ಆದ್ಯೋತ್ ಸುದ್ದಿನಿಧಿ:
ಅಪಘಾತಕ್ಕೀಡಾದ ವ್ಯಕ್ತಿಯೋರ್ವ ಬಹಳ ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗಿನ ಜಾವ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ
ಪರಮೇಶ್ವರ್ ನಾಯ್ಕ್ ದೊಡ್ಡಗದ್ದೆ(ಚಂದ್ರಘಟಗಿ) ಮೃತ ವ್ಯಕ್ತಿಯಾಗಿದ್ದಾನೆ. ಕಳೆದ ಜನವರಿಯಲ್ಲಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕ ಪರಮೇಶ್ವರನಿಗೆ ತೀವ್ರ ಗಾಯವಾಗಿತ್ತು ಆತನನ್ನ ಮಂಗಳೂರಿಗೆ ಚಿಕಿತ್ಸೆಗೆ ದಾಖಲಿಸಿ ಸ್ವಲ್ಪ ಚೇತರಿಸಿಕೊಂಡ ನಂತರ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಶಿರಸಿಯ ಗಣೇಶ ನೇತ್ರಾಲಯ ಆಸ್ಪತ್ರೆಗೆ ಕಣ್ಣುಗಳನ್ನು ನೀಡಲಾಗಿದೆ ಎಂದು ಮೃತರ ಸಹೋದರ ಬಿ ಎಸ್ ಎನ್ ಡಿ ಪಿ ತಾಲೂಕ ಅಧ್ಯಕ್ಷ ವಿನಾಯಕ ನಾಯ್ಕ ತಿಳಿಸಿದ್ದಾರೆ.