ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಹಾಳದಕಟ್ಟಾದಲ್ಲಿ ಬುಧವಾರ
ಬೈಕ್‌ನಲ್ಲಿ ಸಾಗಿಸುತ್ತಿದ್ದ ೧.೨೫ ಲಕ್ಷರೂ. ಮೌಲ್ಯದ ೩೧.೩೧೦ ಕೆ.ಜಿ.ಶ್ರೀಗಂಧದ ತುಂಡುಗಳನ್ನು ಸ್ಥಳೀಯ ಪೊಲೀಸ್‌ರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಹಸವಂತೆಯ ಹನುಮಂತ ದ್ಯಾವಾ ನಾಯ್ಕ ಆರೋಪಿಯಾಗಿದ್ದು ಪಟ್ಟಣದ ಮನೆಯೊಂದರ ಕಂಪೌಂಡನಲ್ಲಿದ್ದ ಗಂಧದ ಮರವನ್ನು ಕಡಿದು ಐದು ತುಂಡುಗಳನ್ನಾಗಿ ಮಾಡಿ ಬೈಕ್ ನಲ್ಲಿ ಸಾಗಿಸುತ್ತಿದ್ದಾಗ ಹಣಜೀಬೈಲ್ ಕ್ರಾಸ್‌ನಲ್ಲಿ ಪಿಎಸ್‌ಐ ಅನಿಲ್ ಎಂ. ಹಾಗೂ ಸಿಬ್ಬಂದಿಗಳು ತಡೆದು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
########
ಬಿರುಸುಗೊಂಡ ಮಳೆ,ಗಾಳಿ ಮನೆ ಕುಸಿತ
ಕಳೆದ ಒಂದು ವಾರದಿಂದ ಸಿದ್ದಾಪುರ ತಾಲೂಕಿನಲ್ಲಿ ಮಳೆ ಚುರುಕುಗೊಂಡಿದ್ದು ಮಂಗಳವಾರ ರಾತ್ರಿಯಿಂದ ಮಳೆ ಹಾಗೂ ಗಾಳಿ ಬಿರುಸುಗೊಂಡಿದೆ. ಇದರಿಂದ ಕಾನಸೂರಿನ ನಾಗರಾಜ ದುರ್ಗಪ್ಪ ನಾಯ್ಕ ಎನ್ನುವವರ ಮನೆಗೆ ಹೊಂದಿಕೊಂಡಂತಿದ್ದ ಹಿಟ್ಟಿನಗಿರಣಿಯ ಮೇಲೆ ಮರ ಬಿದ್ದು ಸುಮಾರು ಹತ್ತುಸಾವಿರರೂ.ಹಾನಿಯಾಗಿದೆ.
ಹಲಗೇರಿ ಗ್ರಾಪಂ ವ್ಯಾಪ್ತಿಯ ಕೋಡ್ಕಣಿ,ಜೋಗಿನಮಠದ ಮಾಣಿ ಜಟ್ಯಾ ನಾಯ್ಕ ಎನ್ನುವವರ ಮನೆಯ ಹಿಂದಿನ ಭಾಗದ ಮೇಲೆ ಮರ ಬಿದ್ದು ಸುಮಾರು ಹತ್ತುಸಾವಿರರೂ. ಹಾನಿಯಾಗಿದೆ.