ನ್ಯಾಯಾಂಗ ವ್ಯವಸ್ಥೆಯಲ್ಲಿ ಮಧ್ಯ ಪ್ರವೇಶಿಸಲು ಯಾರಿಗೂ ಅಧಿಕಾರವಿಲ್ಲ–ಎ.ನಾರಾಯಣಸ್ವಾಮಿ

ಆದ್ಯೋತ್ ಸುದ್ದಿನಿಧಿ:
ರಾಜ್ಯದ ಕಾಂಗ್ರೆಸ್ ಸರಕಾರ ಕಾವೇರಿ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸದೆ ಪ್ರಧಾನಮಂತ್ರಿ ಹಾಗೂ ಬಿಜೆಪಿ ಸಂಸದರ ಮೇಲೆ ಆರೋಪ ಮಾಡುತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಇರುವಾಗ ಪ್ರಧಾನಿ,ರಾಷ್ಟ್ರಪತಿ ಸೇರಿದಂತೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂಬ ಕನಿಷ್ಠ ಪರಿಜ್ಞಾನವೂ ಮುಖಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಕೇಂದ್ರ ಸಚೀವ ಎ.ನಾರಾಯಣ ಸ್ವಾಮಿ ಕಿಡಿಕಾರಿದರು.

ಅವರು ಉತ್ತರಕನ್ನಡ ಸಿದ್ದಾಪುರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು

ಕಾವೇರಿ ಸಮಸ್ಯೆ ಕುರಿತು ರಾಜ್ಯಸರಕಾರ ಸಮರ್ಥವಾಗಿ ವಾದ ಮಂಡಿಸಬೇಕಿತ್ತು ಸಂಬಂಧಿಸಿದ ಅಧಿಕಾರಿಗಳು ಆನಲೈನ್ ಮೂಲಕ ಸಭೆಯಲ್ಲಿ ಭಾಗವಹಿಸುತ್ತಿದ್ದರು ತಮಿಳುನಾಡಿನಲ್ಲಿರುವ ನೀರಿನ ಸಂಗ್ರಹ, ,ಅಲ್ಲಿರುವ ಡ್ಯಾಂನಲ್ಲಿರುವ ನೀರೆಷ್ಷು,ಅಲ್ಲಿ ಎಷ್ಟು ಬಾರಿ ಬೆಳೆ ಬೆಳೆಯುತ್ತಾರೆ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ಕೋರ್ಟ ಹಾಗೂ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕಿತ್ತು ಆದರೆ ರಾಜ್ಯ ಸರಕಾರ ಬೇರೆಯವರ ಮೇಲೆ ಆರೋಪ ಹೊರಿಸುತ್ತ ಕಾಲಹರಣ ಮಾಡುತ್ತಿದೆ. ಬಿಜೆಪಿ ಸಂಸದರು ಕೇಂದ್ರ ಜಲಶಕ್ತಿ ಸಚೀವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೆವೆ ಇದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ತಿಳಿದಿದೆ ಆದರೂ ರಾಜಕೀಯ ದುರದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಸುಪ್ರಿಙಕೋರ್ಟಿನಲ್ಲಿ ತಮಿಳುನಾಡಿಗೆ ನೀರು ಬಿಡಲೇಬೇಕೆಂದು ಹಿಂದೆ ಆದೇಶ ಬಂದಾಗ ಕರ್ನಾಟಕ ರಾಜ್ಯದಿಂದ ಪ್ರತಿರೋಧ ವ್ಯಕ್ತವಾಗಲಿಲ್ಲ ಅದನ್ನು ತಡೆಯುವಂತ ಕೆಲಸವನ್ನು ಅಂದು ಆಡಳಿತದಲ್ಲಿದ್ದ ಸರ್ಕಾರ ಮಾಡಲಿಲ್ಲ ಅಂದಿನಿಂದ ಇಂದಿನವರೆಗೂ ನಾವು ರೆಗ್ಯುಲಾರಿಟಿ ಅಥಾರಿಟಿ ಅಥವಾ ಮ್ಯಾನೇಜ್ಮೆಂಟ್ ಕಮಿಟಿಗಳ ಸಭೆ ಆದಾಗ ನಮ್ಮ ಅಧಿಕಾರಿಗಳು ಖುದ್ದು ಹಾಜರಾಗುತ್ತಿಲ್ಲ ನಾವು ಕರ್ನಾಟಕ ರಾಜ್ಯದ ಸಮಸ್ಯೆಗಳನ್ನು ಮತ್ತು ಕಾವೇರಿ ಬೇಸ್ ನಲ್ಲಿ ಏನೇನೋ ಆಗುತ್ತಿದೆ ಎಂಬ ಬಗ್ಗೆ ಮಾಹಿತಿಯನ್ನೇ ಕೊಡದೆ ಇರುವ ಕಾರಣ ಅಂದಿನಿಂದ ಇಂದಿನವರೆಗೂ ಕರ್ನಾಟಕ ರಾಜ್ಯದ ಹಿನ್ನಡೆಗೆ ಕಾರಣವಾಗಿದೆ. ಸರ್ಕಾರವನ್ನು ಅಥವಾ ನಮ್ಮ ವಕೀಲರನ್ನು ಎಲ್ಲಿ ಲೋಪ ಉಂಟಾಗಿದೆ ಎಂಬ ಬಗ್ಗೆ ಯಾರು ಚರ್ಚೆ ಮಾಡುತ್ತಿಲ್ಲ ಸಂಕಷ್ಟ ಸೂತ್ರ ರಚಿಸಬೇಕು ಎಂದು ರಾಜ್ಯ ಸರಕಾರ ಇಲ್ಲಿಯವರೆಗೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿಲ್ಲ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದರೆ ಸಂಕಷ್ಟಸೂತ್ರ ರಚಿಸಲಾಗುತ್ತದೆ ಕೇಂದ್ರಸರಕಾರ ರಾಜ್ಯದ ಪರವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

ಜೆಡಿಎಸ್ ಜೊತೆಗೆ ಕೈ ಜೋಡಿಸುವ ಅನಿವಾರ್ಯತೆ ಬಿಜೆಪಿಗೆ ಇಲ್ಲ ಅವರಿಗೆ ಬಿಜೆಪಿ ಜೊತೆಗೆ ಬರುವ ಅನಿವಾರ್ಯತೆ ಇದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ನಾನೇನು ಹೇಳುವುದಿಲ್ಲ. ಜೆಡಿಎಸ್ ಪಕ್ಷದ ಅಸಮಾಧಾನ ಆ ಪಕ್ಷದ ಆಂತರಿಕ ವಿಷಯವಾಗಿದೆ ಎನ್ ಡಿ ಎ ಒಕ್ಕೂಟಗಳಿಗೆ ಬೇರೆ ಬೇರೆ ಪಕ್ಷದವರು ಕೈಜೋಡಿಸುತ್ತಿದ್ದಾರೆ ಹಾಗೆಯೇ ಜೆಡಿಎಸ್ ಕೂಡ ಮೋದಿಜಿಯವರ ಆರ್ಥಿಕ ನೀತಿ ಹಾಗೂ ಆಡಳಿತರೂಢ ಪಕ್ಷದ ಗ್ಯಾರಂಟಿ ನೀತಿಯಿಂದಾಗಿ ದೇಶ ದಿವಾಳಿಯತ್ತ ಸಾಗುತ್ತಿರುವುದರಿಂದ ಅತ್ಯಂತ ಹಿರಿಯ ರಾಜಕಾರಣಿಯಾದ ದೇವೇಗೌಡರವರು ಸೂಕ್ತವಾದ ನಿರ್ಣಯ ಕೈಗೊಂಡು ನಮ್ಮ ದೇಶವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದರು
ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.

About the author

Adyot

Leave a Comment