ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸ್ಥಳೀಯ ನಿವೃತ್ತ ನೌಕರರ ಸಂಘ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ,
ನಾವು ದೇವರನ್ನು ಪೂಜಿಸುವಂತೆ ಹಿರಿಯರನ್ನು ಪೂಜಿಸಿ ಗೌರವಿಸಿ ಅವರ ಅನುಭದ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಇಂದಿನ ಯುವ ಜನತೆ ಸತ್ಪ್ರಜೆಗಳಾಗಲು ಸಾಧ್ಯ.ಮಾನವರಾಗಿ ಹುಟ್ಟಿದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ಸರ್ಕಾರಿ ಸೇವೆಯಲ್ಲಿದ್ದು ಪ್ರಾಮಾಣಿಕವಾಗಿ ಜನಪರ ಕೆಲಸವನ್ನು ಮಾಡಿದ ಹಿರಿಯರನ್ನು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡ ಹಿರಿಯರನ್ನು ಗೌರವಿಸುತ್ತಿರುವುದು ಉತ್ತಮ ಕಾರ್ಯ. ಇದು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಪ್ರಾಸ್ತಾವಿಕ ಮಾತನಾಡಿ,ನಿವೃತ್ತ ನೌಕರರ ಸಂಘ ಸಕ್ರಿಯವಾಗಿದ್ದು ಹಲವು ಸಾಮಾಜಿಕ ಚಟುವಟಿಕೆ ನಡೆಸುತ್ತಾ ಬಂದಿದ್ದೆವೆ. ಮಳೆನೀರು ಇಂಗಿಸುವ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಿದ್ದೆವೆ ಕೊವಿಡ್ ಸಮಯದಲ್ಲಿ ಆಶಾಕಾರ್ಯಕರ್ತೆಯರಿಗೆ ಛತ್ರಿ, ಆಹಾರ ಕಿಟ್ ನೀಡಿದ್ದೆವೆ ಸರಕಾರ ಆಯೋಜಿಸುವ ಎಲ್ಲಾ ಉತ್ಸವಗಳಲ್ಲಿ ನಮ್ಮ ಸಂಘ ಭಾಗವಹಿಸುತ್ತೆವೆ. ಕ್ರೀಡಾಕೂಟವನ್ನು ಕಾರವಾರದಲ್ಲಿ ಆಯೋಜಿಸಲಾಗುತ್ತಿದೆ ಆದರೆ ಹಿರಿಯ ನಾಗರಿಕರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಆದ್ದರಿಂದ ಶಿರಸಿಯಲ್ಲಿ ಕ್ರೀಡಾಕೂಟ ಆಯೋಜಿಸಬೇಕು. ಕೆಲವು ಸಂಘಟನೆಗಳಿಗೆ ಕಚೇರಿ ಅವಶ್ಯಕತೆ ಇದೆ ಒಂದೇ ಸಂಕೀರ್ಣದಲ್ಲಿ ಕಟ್ಟಡ ನಿರ್ಮಿಸಿಕೊಡಬೇಕು.ಹಿರಿಯ ನಾಗರೀಕರಿಗೆ ಕಂದಾಯ ಇಲಾಖೆಯಿಂದ ಸಿಗುವ ಸೌಲಭ್ಯಕ್ಕೆ ಶಿರಸಿಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬಗೆಹರಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು
ತಹಸೀಲ್ದಾರ ಎಂ.ಆರ್.ಕುಲಕರ್ಣಿ,ಕ್ಷೇತ್ರಶಿಕ್ಷಣಾಧಿಕಾರಿ ಜಿ.ಐ.ನಾಯ್ಕ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಪೂರ್ಣಿಮಾ ದೊಡ್ಮನಿ ಉಪಸ್ಥಿತಿತರಿದ್ದರು
ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಹಿರಿಯ ನೌಕರರಾದ ಅಪ್ಪಣ್ಣ ಚನ್ನ ಗಾಳಿ ಅವರಗುಪ್ಪ, ಗಣಪತಿ ಮೈಲಾ ನಾಯ್ಕ ಬೇಡ್ಕಣಿ ಹಾಗೂ ಗಣಪತಿ ಈಶ್ವರ ನಾಯ್ಕ ಹೊಸೂರು ಹಾಗೂ ಹಿರಿಯ ನಾಗರಿಕರಾದ ಮುರುಗಯ್ಯ ಗೌಡರ್ ಕೋಲಸಿರ್ಸಿ, ರಾಮ ಕನ್ನ ಗಣಪನ್ ಕಾನಗೋಡ, ಶ್ರೀಧರ ಹೆಗಡೆ ಹುಲಿಮನೆ ಇವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ ಎಂ ಆರ್ ಕುಲಕರ್ಣಿ, ಕ್ಷೇತ್ರ ಶಿಕ್ಷಾಧಿಕಾರಿ ಜಿ ಐ ನಾಯ್ಕ, ಸಿಡಿಪಿಒ ಪೂರ್ಣಿಮಾ ಆರ್ ಇದ್ದರು.
ಗಣಪತಿ ಹೆಗಡೆ ಹುಲಿಮನೆ ಸ್ವಾಗತ ಗೀತೆ ಹಾಡಿದರು. ಉಷಾ ನಾಯ್ಕ ನಿರೂಪಿಸಿದರು.