ಸಿದ್ದಾಪುರ ತಾಲೂಕಿನಲ್ಲಿ ಅಬ್ಬರಿಸುತ್ತಿರುವ ಮಳೆ,ಗಾಳಿ

ಆದ್ಯೋತ್ ಸುದ್ದಿ‌ನಿಧಿ:
ಸಿದ್ದಾಪುರ ತಾಲೂಕಿನಲ್ಲಿ ಕಳೆದ ಎರಡು ದಿನದಿಂದ ಮಳೆ-ಗಾಳಿ ಅಬ್ಬರಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಕ್ಯಾದಗಿ ಗ್ರಾಮದ ಲೋಪಗೋಡನಲ್ಲಿ ಗದ್ದೆಯ ಮೇಲ್ಗಡೆ ಇರುವ ಹೊರಗಾಲುವೆಯು ಗಜಾನನ ಕನ್ನ ನಾಯ್ಕ ಮನೆಯ ಹತ್ತಿರ ಕುಸಿದು ಹಾನಿಯಾಗಿದೆ. ಮಳೆ ಹೆಚ್ಚಾದಲ್ಲಿ ಧರೆಕುಸಿದು ಮನೆಗೆ ಹಾನಿಯಾಗುವ ಸಂಭವವಿದೆ.ಆದ್ದರಿಂದ ಗಜಾನನ ನಾಯ್ಕ ಕುಟುಂಬದವರನ್ನು ಸಮೀಪದ ಅಳ್ಳಿಮಕ್ಕಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ಮನಮನೆ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ
ಮಾಬ್ಲೇಶ್ವರ ಗಣೇಶ ನಾಯ್ಕರವರ ಮನೆಯಲ್ಲಿ ವಿದ್ಯುತ ಸಂಪರ್ಕ,ಟಿವಿ,ಮಂಚ ಹೊಲಿಗೆ ಮಷಿನ್ ಸೇರಿದಂತೆ ಮನೆಯ ಉಪಕರಣಗಳು ಸುಟ್ಟು ಹೋಗಿದ್ದು ಸುಮಾರು 2.80ಲಕ್ಷರೂ.ನಷ್ಟವಾಗಿದೆ.


ಶಿರಳಗಿಯ ದಯಾನಂದ ನಾಯ್ಕ ಎನ್ನುವವರ ಗರ್ಭಿಣಿ ಎಮ್ಮೆ ವಡಗೇರಿ ಸಮೀಪ ಹರಿಯುವ ನೀರಿಗೆ ಬಿದ್ದು ಮೃತಪಟ್ಟಿದೆ.

ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಈ ಆದೇಶದನ್ವಯ ಸಿದ್ದಾಪುರ ತಾಲೂಕಿನ ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜ್ ಗಳಿಗೆ ಸೋಮವಾರ ರಜೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ತಿಳುಸಿದ್ದಾರೆ‌

.

About the author

Adyot

Leave a Comment