ಅರಣ್ಯ ಸಚೀವರ ಆದೇಶಪತ್ರಕ್ಕೆ ಶಾಸಕ ಭೀಮಣ್ಣ ನಾಯ್ಕ ಖಂಡನೆ

ಆದ್ಯೋತ್ ಸುದ್ದಿನಿಧಿ:
ಅತಿಕ್ರಮಣ ಜಾಗವನ್ನು ತೆರವುಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಸಚೀವ ಈಶ್ವರ ಖಂಡ್ರೆಯವರು ಆದೇಶಪತ್ರವನ್ನು ಬರೆದಿದ್ದು ಸಚೀವರ ಈ ಪತ್ರಕ್ಕೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಖಂಡಿಸಿದ್ದು ತಾನು ಅರಣ್ಯ ಅತಿಕ್ರಮಣದಾರರ ಪರವಾಗಿ ನಿಲ್ಲುತ್ತೆನೆ ಎಂದು ತಿಳಿಸಿದ್ದಾರೆ.

ಅವರು ಶುಕ್ರವಾರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾಸಮಿತಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಲೆನಾಡಿನ ಭಾಗದಲ್ಲಿ ತಲೆತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ.ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಈಗಾಗಲೇ ಜಿಪಿಎಸ್ ಆಗಿರುವ ಪ್ರದೇಶವನ್ನು ರೈತರಿಗೆ ಮಂಜೂರು ಮಾಡಿಕೊಡಬೇಕು ಹೊಸ ಅತಿಕ್ರಮಣವಾಗದಂತೆ ತಡೆಯಬೇಕು‌ ಅರಣ್ಯ ಸಚೀವರಿಗೆ ವಾಸ್ತವತೆಯ ಅರಿವಿಲ್ಲ ಇಂತಹ ಪತ್ರ ಬರೆಯುವಾಗ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಿತ್ತು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕಿತ್ತು ಅವರ ಈ ಪತ್ರದ ಪರಿಣಾಮ ಶಿರಸಿಯಲ್ಲಿ ಅಧಿಕಾರಿಗಳು ವ್ಯಕ್ತಿಯೊಬ್ಬನ ಅತಿಕ್ರಮಣ ತೆರವಿಗೆ ಪ್ರಯತ್ನಿಸಿ ಅವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಕೂಡಲೆ ಸಚೀವರು ಈ ಆದೇಶ ಪತ್ರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಈ ಬಗ್ಗೆ ಮುಖ್ಯಮಂತ್ರಿಗಳ ಹತ್ತಿರವೂ ಚರ್ಚಿಸುತ್ತೆನೆ ಏನೆ ಆದರೂ ನಾನು ಅತಿಕ್ರಮಣದಾರರ ಪರವಾಗಿರುತ್ತೆನೆ ಎಂದು ಹೇಳಿದರು

ಅಡಿಕೆಗೆ ಬಂದಿರುವ ಎಲೆಚುಕ್ಕಿರೋಗದ ಹತೋಟಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿಜ್ಞಾನಿಗಳಿಗೆ ಸೂಚಿಸಿದ್ದೆನೆ. ಈ ಬಗ್ಗೆ ಸರಕಾರದ ಗಮನಕ್ಕೂ ತರುತ್ತೆನೆ ಇಲಾಖೆಯವರು ರೈತರಿಗೆ ಗೊಂದಲ ಮಾಡಬಾರದು ಯಾವ ಔಷಧದಿಂದ ಈ ರೋಗ ನಿಯಂತ್ರಣ ಮಾಡಬಹುದು ಎನ್ನುವುದನ್ನು ಖಚಿತವಾಗಿ ಹೇಳಬೇಕು. ಇನ್ನೂ “ಬ” ಕರಾಬಿಗೆ ಸಂಬಂದಿಸಿದಂತೆ ಬ್ರಿಟೀಷರ್ ಕಾಲದಿಂದಲೂ ಬೆಟ್ಟ ಪ್ರದೇಶವು ಸಂಬಂಧಿಸಿದ ಜಮೀನು ಮಾಲಿಕರದ್ದಾಗಿರುತ್ತದೆ ಈಗ ಇದನ್ನು ಬದಲಾವಣೆ ಮಾಡಬಾರದು ಈ ಬಗ್ಗೆ ನಮ್ಮ ಸರಕಾರದ ಮೊದಲ ಅಧಿವೇಶನದಲ್ಲೆ ಪ್ರಸ್ತಾಪ ಮಾಡಿದ್ದೆನೆ ಎಂದು ಹೇಳಿದರು
ಆರೋಗ್ಯರಕ್ಷಾಸಮಿತಿ ಸಭೆ ನಡೆಸಿದ ಭೀಮಣ್ಣ ನಾಯ್ಕ, ಆಸ್ಪತ್ರೆಗೆ ಅವಶ್ಯಕವಿರುವ ಈ ಎಲ್ಲವುಗಳಿಗೆ ಸಭೆ ಅನುಮತಿ ನೀಡುತ್ತದೆ. ಆಸ್ಪತ್ರೆಯ ಬಗ್ಗೆ ಸಾರ್ವಜನಿಕವಾಗಿ ಕೆಲವು ದೂರುಗಳಿವೆ ಈ ಬಗ್ಗೆ ವೈದ್ಯರು ಗಮನಹರಿಸಬೇಕು ಸಮಯಕ್ಕೆ ಗೆರೆ ಎಳೆದುಕೊಳ್ಳದೆ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ವೈದ್ಯರು ಕೇವಲ ಹಣಕ್ಕಾಗಿ ಕೆಲಸ ಮಾಡಬಾರದು ಸರಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುತ್ತಾರೆ ಅವರು ಬೇರೆ ಕಡೆಗೆ ಹೋಗಿ ಎಂದರೆ ಆರ್ಥಿಕವಾಗಿ ಅವರಿಗೆ ಕಷ್ಟವಾಗುತ್ತದೆ ಸಾಧ್ಯವಾದಷ್ಟು ಇಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಆರೋಗ್ಯ ರಕ್ಷಾ ಸಮಿತಿಯವರು ವೈದ್ಯರ ಜೊತೆಗೆ ಸಹಮತದಿಂದ ಕೆಲಸ ಮಾಡಬೇಕು ಅವರ ಕರ್ತವ್ಯಕ್ಕೆ ಅಡ್ಡಿಪಡಿಸದೆ ಆಸ್ಪತ್ರೆಯ ನ್ಯೂನ್ಯತೆಗಳ ಬಗ್ಗೆ ಅವರ ಗಮನಸೆಳೆಯ ಬೇಕು ಆಸ್ಪತ್ರೆಯ ಬೇಕು ಬೆಡಗಳಿಗೆ ವೈದ್ಯರು ಎಷ್ಟು ಜವಾಬ್ದಾರರೋ ರಕ್ಷಾಸಮಿತಿಯ ಸದಸ್ಯರು ಅಷ್ಟೆ ಜವಾಬ್ದಾರರು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಡಾ.ಪ್ರಕಾಶ ಪುರಾಣಿಕ,ಡಾ.ಲೋಕೇಶ ನಾಯ್ಕ,ಡಾ.ಲಕ್ಷ್ಮೀಕಾಂತ ನಾಯ್ಕ, ಆರೋಗ್ಯರಕ್ಷಾಸಮಿತಿಯ ಸದಸ್ಯರಾದ ಸುಮಂಗಲಾ ನಾಯ್ಕ, ಜಿ.ಟಿ.ನಾಯ್ಕ ಗೋಳಗೋಡ, ಬಾಲಕೃಷ್ಣ ನಾಯ್ಕ, ಮಂಜು ಹಸ್ಲರ್, ಜನಾರ್ಧನ್ ನಾಯ್ಕ, ಸುರೇಖಾ ಶ್ರೀನಿವಾಸ ನಾಯ್ಕ, ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.

About the author

Adyot

Leave a Comment