ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ತಾಲೂಕು ಭಜರಂಗದಳದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಕಡಕೇರಿ ನೇತೃತ್ವದಲ್ಲಿ ವಿಶ್ವಹಿಂದೂಪರಿಷತ್ ಸಹಭಾಗಿತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಶೌರ್ಯಜಾಗರಣಾ ರಥಯಾತ್ರೆ ನಡೆಯಿತು.
ಶ್ರೀ ಚೈತನ್ಯ ರಾಜರಾಮ ಕ್ಷೇತ್ರ ಶಿರಳಗಿಯ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ,ಸನಾತನ ಧರ್ಮ ನಾಶವಾಗದ ಧರ್ಮ ಎಂದು ಸ್ವಾಮಿಚಿನ್ಮಯಾನಂದರೂ ಕೂಡ ಪ್ರತಿ ಭಾರಿಯೂ ಪ್ರತಿಪಾಧಿಸಿದ್ದಾರೆ ಇಂದು ಸನಾತನ ಧರ್ಮದ ಜಾಗ್ರತಿಯು ಕಡಿಮೆಯಾಗಿದ್ದು ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸತ್ಸಂಗವನ್ನು ಏರ್ಪಡಿಸಿ ಭಗವದ್ಗೀತೆ, ರಾಮಯಣ ಮಹಾಭಾರತ ದಂತಹ ಧರ್ಮಗ್ರಂಥಗಳ ಪರಿಚಯವನ್ನ ಮಕ್ಕಳಿಗೆ ಮಾಡಿಕೊಬೇಕು ಈ ದಿಸೆಯಲ್ಲಿ ನಾವೂ ಕೂಡ ಪೂರ್ಣವಾಗಿ ಸಹಕರಿಸುತ್ತೇವೆ ಎಂದು ಹೇಳಿದರು.
ಭಜರಂಗದಳದ ವಕ್ತಾರ ಆದರ್ಶ ಗೋಕಲೆ ಕಾರ್ಕಳ ಮಾತನಾಡಿ,ಹಿಂದೂ ಸಮಾಜವನ್ನು ನಾಶಮಾಡುತ್ತೇವೆಂದು ಹೊರಟ ಅನೇಕ ಮತಾಂಧರಿಗೆ ಹಿಂದೂ ಸಮಾಜ ಸಡ್ಡುಹೊಡೆದು ನಿಂತಿದೆ. ಹಿಂದೂ ಧರ್ಮವನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುವದು ಕೆಲವರ ಚಾಳಿಯಾಗಿದೆ.
ಈ ಜಗತ್ತಿನದಲ್ಲಿ ಹಿಂದೂ ಧರ್ಮ ಸೇರಿದಂತೆ ಅನೇಕ ಮತಗಳಿವೆ. ಎಲ್ಲಾ ಮತಗಳಿಗೂ ಮತಾಚಾರ್ಯರಿದ್ದಾರೆ. ಎಲ್ಲಾ ಮತಗಳಿಗೂ ಹುಟ್ಟು ಅನ್ನುವಂತದಿದೆ. ಯಾರಿಗೆ ಹುಟ್ಟು ಅನ್ನುವುದಿದೆಯೋ ಅವರಿಗ ಸಾವು ಅನ್ನುವುದು ಇದ್ದೇ ಇದೆ. ಯಾವುದೆಕ್ಕ ಆದಿ ಇಲ್ಲವೋ ಅದಕ್ಕೆ ಅಂತ್ಯ ಅನ್ನುವುದು ಇಲ್ಲ.
ಹಾಗೆಯೆ ಹಿಂದೂ ಧರ್ಮಕ್ಕೆ ಅಂತ್ಯ ಅನ್ನುವುದಿಲ್ಲ.
ಎಲ್ಲಾ ದೇಶಗಳು ಒಂದಲ್ಲ ಒಂದು ಸಮಸ್ಯೆಗಳನ್ನ ಎದುರಿಸುತ್ತಿವೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಭಾರತ ದೇಶ ವಿಶ್ವಗುರುವಾಗಿರುವುದಕ್ಕೆ ಕಾರಣ ಹಿಂದೂ ಸಮಾಜ.
ಭಾರತ ನಿನ್ನೆ ಇಂದು ಮತ್ತು ಮುಂದೆಯೂ ಸಹ ಕೊಡುವ ರಾಷ್ಟ್ರವಾಗಿದೆ. ಯಾವಾಗಲೂ ನಮಗೆ ಬಿಕ್ಷೆ ಬೇಡಿ ಅಭ್ಯಾಸವಿಲ್ಲ. ಮುಸ್ಲೀಮ್ ರಾಜರ ದಾಳಿಯಿಂದಲೂ ಸಹ ನಮ್ಮ ಹಿಂದೂ ಸಮಾಜವನ್ನು ಏನೂ ಮಾಡಲು ಅಗಲಿಲ್ಲ.
ನಮ್ಮ ಭಾರತ ದೇಶದಲ್ಲಿ ಪರಕೀಯರಿಂದ ಆಕ್ರಮ ಗಳಾದಾಗ ನೋವುಂಟಾದಾಗ ಹಿಂದೆ ಸರಿದ ಸಮಾಜ ನಮ್ಮ ಹಿಂದೂ ಸಮಾಜವಲ್ಲ ಬದಲಿಗೆ ಎದೆಯೊಡ್ಡಿ ಹೋರಾಟ ಮಾಡಿದ ಧರ್ಮ ನಮ್ಮ ಹಿಂದೂ ಸನಾತನ ಧರ್ಮ ಎಂದು ಹೇಳಿದರು.
ನಾಸಾ ಸಹ ಸಾವಿರಾರು ವರ್ಷಗಳಿಂದ ಸಮುದ್ರದಾಳದಲ್ಲಿ ಒಂದು ಸೇತುವೆ ಇದೆ ಎಂದು ಪ್ರಮಾಣಪತ್ರ ನೀಡಿದರೂ ಸಹ ರಾಮ ಸೇತುವನ್ನು ಒಡೆಯುವುದಾಗಿ ಕೆಲವು ಮೂರ್ಖರು ಹೇಳುತ್ತಾರೆ. ರಾಮ ಯಾವ ಇಂಜಿನಿಯರ್ ಓದಿದ್ದ ಎಂದು ಪ್ರಶ್ನೆ ಮಾಡುತ್ತಾರೆ. ಅದ್ದರಿಂದ ನಾವು ಜಾಗೃತರಾಗಬೇಕಿದೆ.
ಕಾಶ್ಮಿರದಲ್ಲಿ ಈಗ್ಗೆ ಕೆಲವು ವರ್ಷಗಳ ಹಿಂದೆ ಪೊಲೀಸರೂ ಸಹ ಉಗ್ರಗಾಮಿಗಳ ಅಡಿಯಾಳಾಗಿರುವ ಪರಿಸ್ಥಿತಿ ಇತ್ತು ಅದರೆ ಮೊನ್ನೆ ಕಾಶ್ಮೀರದಲ್ಲಿ ಚಂಡೆ ಮದ್ದಳೆ ಯಕ್ಣಗಾನದ ಸದ್ದು ಕೇಳುತ್ತಿದೆ ಎಂದರೆ ಕಾರಣ ಒಂಬತ್ತು ವರ್ಷಗಳ ಹಿಂದೆ ಹಿಂದೂ ಶೌರ್ಯದ ಪರಿಣಾಮ ಇದು.ಹಿಂದೆ ನಮ್ಮ ದೇಶದ ಸೈನಿಕರ ತಲೆ ಕಡಿದು ಗಡಿಯಾಚೆ ಬಿಸಾಡಿದಾಗ ಭಾರತ ಸರ್ಕಾರದಿಂದ ಈ ಘಟನೆಯನ್ನು ಖಂಡಿಸುವುದಾಗಿ ಒಂದು ಲೆಟರ್ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟು ಮಾತುಕತೆ ಮಾಡುತ್ತಿದ್ದರು. ಆದರೆ ಈಗ ಹಿಂದೂ ಶೌರ್ಯದ ಫಲವಾಗಿ ಮಾತುಕತೆ ಬಂದಾಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮಟ್ಟಿಗೆ ವ್ಯವಸ್ಥೆ ಬದಲಾಗಿದೆ. ಮತ್ತೆ ಭಾರತವನ್ನ ಹಿಂದೂ
ಸಮಾಜವನ್ನಒಂದುಗೂಡಿಸುವ ಕಾಲ ಬಂದಿದೆ ಎಂದು ಹೇಳಿದರು.
ವಿಶ್ವಹಿಂದೂಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ ಮಾತನಾಡಿ,ಭಾರತ ಸಾವಿರ ವರ್ಷಗಳ ದಾಸ್ಯದಿಂದ 1947 ರಲ್ಲಿ ಸ್ವಾತಂತ್ರ್ಯವಾಯಿತು ಭರತಖಂಡ ಸುಮಾರು ಸಾವಿರ ವರ್ಷ ಪರಕೀಯರ ದಾಸ್ಯಕ್ಕೆ ಒಳಪಟ್ಟಿತ್ತು ಸ್ವಾತಂತ್ರ್ಯಾ ನಂತರ
ಹಿಂದೂ ರಾಷ್ಟ್ರ ಆಗುತ್ತೆ ಎಂದುಕೊಂಡಿದ್ದೆವು. ಆದರೆ ಕೆಲವು ಮೂರ್ಖರಾಜಕಾರಣಿಗಳಿಂದ ಜ್ಯಾತ್ಯಾತೀತ ರಾಷ್ಟ್ರವಾಯಿತು
1964 ರಲ್ಲಿ ವಿ.ಹೆಚ್.ಪಿ ಸ್ಥಾಪನೆಯಾಯಿತು ಸನಾತನ ಧರ್ಮಕ್ಕೆ ಹೊಡೆತ ಬಂದಾಗ ಈ ದೇಶದ ಪ್ರಜೆಗಳಿಗೆ ಎಚ್ಚರಿಸಬೇಕು ನಿರ್ದೇಶನ ಕೊಡಬೇಕು ಅದಕ್ಕೊಸ್ಕರ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಹುಟ್ಟಿಕೊಂಡವು. ಅದೇ ರೀತಿ ವಿ.ಹೆಚ್.ಪಿ ಅನೇಕ ಸಮ್ಮೇಳನಗಳನ್ನು ಮಾಡಿತು.
ರಾಮಜನ್ಮಭೂಮಿ ಸಲುವಾಗಿ ಭಾರತದ ಸಂತರ ನಿರ್ದೇಶನ ದಂತೆ 1982ರ ನಂತರ 6 ರಥಯಾತ್ರೆಗಳು ನಡೆದವು.1984 ರಾಮಜನ್ಮಭೂಮಿ ರಥಯಾತ್ರೆಯ ರಕ್ಷಣೆಯ ಸಲುವಾಗಿ ಬಜರಂಗದಳ ಹುಟ್ಟಿಕೊಂಡಿತು. ಕೇಸರಿ ಶಾಲು ಹಾಕಿದ ಸಂಸ್ಕಾರಯುತ ತರುಣರು ಬಜರಂಗದಳದವರು ಎಂದು ಹೇಳಬಹುದು.
ಸನಾತನ ಎಂದರೆ ಶಾಶ್ವತ, ಸನಾತನ ದರ್ಮವನ್ನು ನಾಶಪಡುತ್ತೇನೆ ಎಂದು ಕೆಲವರು ಇತ್ತೀಚೆಗೆ ಹೇಳಿದ್ದರಿಂದ ನಮ್ಮ ಸಂತರ ಆದೇಶದ ಮೇರೆಗೆ ಶೌರ್ಯ ರಥಯಾತ್ರೆ ಸೆಪ್ಟೆಂಬರ್ 30 ಕ್ಕೆ ಪ್ರಾರಂಭವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಂಚರಿಸಿ ಈ ದಿನ ಸಿದ್ದಾಪುರ ದಲ್ಲಿ ಸಂಪನ್ನಗೊಳ್ಳಲಿದೆ. ಎಂದರು.