ಸಿದ್ದಾಪುರದಲ್ಲಿ ದಿ.ರಾಮಕೃಷ್ಣ ಹೆಗಡೆಯವರ 98ನೇ ಜನ್ಮ ದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಧನ್ವಂತರಿ ಅಯುರ್ವೇದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶಿಕ್ಷಣ ಪ್ರಸಾರಕ ಸಮಿತಿ, ರಾಮಕೃಷ್ಣ ಹೆಗಡೆ ಚಿರಂತನ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರನಾಯಕ ರಾಮಕೃಷ್ಣ ಹೆಗಡೆ ಅವರ ೯೮ನೇ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಚಿಂತನೆ ರಾಮಕೃಷ್ಣ ಹೆಗಡೆ ಮತ್ತು ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ,
ಸರಳ ವ್ಯಕ್ತಿತ್ವದ ದೂರದೃಷ್ಟಿಯುಳ್ಳ ಯಾವುದೇ ಜಾತಿ,ಮತ,ಧರ್ಮಗಳ ಬೇಧ-ಭಾವ ಮಾಡದ ಮಹಾನ್ ನಾಯಕ ರಾಮಕೃಷ್ಣ ಹೆಗಡೆಯವರಾಗಿದ್ದರು.
ಹೆಗಡೆಯವರು ಯಾವುದೇ ಒಂದು ಪ್ರದೇಶಕ್ಕೆ ಸೀಮಿತರಾದವರಲ್ಲ. ಹೆಗಡೆ ಅವರ ಅಂದಿನ ಮೌಲ್ಯಾಧಾರಿತ ರಾಜಕಾರಣ ಇಂದು ಕಂಡುಬರುತ್ತಿಲ್ಲ. ಇಂದಿನ ರಾಜಕೀಯದಲ್ಲಿ ಮೌಲ್ಯಾಧಾರ ಎನ್ನುವುದು ಅರ್ಥಕಳೆದುಕೊಂಡಿದೆ
ಮಹಿಳೆಯರ ಸಮಸ್ಯೆಯ ಬಗ್ಗೆ ಅವರಿಗೆ ಅರಿವಿತ್ತು ಆದ್ದರಿಂದಲೇ ಹೆರಿಗೆ ಭತ್ಯೆಯಂತಹ ಯೋಜನೆಯನ್ನು ಜಾರಿಗೆ ತಂದಿದ್ದರು ವಿಧವಾ ವೇತನ ತರುವ ಮೂಲಕ ಅಸಹಾಯಕ ಮಹಿಳೆಯರಿಗೆ ಆಸರೆಯಾದರು ಮಹಿಳೆಯರಿಗೆ ಮೀಸಲಾತಿಯನ್ನು ಕೊಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಹಾಕಿದರು ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಪ್ರಮೋದ ಹೆಗಡೆ ಯಲ್ಲಾಪುರ,ವ್ಯಕ್ತಿಗತವಾಗಿ ನೋಡಿದ ಸಮಸ್ಯೆಗಳನ್ನು ಸಾಮೂಹಿಕವಾಗಿ ನೋಡಿ ಶಾಶ್ವತವಾಗಿ ಸಮಸ್ಯೆಯ ನಿವಾರಣೆಗಾಗಿ ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ಇಂದಿಗೂ ಜಾರಿಯಲ್ಲಿದೇ ಎಂದರೆ ರಾಮಕೃಷ್ಣ ಹೆಗಡೆ ಅವರ ದೂರದರ್ಶಿತ್ವ ಎಲ್ಲರಿಗೂ ಮಾದರಿಯಾದದ್ದು ರಾಮಕೃಷ್ಣ ಹೆಗಡೆ ಅವರು ಜಾರಿಗೆ ತಂದ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆ ಇದು ರಾಜ್ಯಕ್ಕೆ ಮಾತ್ರ ಅಲ್ಲ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ಪಂಚಾಯತ್ ರಾಜ ವ್ಯವಸ್ಥೆ ಜಾರಿಗೆ ತಂದು ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ನೀಡಿದವರು. ವಿಧವಾ ವೇತನ, ಹೆರಿಗೆ ಭತ್ಯೆ, ಉಚಿತ ಬಸ್ ಪಾಸ್, ಕುಡಿಯುವ ನೀರಿನ ಯೋಜನೆ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಂತಹ ಹೆಗಡೆಯವರ ವ್ಯಕ್ತಿತ್ವ, ಜನಪ್ರೀಯತೆ ಎಂದಿಗೂ ಮಾಸದು. ೧೩ಬಜೇಟ್ ಮಂಡಿಸಿದ ರಾಮಕೃಷ್ಣ ಹೆಗಡೆ ದೊಡ್ಮನೆ ಅವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಸಿದ್ದಾಪುರ ಎನ್ನುವುದು ನಮಗೆಲ್ಲ ಹೆಗ್ಗಳಿಕೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯೆ ಸುಧಾ ಗೌಡ,ಶಿಕ್ಷಣ ಪ್ರಸಾರಕ ಸಮಿತಿಯ ಚೇರಮನ್ ವಿನಾಯಕರಾವ್ ಜಿ.ಹೆಗಡೆ, ಕಾರ್ಯದರ್ಶಿ ಕೆ.ಐ.ಹೆಗಡೆ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಡಾ. ಸುಮಂಗಲಾ ವೈದ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲತಾ ಮಂಗಲದಾಸ ಕಾಮತ ಆವರ್ಸಾ,ನಿವೃತ್ತ ಪ್ರಾಚಾರ್ಯೆ ಜಯಂತಿ ಶಾನಭಾಗ ಸಿದ್ದಾಪುರ ಹಾಗೂ ಪಾರಂಪರಿಕ ಪ್ರಸೂತಿ ತಜ್ಞೆ ಕೆರಿಯಮ್ಮ ಭರಮ ನಾಯ್ಕ ಕಾವಂಚೂರು ಇವರನ್ನು ಸನ್ಮಾನಿಸಲಾಯಿತು ಹಾಗೂ ರಾಮಕೃಷ್ಣ ಹೆಗಡೆ ಅವರ ಸಹೋದರಿ ಸಾವಿತ್ರಿ ಭಟ್ಟ ಬೆಂಗಳೂರು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರೂಪಾ ಭಟ್ಟ ವಂದಿಸಿದರು. ವಿನೋದಾ ಭಟ್ಟ, ರಜನಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

About the author

Adyot

Leave a Comment