ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಸಿದ್ದಾಪುರದಲ್ಲಿ ಸ್ಥಳೀಯ ಧರ್ಮಶ್ರೀ ಫೌಂಡೇಶನ್ ಹಾಗೂ ಶಿರಸಿಯ ದೀನದಯಾಳ ಟ್ರಸ್ಟ್ ಆಶ್ರಯದಲ್ಲಿ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ವಿಚಾರ-ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ.ಸಾಮಾಜಿಕ ಚಿಂತನೆಯ ವೈಚಾರಿಕತೆ ಮೂಡಿಸಲು ಸ್ವಯಂಸೇವಾ ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಬೇಕು.ಸಂವಿಧಾನ ಅಂಗೀಕಾರವಾದ ಸಂದರ್ಭಕ್ಕು ಈಗಿನ ಸಂದರ್ಭಕ್ಕೂ ಸಾಕಷ್ಟು ಅಂತರವಿದೆ ದೇಶದ ಜನತೆಯಲ್ಲಿ ಸಮಾನತೆ ಭದ್ರತೆ ಭಾವನೆ ಬರಬೇಕಾಗಿದೆ ಎಲ್ಲಾ ಧರ್ಮದ
ವರನ್ನೂ ಜೋಡಿಸಿ ರಾಷ್ಟ್ರೀಯತೆಯನ್ನು ಮೂಡಿಸ ಬೇಕಾಗಿದೆ ಇಂತಹ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ಅವಶ್ಯಕವಾಗಿದೆ ಇದರಲ್ಲಿ ರಾಜಕೀಯವನ್ನಾಗಲಿ,ಧರ್ಮವನ್ನಾಗಲಿ ಬೆರೆಸುವ ಕಾರಣವೇ ಇಲ್ಲ. ಕೆಲವು ರಾಜಕೀಯ ಪಕ್ಷಗಳು ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿದೆ ಹಾಲಿ ನಡೆಯುತ್ತಿರುವ ಇಸ್ರೆಲ್ ಹಾಗೂ ಹಮಾಸ್ ಉಗ್ರ ನಡುವೆ ನಡೆಯುತ್ತಿರುವ ಯುದ್ದದಲ್ಲಿ ಕೆಲವು ರಾಜಕೀಯ ಪಕ್ಷಗಳು ಯಾವುದೋ ಒಂದು ಸಮುದಾಯವನ್ನು ತುಷ್ಟಿಕರಣಗೊಳಿಸುತ್ತೆವೆ ಎಂಬ ಭ್ರಮೆಯಿಂದ ಹಮಾಸ್ ಉಗ್ರರನ್ನು ಕಳುಹಿಸುತ್ತಿರುವ ಪ್ಯಾಲೆಸ್ತಾವನ್ನು ಬೆಂಬಲಿಸುತ್ತಿವೆ ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡದೆ ರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.
ನಾಗರಿಕ ಸಂಹಿತೆಯ ಕುರಿತು ಉಪನ್ಯಾಸ ನೀಡಿದ ಧಾರವಾಡ ಹೈಕೋರ್ಟ್ ನ್ಯಾಯವಾದಿ ಅನೂಪ ದೇಶಪಾಂಡೆ,ಈಗಾಗಲೇ ನಮ್ಮ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಆದರೆ ಕೆಲವೊಂದು ವಿಷಯದಲ್ಲಿ ಬೇರೆ ಬೇರೆ ಧರ್ಮದವರಿಗೆ ಬೇರೆ ಕಾನೂನು ಇದೆ.ಕೌಟಂಬಿಕ ಕಾಯ್ದೆ,ವಿಚ್ಛೇದನ ಕಾಯ್ದೆ,ದತ್ತು ಸ್ವೀಕಾರ ಕಾಯ್ದೆಯಲ್ಲಿ ವ್ಯತ್ಯಾಸವಿದೆ ಇದರಿಂದ ಕೆಲವು ಧರ್ಮದ ಮಹಿಳೆಯರಿಗೆ ಮಕ್ಕಳಿಗೆ ಅನ್ಯಾಯವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಮಹಿಳೆಯರ,ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸೂಚಿಸಲಾಗಿದೆ ಇದರ ಅನುಷ್ಠಾನ ಮಾಡುವುದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕಾಗಿದೆ. ಈಗಾಗಲೇ ಸಂವಿಧಾನಕ್ಕೆ ನೂರಕ್ಕಿಂತಲೂ ಹೆಚ್ಚುಬಾರಿ ತಿದ್ದುಪಡಿ ಮಾಡಲಾಗಿದೆ ಜಗತ್ತಿನ ಹಲವು ದೇಶಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ ಆದರೆ ನಮ್ಮ ದೇಶದಲ್ಲಿ ಜಾರಿಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ,ಅಪವಾದ ಮಾಡುತ್ತಿದ್ದಾರೆ. ಈ ಸಂಹಿತೆಯ ಆಶಯ ಎನು ಎನ್ನುವುದರ ಬಗ್ಗೆ ಜನರಲ್ಲಿ ಮನವರಿಕೆ ಮಾಡಬೇಕಾಗಿದೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ಕಾನೂನು ಇದಲ್ಲ ಮಹಿಳೆ ಮತ್ತು ಮಕ್ಕಳ ಹಕ್ಕನ್ನು ರಕ್ಷಿಸುವುದಷ್ಟೆ ಇದರ ಉದ್ದೇಶ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಧರ್ಮಶ್ರೀ ಫೌಂಡೇಶನ ಕಾರ್ಯಾಧ್ಯಕ್ಷ ಡಾ.ರವಿ ಹೆಗಡೆ ಮಾತನಾಡಿ,ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ದೃಷ್ಠಿಯಿಂದ ನೋಡಬಾರದು ನಮ್ಮ ದೇಶದ ಅಭಿವೃದ್ಧಿ,ನಮ್ಮ ರಾಷ್ಟ್ರೀಯತೆಯ ಬಗ್ಗೆ ಅರಿವು ಮುಡಿಸಲು ಮತ್ತು ನಮ್ಮೆಲ್ಲರ ಹಕ್ಕು ರಕ್ಷಿಸಲು ಈ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.
ನಿವೃತ್ತ ಸೈನಿಕ ರಾಜೇಶ ನಾಯ್ಕ, ಲಯನ್ಸ್ ಅಧ್ಯಕ್ಷ ಎಂ.ಆರ್.ಪಾಟಿಲ ಉಪಸ್ಥಿತರಿದ್ದರು.
ಧರ್ಮಶ್ರೀ ಪೌಂಡೇಶನ್ ಕಾರ್ಯದರ್ಶಿ ಶ್ಯಾಮಲಾ ಹೆಗಡೆ ಸ್ವಾಗತಿಸಿದರು. ಎಂ.ಆರ್.ಭಟ್ಟ ನಿರೂಪಣೆ ಮಾಡಿದರು. ಗುರುರಾಜ ಶಾನಭಾಗ ವಂದೇ ಮಾತರಂ ಹಾಡಿದರು.