ಸಿದ್ದಾಪುರ: ದರೋಡೆ ನಡೆಸುತ್ತಿದ್ದ ದರೋಡೆಕೋರರನ್ನು ಪೊಲೀಸ್ ರಿಗೆ ಒಪ್ಪಿಸಿದ ಗ್ರಾಮಸ್ಥರು

ಆದ್ಯೋತ್ ಸುದ್ದಿನಿಧಿ:
ರಸ್ತೆಯಲ್ಲಿ ಹೋಗುತ್ತಿರುವವರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಇಬ್ಬರು ದರೋಡೆಕೋರರನ್ನು ಥಳಿಸಿ ಪೊಲೀಸ್ ರಿಗೆ ಒಪ್ಪಿಸಿದ ಘಟನೆ ಸಿದ್ದಾಪುರ ತಾಲೂಕಿನ ತಟ್ಟಿಕೈ ಗ್ರಾಮದಲ್ಲಿ ನಡೆದಿದೆ.

ಶಿರಸಿ ಬನವಾಸಿ ರಸ್ತೆಯ ಹಂಚಿನಕೇರಿಯ ಶಹೀದ್ ಇಸ್ಮಾಯಿಲ್ ಶೇಖ್ ಹಾಗೂ ಶಿವಮೊಗ್ಗ ಟಿಪ್ಪುನಗರದ ಇರ್ಪಾನ್ ಪಾಷಾ ಜನರಿಂದ ಥಳಿತಕ್ಕೊಳಗಾಗಿ ಆಸ್ಪತ್ರೆಗೆ ಸೇರಿರುವ ದರೋಡೆಕೋರರಾಗಿದ್ದಾರೆ.


ಶಿರಸಿಯಲ್ಲಿ ಬೈಕ್ ಅಪಹರಿಸಿದ್ದ ಈ ದರೋಡೆಕೋರರು
ದೇವಿಮನೆ ಘಟ್ಟದಲ್ಲಿ ಕೋಳಿಯನ್ನು ಸಾಗಿಸುತ್ತಿದ್ದ ಬೊಲೊರೊ ಗಾಡಿಯನ್ನು ಅಡ್ಡಗಟ್ಟಿ ಬೆದರಿಸಿ ಹಣಕಿತ್ತುಕೊಂಡಿದ್ದಾರೆ
ಸಿದ್ದಾಪುರ-ತಟ್ಟಿಕೈ ಮಾರ್ಗದಲ್ಲಿ ಕಂಚಿಕೈ ಸಮೀಪ ಮೂತ್ರವಿಸರ್ಜನೆಗೆ ನಿಲ್ಲಿಸಿದ್ದ ಯುವಕನಿಗೆ ಚಾಕು ತೊರಿಸಿ ಹಣದರೋಡೆ ಮಾಡುವಾಗ ಗ್ರಾಮಸ್ಥರು ಗಮನಿಸಿ ಇಬ್ಬರ ಹೆಡಮುರಿಗೆ ಕಟ್ಟಿ ಪೊಲೀಸ್ ರಿಗೆ ಒಪ್ಪಿಸಿದ್ದಾರೆ.

ದರೋಡೆಗೆ ಒಳಗಾಗಿದ್ದ ದೇವನಹಳ್ಳಿ ಕುದ್ರಗೋಡ ಗ್ರಾಮದ ಸುಬ್ರಹ್ಮಣ್ಯ ಸರ್ವಾ ಗೌಡ ದೂರು ನೀಡಿದ್ದು
ಸಿದ್ದಾಪುರ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದರೋಡೆಕೋರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಇಬ್ಬರು ದರೋಡೆ

About the author

Adyot

Leave a Comment