ಆದ್ಯೋತ್ ಸುದ್ದಿನಿಧಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ. ಇದರ ಅಂಗವಾಗಿ ಹೊನ್ನಾವರ ಮೂಡಗಣಪತಿ ಸಭಾಭವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು.
ಸಮಾವೇಶದಲ್ಲಿ ಮಾತನಾಡಿದ ಸಿ.ಟಿ.ರವಿ,ಕಳೆದ 9 ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆಗಳನ್ನು ಕಾರ್ಯಕರ್ತರಿಗೆ ಮನನ ಮಾಡಬೇಕಾಗಿದೆ.
2014ರ ಪೂರ್ವದಲ್ಲಿ ದೇಶದ ಸ್ಥಿತಿ ಹೇಗಿತ್ತು ಎಂಬುದು ತಿಳಿದುಕೊಳ್ಳಬೇಕು. ಹಿಂದಿನ ಸರ್ಕಾರದ ಆಡಳಿತದಲ್ಲಿ ಹಗರಣದ ಸುದ್ದಿಯಾಗಿತ್ತು. ಆದರೆ ಈ 9 ವರ್ಷಗಳಲ್ಲಿ ಒಂದೇ ಒಂದು ಹಗರಣ ಇಲ್ಲಾ ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿದೆ. ಜನಧನ್ ಖಾತೆ, ಸ್ವಚ್ಛ ಭಾರತ್ ಯೋಜನೆ, ಉಜ್ವಲ ಯೋಜನೆ, ಸೌಭಾಗ್ಯ ಯೋಜನೆ, ದೀನ ದಯಾಳ್ ಉಪಾದ್ಯ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಮುದ್ರಾ ಯೋಜನೆ, ಮೇಕಿಂಗ್ ಇಂಡಿಯಾ ಯೋಜನೆಗಳು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡುವ ಯೋಜನೆಯಾಗಿದೆ.ಕೋವಿಡ್ ಸಂದರ್ಭದಲ್ಲಿ ಎಷ್ಟೋ ದೇಶಗಳು ತತ್ತರಿಸಿ ಹೋಗಿದ್ದವು ಅಂತಹ ಸಂದರ್ಭದಲ್ಲಿ ಉಚಿತವಾಗಿ ವ್ಯಾಕ್ಸಿನ್ ನೀಡಿ ಬೇರೆ ದೇಶಕ್ಕೂ ನೀಡಿದ ಸರ್ಕಾರ ಯಾವುದು ಅಂದರೆ ಅದು ನರೇಂದ್ರ ಮೋದಿ ಸರ್ಕಾರ ಎಂದು ಹೇಳಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಪೂರ್ವ ನೀಡಿದ ಗ್ಯಾರಂಟಿಗೆ ಇದೀಗ ಷರತ್ತು ಹಾಕುತ್ತಿದ್ದಾರೆ. ಯಥಾವತ್ತಾಗಿ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತನ್ನಿ ಇಲ್ಲಾ ಅಂದರೆ ಕೈಲಾಗದವರು ಅಂತಾ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಜನ ತೀರ್ಮಾನ ಮಾಡುತ್ತಾರೆ.ಅರ್ಬನ್ ನಕ್ಸಲ್ ಗ್ಯಾಂಗ್ ಹಾಗೂ ತುಕಡೆ ಗ್ಯಾಂಗ್ ಕಪಿಮುಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಸಿಲುಕೊಂಡಿದೆ ಅದೇ ರೀತಿ ಭಾರತ ದೇಶವು ತುಕಡೆ ಗ್ಯಾಂಗಲ್ಲಿ ಸಿಲುಕ ಬಾರದು ಅಂತಾ ಇದ್ದರೆ ಭಾರತ ವಿಶ್ವಗುರು ಆಗಬೇಕೆಂದರೆ ನರೇಂದ್ರ ಮೋದಿ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರ ನಿರ್ಧಾರದಿಂದ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಚುನಾವಣೆ ಪೂರ್ವ ನೀಡಿದ ಗ್ಯಾರಂಟಿ ಇದೀಗ ಷರತ್ತು ಹಾಕುವ ಮೂಲಕ ಜನತೆಯನ್ನು ಗೊಂದಲಕ್ಕೆ ಒಳಪಡಿಸಿದೆ.ಕಾಂಗ್ರೆಸ್ ಗ್ಯಾರಂಟಿ ಶಬ್ದದ ಮೌಲ್ಯವವನ್ನೆ ಕಳೆದಿದೆ. ದೇಶದ ಹಿತ ರಾಜ್ಯದ ಹಿತದ ವಾತವರಣವನ್ನು ಹಿಂದಿನಿಂದಲೂ ಕಾಂಗ್ರೇಸ್ ಮಾಡದೇ ಜನತೆಯ ಮಧ್ಯೆ ದ್ವೇಷ ಭಾವನೆ ಮೂಡಿಸುತ್ತಲ್ಲೆ ಬಂದಿದೆ.ರಾಜ್ಯದ ಐದು ಗ್ಯಾರಂಟಿಯ ಯೋಜನೆ ಸಮರ್ಪಕ ಜಾರಿಯಾಗದೆ, ಮತಾಂತರ ನಿಷೇದ, ಗೊಹತ್ಯೆ ನಿಷೇದ ಕಾನೂನು ವಾಪಸ್ಸು ಪಡೆಯಲು ಮುಂದಾದರೆ ಅಧಿವೇಶನದ ಒಳಗೂ ಹೊರಗೂ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ,ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ.ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಸಾವಿರ ವಿಶಿಷ್ಟ, ಪ್ರಭಾವಶಾಲಿ ವ್ಯಕ್ತಿಗಳ ಸಂಪರ್ಕಗುರಿ ಹೊಂದಿದ್ದೇವೆ.ಫಲಾನುಭವಿಗಳ ಸಮಾವೇಶ ನಡೆಯುತ್ತದೆ.ಸೊಶಿಯಲ್ ಮಿಡಿಯಾ ಬ್ಲಾಗರ್ಸ್ ಜೊತೆ,ಬುದ್ದಿ ಜೀವಿಗಳ ಜೊತೆ ಸಂವಾದ ನಡೆಸುತ್ತೇವೆ.ಸಂಯುಕ್ತ ಮೊರ್ಚಾ ಸಮಾವೇಶ,ಪ್ರತಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ನಡೆಸುತ್ತೇವೆ.ಅಂತಿಮವಾಗಿ ಪ್ರತಿ ಮನೆ ಮನೆಯನ್ನು ತಲುಪುವ ಯೋಜನೆ ಇದೆ ಎಂದರು.
ಕೆಲವು ಲೋಕಸಭಾ ಕ್ಷೇತ್ರ ಗುರುತಿಸಿ ಅಲ್ಲಿ ಕಳೆದ ಒಂದು ವರ್ಷದಿಂದ ವಿವಿಧ ರೀತಿಯ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.ಪಿಎಮ್ ಅವರೆ ಜನರ ಜೊತೆ ಕನೆಕ್ಟ್ ಆಗಿದ್ದಾರೆ.ಅವರು ತಂದ ಯೋಜನೆ ಜನರು ಗುರುತಿಸಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲಲಿದೆ ಈ ಬಾರಿ ಕಾಂಗ್ರೆಸ್ ನ ಗಣಿತದ ಲೆಕ್ಕಾಚಾರ ನಡೆಯಲ್ಲ. ಲೋಕಸಭಾ ಚುನಾವಣೆ ದೇಶ ಹಿತದ ಚುನಾವಣೆ ಆಗಲಿದೆ.
ರಾಜ್ಯಕ್ಕೆ ಈಗ ಅಕ್ಕಿ ನೀಡುತ್ತಿರುವವರು ಮೊದಿಯವರೆ ವಿನಃ ಸಿದ್ದರಾಮಯ್ಯನವರಲ್ಲ. ಕೇಂದ್ರ ಸರ್ಕಾರ 80ಕೋಟಿ ಜನರಿಗೆ ಆಹಾರ ಧಾನ್ಯ ಪೂರೈಸುವ ನಿರ್ಣಯ ಕೈಗೊಂಡಿದೆ ಮಹಾತ್ಮ ಗಾಂಧಿ ಗೋ ಹತ್ಯೆ ಮಾಡಬಾರದೆನ್ನುವ ನಿಲುವು ಹೊಂದಿದ್ದರು. ಆದರೆ ಕಾಂಗ್ರೆಸ ಸರ್ಕಾರ,ಗೋ ರಕ್ಷಣೆ ಮಾಡಬೇಕಾದ ಪಶುಸಂಗೊಪನೆ ಸಚಿವರು ಗೋ ಹತ್ಯೆ ಕಾಯ್ದೆ ವಾಪಾಸ್ ಪಡೆಯುತ್ತೇವೆ ಅನ್ನುತ್ತಿದ್ದಾರೆ.ಒತ್ತಾಯ ಪೂರ್ವಕ ಮತಾಂತರಕ್ಕೆ ಕಾಂಗ್ರೆಸ್ ಬೆಂಬಲಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುತ್ತಿದೆ. ಅದರ ಬದಲು ಕಾಂಗ್ರೆಸ್ನವರು ಕನ್ವರರ್ಸನ್ ಸೆಲ್ ತೆರೆಯಲಿ ಎಂದರು.
ಈ ಸಮಾವೇಶದಲ್ಲಿ ಮಾಜಿ ಸಚಿವ ಅರಗ ಜ್ಞಾನೇಂದ್ರ, ವ ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ ಮದ್ವರಾಜ್, ಶಾಸಕ ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ, ಮಾಜಿ ಶಾಸಕ ಸುನೀಲ ನಾಯ್ಕ, ರೂಪಾಲಿ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ, ಸುನೀಲ್ ಹೆಗಡೆ ಹಳಿಯಾಳ, ಗೋವಿಂದ ನಾಯ್ಕ ಭಟ್ಕಳ, ಗಿರೀಶ ಪಾಟೀಲ್
ಮುಂತಾದವರು ಉಪಸ್ಥಿತರಿದ್ದರು.