ಆದ್ಯೋತ್ ಸುದ್ದಿನಿಧಿ:
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಹೊರಟಿದ್ದಾರೆ ಎಂಬ ಸುದ್ದಿಯ ನಡುವೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಬನವಾಸಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಹೆಬ್ಬಾರ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಡುತ್ತಿರುವ ಬಗ್ಗೆ ಪ್ರಸ್ತಾಪಿಸಿ ಬಿಜೆಪಿ ತೊರೆಯದಂತೆ ಒತ್ತಾಯಿಸಿದರು.
ಶಿವರಾಮ ಹೆಬ್ಬಾರ ಮಾತನಾಡಿ,ನಾನು ಎಲ್ಲಿಯೂ ಬಿಜೆಪಿ ಪಕ್ಷ ಬಿಡುತ್ತೇನೆ ಅಂತ ಹೇಳಿಲ್ಲ ಆದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹಲವು ಉನ್ನತ ಹುದ್ದೆಯನ್ನು ಹೊಂದಿರುವ ಕೆಲ ಪ್ರಮುಖ ಪದಾಧಿಕಾರಿಗಳು ನನ್ನ ಸೋಲಿಸಲು ಬಹಿರಂಗವಾಗಿ ಪಕ್ಷ ವಿರೋಧಿ ಕೆಲಸ ಮಾಡಿರುತ್ತಾರೆ. ಅವರ ವಿರುದ್ಧ ಪಕ್ಷದ ಶಿಸ್ತು ಸಮಿತಿಗೆ ದೂರು ನೀಡಿದ ನಂತರವು ಸಹ ಪಕ್ಷದ ವಿರುದ್ಧ ಕೆಲಸ ಮಾಡಿದ ಈ ಪದಾಧಿಕಾರಿಗಳು ಪಕ್ಷದ ವೇದಿಕೆಯ ಮೇಲೆ ದೊಡ್ಡ ದೊಡ್ಡ ಭಾಷಣ ಮಾಡುತ್ತಿದ್ದಾರೆ. ನಮ್ಮ ಅವರ ನಡುವೆ ಅಂತರ ಇದ್ದಾಗಲೂ ಸಹ ನನ್ನ ಸೋಲಿಸುವ ಉದ್ದೇಶದಿಂದ ಬಿಜೆಪಿಯ ಚಿನ್ಹೆಯನ್ನು ಸೋಲಿಸಲು ಹೊರಟವರು ಹೇಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಆಗುತ್ತಾರೆ?ಎಂದು ಪ್ರಶ್ನಿಸಿದರು.
ಪಕ್ಷದ ಕನಿಷ್ಠ 1000 ಸಾವಿರ ಮುಖಂಡರು ಪ್ರಮುಖ ಪದಾಧಿಕಾರಿಗಳು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಇವರ ಹಿಂದಿರುವ ಆ ಒಂದು ಶಕ್ತಿ ಯಾವುದು ಕಾರ್ಯಕರ್ತನಿಗೆ ತಿಳಿಯಬೇಕು. ನನಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಿಂದ ಮೋಸ ಆಗಿಲ್ಲ.ಪಕ್ಷದ ಶಿಸ್ತು ಸಮಿತಿ ಈ ಪಕ್ಷ ವಿರೋಧಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುತ್ತದೆ ಎನ್ನುವ ಆಶಯ ಇದೆ ಇಲ್ಲವಾದರೆ ಇವರಿಂದ ಪಕ್ಷ ಸಂಘಟನೆ ಹೇಗೆ ಮಾಡೋದು ಎಂದು ಹೇಳಿದರು.