ಆದ್ಯೋತ್ ಸುದ್ದಿನಿಧಿ:
ಶಿರಸಿ ಸ್ವರ್ಣವಲ್ಲಿ ಮಠದಲ್ಲಿ ಸೋಂದಾ ಸ್ವರ್ಣವಲ್ಲೀಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ ಸೋಮವಾರ ಪ್ರಾರಂಭವಾಯಿತು
ಚಾತುರ್ಮಾಸ್ಯದ ಪ್ರಥಮ ದಿನದ ವೇದಿಕೆಯಲ್ಲಿ ಸಮ್ಮಾನ ನಡೆಸಿ ಆಶೀರ್ವಚನ ನೀಡಿದ ಶ್ರೀಗಳು,ವ್ಯಾಸ ಎಂದರೆ ವಿಸ್ತಾರ ಎಂದರ್ಥ. ವ್ಯಾಸರು ದೈವಿ ಪ್ರೇರಣೆಯಿಂದ ಅನೇಕ ಸೂತ್ರಗಳನ್ನು ರಚಿಸಿದರು. ನಮ್ಮ ಧಾರ್ಮಿಕ ಪರಂಪರೆಗೆ ಇದು
ಮೂಲಾಧಾರ. ಹಿಂದೂ ಧರ್ಮ ಇರುವದು ವ್ಯಾಸರ ಸೂತ್ರ, ಶಂಕರರ ಭಾಷ್ಯಗಳು ಕಾರಣದಿಂದ. ಹಿಂದೂ ಧರ್ಮದವರಿಗೆ ವ್ಯಾಸ ಪೂರ್ಣಿಮೆ ಪವಿತ್ರ ದಿನ.ವ್ಯಾಸ ಪೂಜೆ ನಡೆಸಿ ಚಾತುರ್ಮಾಸ್ಯ ವೃತಾಚರಣೆ ಆರಂಭಿಸಲಾಗುತ್ತದೆ. ಸಂಸ್ಕೃತದಲ್ಲಿ ಸಮಾಸ, ವ್ಯಾಸ ಎಂಬ ಎರಡು ಶಬ್ಧವಿದೆ. ಸಮಾಸ ಅಂದರೆ ಸಂಕ್ಷೇಪ. ವ್ಯಾಸ ಎಂದರೆ ವಿಸ್ತಾರ ಎಂದರ್ಥ. ವ್ಯಾಸ ಎಂದರೆ ವಿಶ್ವ ವ್ಯಾಪ್ತಿಯಾಗಿ ಹೊರ ಲೋಕದ ಶಕ್ತಿ ಬರುತ್ತದೆ.ತಪಸ್ಸಿನಿಂದ ಮನಸ್ಸು ವಿಸ್ತಾರವಾಗುತ್ತದೆ. ತಪಸ್ಸಿನಿಂದ ಮನಸ್ಸು ಗಟ್ಟಿಯೂ ಆಗುತ್ತದೆ ಮನಸ್ಸಿಗೆ ಅಂಥ ಶಕ್ತಿಯಾಗುತ್ತದೆ.ವೇದ ವ್ಯಾಸರು ಶಕ್ತಿ ಸಂಪನ್ನರು. ತಪಸ್ಸಿನಿಂದ ಆ ಶಕ್ತಿ ಪಡೆದುಕೊಂಡವರು ಎಂದರು.
ಶಿಕ್ಷಕರು ಕೂಡ ಗುರುವೇ. ಅವನೂ ಕೂಡ ಶಿಷ್ಯರಿಗೆ ಔದಾರ್ಯ ತೋರಿಸುವದು, ಸಹನೆ, ಕ್ಷಮಾ ಗುಣದಿಂದ ಇರಬೇಕು. ಅವೂ ತಪಸ್ಸೇ. ಆಗ ಶಿಕ್ಷಕನ ಮನಸ್ಸೂ ವಿಸ್ತಾರ ಆಗುತ್ತದೆ. ಶಿಕ್ಷಕರ ದಿನಾಚರಣೆ ಆರಂಭಕ್ಕಿಂತ ಮೊದಲೇ ಗುರು ಪೂರ್ಣಿಮೆ ಇದೆ. ಅದು ಮೊದಲಿನಿಂದಲೇ ಇತ್ತು ಹಿಂದೂ ಧರ್ಮದಲ್ಲಿ ಗುರುವಿಗೆ ಇರುವ ಮಹತ್ವ ದೊಡ್ಡದು. ಹಿಂದೂ ಧರ್ಮದ ಶ್ರೇಷ್ಠವಾದದ್ದು ಭಕ್ತಿ ಸಿದ್ಧಾಂತ. ಆಧ್ಯಾತ್ಮ ಸಾಧನೆಯಲ್ಲಿ ಏಕಾಗ್ರತೆ ಸಾಧ್ಯವಿಲ್ಲ. ಭಕ್ತಿ ಪರಿಪೂರ್ಣ ಏಕಾಗ್ರತೆ ಮೂರ್ತಿ ಪೂಜೆ ಇರದೇ ಇದ್ದರೆ ಭಕ್ತಿ ಸಾಧಿಸುವದು ಕಷ್ಟ. ಹಿಂದೂ ಧರ್ಮದಲ್ಲಿ ನೀಡುವಷ್ಟು ಮೂರ್ತಿ ಪೂಜೆ ಬೇರಡೆ ಇಲ್ಲ. ಮೂರ್ತಿ ಪೂಜೆ ಉಳಿಸಬೇಕು ಎಂಬ ಕಾಲಕ್ಕೆ ಬಂದಿದ್ದೇವೆ ಭಗವಂತನ ಪ್ರೇರಣೆಯಂತೆ ಮಹಾ ಪುರಣಾ, ಉಪ ಪುರಾಣ, ವೇದ ವಿಭಾಗಿಸಿದವರು. ಅಪರೂಪದ ಬ್ರಹ್ಮ ಸೂತ್ರ ಬರೆದವರು. ಇದಕ್ಕೆ ಅವರೊಳಗಿನ ತಪಸ್ಸಿನ ಶಕ್ತಿ ಕಾರಣ. ಇದರಲ್ಲಿ ಬ್ರಹ್ಮ ಸೂತ್ರ ಬಹಳ ಮುಖ್ಯವಾದುದು ಎಂದೂ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ ಅಧ್ಯಕ್ಷ
ಅಶೋಕ ಹಾರ್ನಳ್ಳಿ ಮಾತನಾಡಿ, ಸನಾತನ ಧರ್ಮದ ವೈಶಿಷ್ಟ್ಯ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ಸತ್ಯದ ದಾರಿಯಲ್ಲಿ ಸಾಗಲು ಸ್ವರ್ಣವಲ್ಲೀಯಂಥ ಮಠಗಳು ಕಾರಣ. ಭಾರತ ದೇಶದಲ್ಲಿ ಗುರುವಿನ ಮಹತ್ವ ನೀಡಿದವರು ಭಾರತೀಯರು ಎಂದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಎಂ.ಜಿ.ಹೆಗಡೆ ಗಡಿಮನೆ ಫಲ ಸಮರ್ಪಿಸಿದರು.
ಶಂಕರ ಭಟ್ಟ ಉಂಚಳ್ಳಿ, ಡಾ.ಮಹಾಬಲೇಶ್ವರ ಭಟ್ ಕಿರಕುಂಭತ್ತಿ, ವೇದಾ ಹೆಗಡೆ ನೀರ್ನಳ್ಳಿ, ಪ್ರೊ.ಕೆ.ವಿ.ಭಟ್ಟ ಸಮ್ಮಾನ ಪತ್ರ ವಾಚಿಸಿದರು.
ಆರ್.ಎಸ್.ಹೆಗಡೆ ಭೈರುಂಬೆ ನಿರ್ವಹಿಸಿದರು. ಜಿ.ವಿ.ಹೆಗಡೆ ಗೊಡವೆಮನೆ ವಂದಿಸಿದರು. ಇದೇ ವೇಳೆ ಶ್ರೀಗಳ ಲೇಖನಗಳ ಸಂಕಲನ ಗುರುವಾಣಿ ಬಿಡುಗಡೆಗೊಳಿಸಲಾಯಿತು.
ಪ್ರಸಿದ್ಧ ವೈದ್ಯ ದಾವಣಗೆರೆ ಡಾ. ಸೀತಾರಾಮ ರಾ.ಹೆಗಡೆ, ದಕ್ಷ ಆಡಳಿತಗಾರ ರಘುಪತಿ ಭಟ್ಟ ಸುಗಾವಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರನ್ನು ಸ್ವರ್ಣವಲ್ಲೀ ಶ್ರೀಗಳು ಆತ್ಮೀಯವಾಗಿ ಗೌರವಿಸಿದರು.
########
ಶ್ರೀಮನ್ನೆಲೆಮಾವು ಮಾಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಜಿಯವರ ಚಾತುರ್ಮಾಸ್ಯ ಪ್ರಾರಂಭ
ಸಿದ್ದಾಪುರ ಶ್ರೀಮನ್ನೆಲೆಮಾವಿನ ಮಠದ ಪೀಠಾಧೀಶರಾದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿಯವರು ಪ್ರಥಮ ಚಾತುರ್ಮಾಸ್ಯ ವೃತವನ್ನು ಶ್ರೀಮನ್ನಲೆಮಾವಿನ ಮಠದಲ್ಲಿ ಗುರುಪೂರ್ಣಿಮೆ ದಿನವಾದ ಸೋಮವಾರ ವ್ಯಾಸಪೂಜೆಯೊಂದಿಗೆ ಆರಂಭಿಸಿದರು.
ಶಿಷ್ಯರು ಪಾದಪೂಜೆ ಮತ್ತು ಭಿಕ್ಷಾವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿಶ್ರೀಪಾದ ರೈಸದ್, ಶ್ರೀಮಠದ ಆಡಳಿತ ಮಂಡಳಿ ಸದಸ್ಯರು. ಶ್ರೀಮಠದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಶಿಷ್ಯವೃಂದದವರಿದ್ದರು.