ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸುದ್ದಿಗೋಷ್ಠಿ ನಡೆಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಕಾನೂನನ್ನು
ಜಾರಿಗೆ ತಂದು ನಂತರ ಕೃಷಿಕರಿಂದ ವಿರೋಧ ವ್ಯಕ್ತವಾದಾಗ, ಒತ್ತಾಯದ ಮೇರೆಗೆ ಕೃಷಿಕರನ್ನು ಕರೆಯದೆಯೇ ವಾಪಸ್ ಪಡೆದುಕೊಂಡಿದೆ.ಆದರೆ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರಕಾರ ಕೃಷಿಕಾಯ್ದೆಯನ್ನು ವಾಪಸ್ಸ್ ಪಡೆದಿರಲಿಲ್ಲ.
ಅಂದು ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು
ನಮ್ಮನ್ನು ಮನೆಗೆ ಕರೆದು ಕೃಷಿ ಕಾಯ್ದೆಯಿಂದ ಆಗುವ ತೊಡಕುಗಳ ಬಗ್ಗೆ ಚರ್ಚೆ ಮಾಡಿದ್ದರು. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ನ್ನು ಬೆಂಬಲಿಸಿದ್ದೆವು ಆದರೆ ಈಗ ಕೃಷಿ ಕಾಯ್ದೆ ಹಿಂಪಡೆಯಲು ಮೀನಾಮೇಷ ಮಾಡುತ್ತಿದ್ದಾರೆ ಈಗ ಅವರ
ಸರಕಾರವಿದೆ. ಆಗ ನೀವು ಕೊಟ್ಟ ಮಾತು ಏನು?. ಅದನ್ನು ಬಳಸಿಕೊಂಡು ಪಡೆದ ರಾಜಕೀಯ ಲಾಭ ಏನು? ಈಗ ಮಾಡುತ್ತಿರುವ ನಾಟಕವೇನು? ಕೃಷಿ ಕಾಯ್ದೆ ಹಿಂಪಡೆಯಲು ಪರಿಶೀಲನೆ ಮಾಡುತ್ತಿದ್ದೇವೆ ಎಂದರೆ ಇದರ ಅರ್ಥವೇನು. ಕೊಟ್ಟ ಮಾತಿನಂತೆ ಕೃಷಿ ಕಾಯಿದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿಯವರಿಗೂ ಸಿದ್ದರಾಮಯ್ಯನವರಿಗೂ ಹೊಂದಾಣಿಕೆ ಇದೆಯೆ? ಭೂ ಸುಧಾರಣಾ ಕಾಯ್ದೆ ವಾಪಸ್ ಪಡೆಯಲು ನಿಮಗೆ ನಿಜವಾಗಲೂ ಶಕ್ತಿ ಇದೆಯೇ? ಈ ಕಾಯ್ದೆಯಿಂದ ಭೂಮಿ ಮಾರಾಟ ಬಲು ಜೋರಾಗಿದೆ. ಅದರ ಮೌಲ್ಯ 4000 ಕೋಟಿಯಿಂದ 25,000 ಕೋಟಿಗೆ ಮುಟ್ಟಿದೆ
ಇದರ ಲಾಭ ನಿಮಗೂ ಸಿಗುತ್ತಿರುವ ಹಾಗಿದೆ ಎಂದು ಹೇಳಿದರು.
ಗೋ ಹತ್ಯೆಯನ್ನು ಕೈಬಿಡಲಿಕ್ಕೆ ಹೋಗಬಾರದು. ಇದು ರೈತರ ವಿಷಯ. ಗೋ ಹತ್ಯೆ ವಿಷಯದಲ್ಲಿ ಸ್ವಾಮೀಜಿಯವರಾಗಲಿ, ಪಕ್ಷದವರಾಗಲಿ, ಸರ್ಕಾರಗಳಾಗಲಿ ತಲೆ ಹಾಕಬಾರದು. ಹೈನುಗಾರಿಕೆ,ಕೃಷಿ, ಕೃಷಿ ಮಾರುಕಟ್ಟೆ ಇದು ಎಲ್ಲವೂ ಕೂಡ MNC ಮಾರುಕಟ್ಟೆಯಾಗಿದೆ. ನಮ್ಮ ಕಾರ್ಪೊರೇಟ್ ಗಳಿಗೆ ಹೈನುಗಾರಿಕೆಯ ಮೇಲೆ ತೀವ್ರ ನಿಗಾ ಇದೆ. ಕೇಂದ್ರದ ಸಹಕಾರಿ ಸಚಿವರಾದ ಅಮಿತ್ ಶಾ ಮಂಡ್ಯಕ್ಕೆ ಬಂದಾಗ ನಂದಿನಿಯನ್ನು ಅಮೂಲ್ ಜೊತೆ ಸೇರಿಸೋಣ ಎಂದಿದ್ದರು. ಹೈನುಗಾರಿಕೆ ಇದು ವಿಪರೀತ ಬೇಡಿಕೆ ಇರುವ ಕ್ಷೇತ್ರ. ರೈತರ ಕೈಯಲ್ಲಿ ಹೈನುಗಾರಿಕೆ ಇರಬೇಕು.ಗೋ ಹತ್ಯೆ ಸ್ವಾಭಾವಿಕವಾದ ಪ್ರಕ್ರಿಯೆ. ರೈತರ ವಿಷಯಕ್ಕೆ ಸರ್ಕಾರಗಳಾಗಲಿ ಇತರೆ ಯಾರು ಕೈ ಹಾಕಬಾರದು. ಇತ್ತೀಚೆಗೆ ಸ್ವಾಮಿಗಳು ಕೂಡ ಮಾತನಾಡುತ್ತಾರೆ. ಗೋ ಹತ್ಯೆ ಕಾಯ್ದೆ ವಾಪಸ್ಸು ಪಡೆಯಬಾರದೆಂದುಹೇಳುತ್ತಾರೆ.ಸ್ವಾಮಿಜಿಗಳು ಈ ವಿಷಯವನ್ನು ರೈತನ ನಿರ್ಧಾರಕ್ಕೆ ಬಿಡಬೇಕು .ಇದು ರೈತನ ಆರ್ಥಿಕತೆಯ ಮೇಲೆ ಒಳ ಪಡಬಹುದಾದ ಬಹಳ ದೊಡ್ಡ ಪೆಟ್ಟು. ಎಲ್ಲಾ ಪ್ರಕ್ರಿಯೆಯ ಒಂದು ಲಾಭಾಂಶದ ಉದ್ದೇಶವಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.