ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ಸನವಳ್ಳಿ ಗ್ರಾಮದ ರೈತ ಈರಪ್ಪ ಮಲ್ಲಪ್ಪ ಕೆರೆಹೊಲದವರ ಎನ್ನುವ ವ್ಯಕ್ತಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದ.
ಸನವಳ್ಳಿ ಗ್ರಾಮದ ರೈತ ಈರಪ್ಪ
ಯಲ್ಲಪ್ಪ ಕೆರೆಹೊಲದವರ(68) ತನ್ನ ಹೊಲದಲ್ಲಿ ವಿದ್ಯುತ್ ಕಂಬದಿಂದ
ಬೋರವೆಲ್ ಗೆ ವಿದ್ಯುತ್ ಸಂಪರ್ಕ ಮಾಡಿದ್ದು,ಇದರ ಸರ್ವೀಸ್ ಲೈನ್ ಹರಿದು ಬಿದ್ದಿದೆ ಅಲ್ಲಿ ಓಡಾಡಿಕೊಂಡಿದ್ದ ಈತನ ಎತ್ತು ವಿದ್ಯುತ್ ತಂತಿಯನ್ನು ತುಳಿದು ಮೃತಪಟ್ಟಿದೆ.ಅದೇ ವೇಳೆಗೆ ಅಲ್ಲಿಗೆ ಬಂದ ರೈತ ಈರಪ್ಪ ಯಲ್ಲಪ್ಪ ಕೆರೆಹೊಲದವರ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಎತ್ತನ್ನು ಬರಿಗೈನಲ್ಲಿ ಎತ್ತಲು ಹೋಗಿ ಆತನಿಗೂ ವಿದ್ಯುತ್ ಶಾಕ್ ಹೊಡೆದು ಬಿದ್ದಿದ್ದಾನೆ.
ಈ ವಿಷಯ ಕುಟುಂಬದವರ ಗಮನಕ್ಕೆ ಬಂದೊಡನೆ ಮುಂಡಗೋಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯದಲ್ಲೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.