ನಾನು ಮುಖ್ಯಮಂತ್ರಿ ಆಗಿಲ್ಲ,ಕಾಂಗ್ರೆಸ್ ನನ್ನನ್ನು ಮುಖ್ಯಮಂತ್ರಿ ಮಾಡಬಹುದು-ಆರ್.ವಿ.ದೇಶಪಾಂಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆಯವರು ಸುದ್ದಿಗೋಷ್ಠಿ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿಯಲ್ಲಿ ಮಳೆಯಾಗಿದೆ. ಆದರೆ ಘಟ್ಟದ ಮೇಲಿನ ಹಳಿಯಾಳ, ಮುಂಡಗೋಡ ದಾಂಡೇಲಿ, ಯಲ್ಲಾಪುರ, ಶಿರಸಿ, ಭಾಗದಲ್ಲಿ ಮಳೆ ಸರಿಯಾಗಿ ಆಗಿಲ್ಲ ಹಳಿಯಾಳದಲ್ಲಿ ಮಳೆ ಇಲ್ಲದೇ ಬೆಳೆ ಸತ್ತು ಹೋಯಿತು. ಅದಕ್ಕೆ ಪರಿಹಾರ ಕೊಡುವ ಕೆಲಸ ಶೀಘ್ರ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಕಂದಾಯ ಸಚಿವರಿಗೆ ಮನವಿ ಮಾಡಿದ್ದು, ಮಳೆಯ ಕಾರಣದಿಂದ ಹಾನಿಯಾಗಿದ್ದರೆ, ಪರಿಹಾರ ಕೊಡಲು ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದರು.

ಅರಣ್ಯ ಹಕ್ಕು ಕಾಯ್ದೆಯನ್ನು ಕೇಂದ್ರದ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಆದರೆ, ಸಮರ್ಪಕ ವಿಚಾರಣೆ ಮಾಡದೇ ಜಿಲ್ಲೆಯ 67,000 ಅರ್ಜಿಗಳನ್ನು ತಿರಸ್ಕಾರ ಮಾಡಲಾಯಿತು. ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ, ಹಿಂದಿನ‌ ಸರ್ಕಾರ ಅರ್ಜಿಗಳ ಮರು ಪರಿಶೀಲನೆಗೆ ಕ್ರಮ ವಹಿಸಿಲ್ಲ.ಇದಕ್ಕೆ ಪರಿಹಾರ ಕಂಡು ಹಿಡಿಯಲು ಯತ್ನಿಸಲಾಗುವುದು ಜೊಯಿಡಾ ಅಣಶಿ ಭಾಗದಲ್ಲಿ ಅರಣ್ಯಾಧಿಕಾರಿಗಳು 4 ಎಕರೆ ತೋಟ ಕಡಿಯುತ್ತಿದ್ದಾರೆ. ಕುಟುಂಬಕ್ಕೆ 15 ಲಕ್ಷಕ್ಕೆ ಪರಿಹಾರ ಕೊಟ್ಟಿದ್ದಾರೆ. ಆದರೆ, ಜಮೀನಿಗೆ ಪರಿಹಾರ ಕೊಟ್ಟಿಲ್ಲ. ಅರಣ್ಯ ಇಲಾಖೆ ಪರಿಹಾರ ಕೊಟ್ಟರೆ ಜಮೀನು ಅವರೇ ಪಡೆಯಲಿ. ಅದನ್ನು ಬಿಟ್ಟು ಹಣ ಖರ್ಚು ಮಾಡುವ ಸಲುವಾಗಿ ತೋಟಗಾರಿಕೆ ಗಿಡಗಳನ್ನು ಕಡಿಯಬಾರದು ಎಂದು ಸೂಚಿಸಿದ್ದೇನೆ ಎಂದರು.

ಬಿಜೆಪಿ ಪ್ರತಿ ದಿನ ಶಾಸನ ಸಭೆ ಒಳಗೆ, ಹೊರಗೆ ನಮ್ಮ ಸರ್ಕಾರದ ಮೇಲೆ ದಾಳಿ ಮಾಡುತ್ತಿದೆ. ನಮ್ಮ ಕಾಂಗ್ರೆಸ್ ಪಕ್ಷವು ಗ್ಯಾರಂಟಿಯಿಂದಲೇ ನಿಮ್ಮನ್ನು ಸೋಲಿಸಿದ್ದೇವೆ ಗ್ಯಾರಂಟಿಗೆ ಜಾರಿಗೆ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುದಾನ ಇಟ್ಟಿದ್ದಾರೆ ಎಂದು ಹೇಳಿದ ದೇಶಪಾಂಡೆಯವರು ಬಿಜೆಪಿ ಪಕ್ಷದವರು ಖಾಲಿ ಖಜಾನೆ ಕೊಟ್ಟು ಹೋಗಿದ್ದಾರೆ. ಅನುದಾನ ಇಲ್ಲದೇ ಕಾಮಗಾರಿ ಘೋಷಣೆ ಮಾಡಿ, ಅಡಿಗಲ್ಲು ಹಾಕಿ‌ ಹೋಗಿದ್ದಾರೆ. ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವುದು ಅವರ ಕಾರ್ಯವಾಗಿದೆ ಎಂದರು.
ಅವ್ಯವಸ್ಥೆಗಳ ಆಗರವಾಗಿರುವ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಟೋಲ್ ಬಂದ್ ಮಾಡ ಬೇಕು.ಇದು ಅನಧಿಕೃತ ಟೋಲ್ ವಸೂಲಿಯಾಗಿದೆ ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನಿಲ್ಲ ಎಂದರು.

ದೇಶಪಾಂಡೆಯವರು ರಾಜಕೀಯದಲ್ಲಿ ಎಲ್ಲಾ ಹುದ್ದೆಯಲ್ಲಿ ಅಲಂಕರಿಸಿದ್ದು ಅವರಿಗೆ ಈ ಸಲ ಕಾಂಗ್ರೆಸ್ ಪಕ್ಷದವರು ಯಾವುದೇ ಹುದ್ದೆ ನೀಡದೇ ಸಚಿವ ಸಂಪುಟದಿಂದ ದೂರವಿಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆಯವರು,ನಾನು ರಾಜಕೀಯದಲ್ಲಿ ಎಲ್ಲಾ ಹುದ್ದೆಯನ್ನು ಅಲಂಕರಿಸಿದ್ದೆನೆ ಮುಖ್ಯಮಂತ್ರಿ ಆಗಿಲ್ಲ ಬಹುಶಃ ಪಕ್ಷ ನನ್ನನ್ನು ಆ ಸ್ಥಾನಕ್ಕಾಗಿ ಮೀಸಲಿಟ್ಟಿರಬೇಕು.ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಇವರಿಗೆ ಯಾವುದೇ ಚರ್ಚೆ ನಡೆದಿಲ್ಲ ನಮ್ಮಲ್ಲಿ ಮೂರು ಜನರೇ ಹೆಸರಿನ ಬಗ್ಗೆ ಸ್ಥಳೀಯವಾಗಿ ಚರ್ಚೆ ನಡೆಯುತ್ತಿದ್ದರೂ ಯಾವುದೇ ಲೋಕಸಭಾ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಣಯವಾಗಿಲ್ಲವೆಂದು ಸ್ಪಷ್ಟಪಡಿಸಿದರು.

About the author

Adyot

Leave a Comment