ಸಿದ್ದಾಪುರದಲ್ಲಿ ಜಾನುವಾರುಗಳಿಗಾಗಿ 1962 ಅಂಬುಲೆನ್ಸ್ ಲೋಕಾರ್ಪಣೆ

ಆದ್ಯೋತ್ ಸುದ್ದಿನಿಧಿ:
ಪಶುಸಂಗೋಪನಾ ಇಲಾಖೆಯ ಮಹತ್ವದ ಯೋಜನೆಗಳಲ್ಲಿ ಒಂದಾದ ಜಾನುವಾರುಗಳಿಗೆ ಸಹಾಯ ನೀಡುವ ಪಶುಸಂಜೀವಿನಿ ತರ್ತುಚಿಕಿತ್ಸಾ ವಾಹನ1962ಕ್ಕೆ ಸಿದ್ದಾಪುರದಲ್ಲಿ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.

ಭೀಮಣ್ಣ ನಾಯ್ಕ ಮಾತನಾಡಿ,
ನಮ್ಮ ಸಮಾಜದಲ್ಲಿ ಹಸುಗಳಿಗೆ ಮಹತ್ವದ ಸ್ಥಾನವಿದ್ದು ಹಸುಗಳಿಂದ ನಮ್ಮ ಜೀವನಕ್ಕೆ ಅವಶ್ಯಕವಿರುವ ಹಲವು ಪ್ರಯೋಜನವಿದೆ.ಜಾನುವಾರುಗಳು ನಮ್ಮ ರೈತರ ಅವಿಭಾಜ್ಯ ಅಂಗವಾಗಿದೆ ಗ್ರಾಮೀಣ ಪ್ರದೇಶದಲ್ಲಿ ಇವುಗಳನ್ನು ಮಕ್ಕಳಂತೆ ಸಾಕುತ್ತಾರೆ ಇಂತಹ ಜಾನುವಾರುಗಳಿಗೆ ಅವಶ್ಯವಿರುವ ತುರ್ತು ಚಿಕಿತ್ಸೆ ನೀಡಲು ೧೯೬೨ ಅಂಬುಲೆನ್ಸ ನೀಡಲಾಗುತ್ತಿದೆ.

ಇಂದು ಕೃಷಿಯಲ್ಲಿ ಯಂರೋಪಕರಣಗಳ ಬಳಕೆ ಹೆಚ್ಚಾಗುತ್ತಿದೆ. ಅದರಂತೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಬಳಕೆಯ ಪ್ರಮಾಣವೂ ಹೆಚ್ಚಾಗುತ್ತಿದೆ ಇದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಇದನ್ನು ತಡೆಗಟ್ಟಲು ನಮ್ಮಬೆಳೆಗಳಿಗೆ ಜಾನುವಾರುಗಳ ಗೊಬ್ಬರ ಹಾಕುವುದು ಉತ್ತಮ. ಪ್ರತಿಮನೆಯಲ್ಲೂ ಒಂದಾದರೂ ಹಸುವನ್ನು ಸಾಕಬೇಕು ಅದರಲ್ಲೂ ನಾವು ದೇಸಿ ಹಸುವನ್ನು ಸಾಕುವುದು ಒಳ್ಳೆಯದು. ಪಶುಸಂಗೋಪನಾ ಇಲಾಖೆಯಿಂದ ಹಲವು ಯೋಜನೆಗಳು ಬರುತ್ತಿದ್ದು ಅದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ವಿವೇಕಾನಂದ ಹೆಗಡೆ ಮಾತನಾಡಿ, ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಅಂಬುಲೆನ್ಸ ವ್ಯವಸ್ಥೆ ಮಾಡಲಾಗಿದೆ ತಾಲೂಕಿನ ೨೩ ಗ್ರಾಪಂಗೆ ೨೩ ಪಶಸುಸಖಿಯರನ್ನು ನೇಮಕ ಮಾಡಲಾಗಿದೆ. ರೈತರು ಮತ್ತು ಇಲಾಖೆಯ ಮಧ್ಯ ಕೊಂಡಿಯಾಗಿ ಇವರು ಕೆಲಸ ಮಾಡುತ್ತಾರೆ. ಕಳೆದ ವರ್ಷಗಳಲ್ಲಿ ಒಟ್ಟೂ ೭೮೯ ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿತ್ತು ಅದರಲ್ಲಿ ೭೦೩ ಜಾನುವಾರುಗಳು ಗುಣಮುಖವಾಗಿವೆ ೮೩ ಜಾನುವಾರುಗಳು ಸಾವನ್ನು ಕಂಡಿದೆ ಇದರಲ್ಲಿ ೫೦ ಜಾನುವಾರುಗಳ ಮಾಲಿಕರಿಗೆ ೯.೫೬ಲಕ್ಷರೂ.ನ್ನು ಈಗಾಗಲೇ ವಿತರಿಸಲಾಗಿದೆ. ಈಗ ೩೩ ಜಾನುವಾರುಗಳ ಮಾಲಿಕರಿಗೆ ೫.೫೬ಲಕ್ಷರೂ. ಪರಿಹಾರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ, ಸದಸ್ಯ ರವಿಕುಮಾರ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ,ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ,ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಭಟ್ಟ,ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
———-
ರೈತರ ಜಾನುವಾರುಗಳಿಗೆ ಉಪಯುಕ್ತವಾದ
ಪಶುಸಂಜೀವಿನಿ ತುರ್ತು ಚಿಕಿತ್ಸಾ ವಾಹನ1962 ಕಾರ್ಯವಿಧಾನ

# ತುರ್ತುಚಿಕಿತ್ಸಾ ವಾಹನದ ಸಮಯ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ.
# ರೈತರಯ ತುರ್ತುಚಿಕಿತ್ಸೆಗೆ 1962ಕ್ಕೆ ದೂರವಾಣಿ ಮೂಲಕ ಸಂಪರ್ಕಿಸಬೇಕು ನೇರವಾಗಿ ವಾಹನದ ಸಿಬ್ಬಂದಿಗೆ ಕರೆ ಮಾಡುವಂತಿಲ್ಲ
# ರೈತರು ದೂರವಾಣಿ ಕರೆಯ ವಿವರಗಳನ್ನು ಕೇಳಿ ತುರ್ತು ಚಿಕಿತ್ಸೆ ಇದ್ದಲ್ಲಿ ಕೇಂದ್ರಕಚೇರಿಯಿಂದ ವಾಹನದ ಸಿಬ್ಬಂದಿಗಳಿಗೆ ಕರೆ ಬರುತ್ತದೆ‌ ನಂತರ ವಾಹನ ರೈತರ ಮನೆಬಾಗಿಲಿಗೆ ತೆಗೆದುಕೊಂಡು ಹೋಗಿ ಸೂಕ್ತಚಿಕಿತ್ಸೆ ನೀಡಲಾಗುವುದು.
# ರೋಗಗ್ರಸ್ತ ಜಾನುವಾರುಗಳನ್ನು ಪಶು ಆಸ್ಪತ್ರೆಗಳಿಗೆ ತರುವ ವ್ಯವಸ್ಥೆ ಇರುವುದಿಲ್ಲ
# ಶ್ವಾನಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಇರುವುದಿಲ್ಲ
# ತುರ್ತುಚಿಕಿತ್ಸಾ ವಾಹನದಲ್ಲಿ ಪಶುವೈದ್ಯರು,ಒಬ್ಬ ಅರೆತಾಂತ್ರಿಕ ಸಿಬ್ಬಂದಿ,ಒಬ್ಬ ವಾಹನ ಚಾಲಕ ಇರುತ್ತಾರೆ.

About the author

Adyot

Leave a Comment