆ ಅನ್ಯಾಯ ಮಾಡಬಾರದು ಕೂಡಲೇ ಇಂತಹ ತೊಂದರೆಗೊಳಗಾದ ಜನರಿಗೆ ಮಾಸಾಶನ ಕೊಡಬೇಕು ಇಲ್ಲವಾದರೆ ಇವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೃಹಜ್ಯೋತಿ ಯೋಜನೆ ಜಾರಿಗೊಳ್ಳುವ ಮೊದಲೆ ವಿದ್ಯುತ್ ಬಿಲ್‌ನ್ನು ಹೆಚ್ಚಿಸಿದ್ದಾರೆ ಇದರಿಂದ ಮನೆಬಾಡಿಗೆಗಿಂತ ಹೆಚ್ಚು ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ. ಇದರಿಂದ ಸಣ್ಣ ಕೈಗಾರಿಕಾ ನಡೆಸುವವರು ತೊಂದರೆಗೊಳಗಾಗಿದ್ದಾರೆ ಅವರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸಾಧ್ಯತೆ ಇದೆ. ವಿದ್ಯುತ್ ಬಿಲ್ ಹೆಚ್ಚಳಕ್ಕೆ ಬಿಜೆಪಿ ಸರಕಾರ ಕಾರಣ ಎನ್ನುತ್ತಾರೆ ಆದರೆ ವಿದ್ಯುತ್‌ಬಿಲ್ ಹೆಚ್ಚಳಕ್ಕೆ ಸಹಿ ಹಾಕಿರುವುದು ಸಿದ್ದರಾಮಯ್ಯ ಸರಕಾರ. ಕೂಡಲೇ ವಿದ್ಯುತ್ ಹೆಚ್ಚಳವನ್ನು ಹಿಂಪಡೆಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾರುತಿ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ತಿಮ್ಮಪ್ಪ ಹಿತ್ತಲಕೊಪ್ಪ,ವಿಜೇತ ಗೌಡರ್,ಮಂಜುನಾಥ ಭಟ್ಟ,ಸುರೇಶ ನಾಯ್ಕ ಬಾಲಿಕೊಪ್ಪ,ನಂದನ ಬೋರ್ಕರ್ ಮುಂತಾಧವರು ಉಪಸ್ಥಿತರಿದ್ದರು.
#####
161 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲು ಆಗ್ರಹ
ಶಿರಳಗಿ ಗ್ರಾಪಂನಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಮುಂದೆಯೂ ಇದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುವದು ಎಂದು ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಭಟ್ ತಿಳಿಸಿದರು.

ಪ್ರತಿವರ್ಷ 18 ಲಕ್ಷ ರೂ.ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ದೊರೆಯುತ್ತಿದ್ದು ಆಡಳಿತಾತ್ಮಕ ವೆಚ್ಚಕ್ಕೆ ರಾಜ್ಯ ಸರಕಾರದಿಂದ 10 ಲಕ್ಷ ರೂ.ದೊರೆಯುತ್ತಿದೆ. ಶಾಸಕರ ಅನುದಾನದಲ್ಲಿ 5ಕೋಟಿ ರೂ.ಬಂದಿತ್ತು. ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಈ ಹಿಂದಿನ ವರ್ಷಗಳಲ್ಲಿ ವಸತಿ ಯೋಜನೆಯಲ್ಲಿ ಮನೆಗಳು ದೊರೆಕಿರಲಿಲ್ಲ. ಕಳೆದ ಬಾರಿ 27 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ನಿಕಟಪೂರ್ವ ಶಾಸಕರಾದ ವಿಶ್ವೇಶ್ವರ ಹೆಗಡೆಯವರ ಪ್ರಯತ್ನದಿಂದ ಹೆಚ್ಚುವರಿಯಾಗಿ 161 ಮನೆಗಳು ಬಂದಿದ್ದು ಗ್ರಾಮಸಭೆಯಲ್ಲಿ ಅವುಗಳ ಹಂಚಿಕೆಯಾಗಿದೆ. ಆದರೆ ಈವರೆಗೆ ಕಾರ್ಯಾದೇಶ ಬಂದಿಲ್ಲ. ಇದರಿಂದ ಫನಾಭವಿಗಳಿಗೆ ಸಮಸ್ಯೆಯಾಗಿದೆ. ಕೆಲವರು ಮನೆ ನಿರ‍್ಮಾಣಕ್ಕೆ ವಾಸದ ಮನೆಗಳನ್ನು ತೆರವುಮಾಡಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಮಳೆಗಾಲ ಎದುರಾಗಿರುವದರಿಂದ ಅವರಿಗೆ ತೊಂದರೆಯಾಗಲಿದೆ. ಕೂಡಲೇ ಕಾರ್ಯಾದೇಶ ನೀಡುವಲ್ಲಿ ಸಂಬಂಧಿಸಿದವರು ಮುಂದಾಗಬೇಕು ಎಂದರು.
ಗ್ರಾಪಂನಲ್ಲಿ ಆಡಳಿತಾತ್ಮಕ ತೊಂದರೆ ಇದೆ. ಪಿ.ಡಿ.ಓಗಳಿಗೆ ಎರಡು ಗ್ರಾಪಂಗಳ ಜವಾಬ್ದಾರಿ ಇರುವ ಕಾರಣ ಗ್ರಾಪಂ ಕೆಲಸ ,ಕಾರ್ಯಗಳಲ್ಲಿ ಕೆಲವೊಮ್ಮೆ ವಿಳಂಬವಾಗುತ್ತಿದೆ. ಬಿಲ್ ಕಲೆಕ್ಟರ್ ಕೂಡ ಎರಡು ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ಕಾರಣ ತೆರಿಗೆ ಸಂಗ್ರಹಕ್ಕೆ ತೊಡಕುಂಟಾಗುತ್ತಿದೆ. ನಮ್ಮ ಗ್ರಾಪಂಗೆ ಒಬ್ಬರೇ ಪಿ.ಡಿ.ಓ ಹಾಗೂ ಬಿಲ್ ಕಲೆಕ್ಟರ್ ಒದಗಿಸಿಕೊಡಬೇಕು. ವಿದ್ಯುತ್ ದರ ಏರಿಕೆಯಾಗಿರುವದರಿಂದ ಗೃಹ ಜ್ಯೋತಿ ಯೋಜನೆಗೆ ತೊಡಕುಂಟಾಗುತ್ತಿದೆ. ನೂತನ ಶಾಸಕರು ಗ್ರಾಪಂ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಕೋರಿಕೊಳ್ಳುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷೆ ಲತಾ ರಮೇಶ ನಾಯ್ಕ ಸದಸ್ಯರಾದ ಮಾರುತಿ ನಾಯ್ಕ, ರಾಮ ನಾಯ್ಕ, ಧನಂಜಯ ನಾಯ್ಕ, ನೇತ್ರಾವತಿ ಮಡಿವಾಳ, ಮಹಾಲಕ್ಷ್ಮಿ ನಾಯ್ಕ, ಶಶಿಕಲಾ ಹರಿಜನ ಉಪಸ್ಥಿತರಿದ್ದರು.

About the author

Adyot

Leave a Comment