ಆದ್ಯೋತ್ ಸುದ್ದಿನಿಧಿ:
ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ಸೋಮಶೇಖರ ಮಂಜ ಜೋಗಿ ಎನ್ನುವವನು ಕಂದಾಯ ಭೂಮಿಯನ್ನು ಅತಿಕ್ರಮಿಸಿದ್ದಾನೆ ಎಂದು ಆರೋಪಿಸಿ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ಟೋಬರ್-8 ರಂದು ಅತಿಕ್ರಮಣ ಖುಲ್ಲಾಪಡಿಸಲು ಮುಂದಾಗಿದ್ದರು ಈ ಸಂದರ್ಭದಲ್ಲಿ ಮನನೊಂದ ಸೋಮಶೇಖರ ಜೋಗಿ ವಿಷಸೇವಿಸಿ
ಆತ್ಮಹತ್ಯೆಗೆ ಪ್ರಯತ್ನಸಿದ್ದನು ಶಿರಸಿ ರೋಟರಿಕ್ಲಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆತ ಮೃತನಾಗಿದ್ದಾನೆ.
ಘಟನೆಯ ವಿವರ:
ದೊಡ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ದೊಡ್ನಳ್ಳಿ ಗ್ರಾಮ ಸರ್ವೆ ನಂಬರ್ 21 ರಲ್ಲಿ ಕಂದಾಯ ಇಲಾಖೆಯು ಸುಮಾರು 16 ಎಕರೆ 19 ಗುಂಟೆ ಭೂಮಿಯನ್ನು ಹೊಂದಿದೆ. ಇದರಲ್ಲಿ ಸುಮಾರು 10 ಎಕರೆಯಲ್ಲಿ ಸೋಮಶೇಖರ ಜೋಗಿ ಕುಟುಂಬಸ್ಥರು1993ರಿಂದ ವ್ಯವಸಾಯ ಮಾಡಿಕೊಂಡಿದ್ದರು.
4 ಎಕರೆ ಪ್ರಾದೇಶಿಕಸಾರಿಗೆ ಇಲಾಖೆಗೆ, 20 ಗುಂಟೆ ದೊಡ್ನಳ್ಳಿ ಗ್ರಾಮದ ಸ್ಮಶಾನಕ್ಕೆ, 20 ಗುಂಟೆ ಗ್ರಾಮ ಚಾವಡಿಗೆ ಎಂದು
5 ಎಕರೆಯು ಮಂಜೂರಾಗಿದೆ.ಸುಮಾರು
ಒಂದೂವರೆ ಎಕರೆ ಭೂಮಿಯಲ್ಲಿ ಸೋಮಶೇಖರ ಜೋಗಿ ಅಡಿಕೆಸಸಿಯನ್ನು ನಾಟಿ ಮಾಡಿದ್ದ.ಇದನ್ನು ಖುಲ್ಲಾಪಡಿಸುವಂತೆ
ನೋಟಿಸ್ ನೀಡಲಾಗಿತ್ತು ಖುಲ್ಲಾ ಪಡಿಸದ ಕಾರಣ ಇಲಾಖೆ ತೆರವಿಗೆ ಮುಂದಾಗಿತ್ತು ಈ ಸಂದರ್ಭದಲ್ಲಿ ಜೋಗಿ ಆತ್ಮಹತ್ಯೆಗೆ ಮುಂದಾಗಿದ್ದ.24ದಿನ ಜೀವನ್ಮರಣದ ಹೋರಾಟ ನಡೆಸಿದ ಸೋಮಶೇಖರ ಇಂದು ಮೃತಪಟ್ಟಿದ್ದಾನೆ
—-
ಈಗಾಗಲೆ ಅರಣ್ಯ ಸಚೀವ ಈಶ್ವರ ಖಂಡ್ರೆಯವರು ಅರಣ್ಯ
ಅತಿಕ್ರಮಣ ಖುಲ್ಲಾ ಪಡಿಸಲು ಅಧಿಕಾರಿಗಳಿಗೆ
ಹಸಿರು ನಿಶಾನೆ ತೋರಿಸಿದ್ದಾರೆ.ಸರಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಕಂದಾಯ ಇಲಾಖೆಯು ಅತಿಕ್ರಮಣ ಖುಲ್ಲಾಪಡಿಸಲು ಕಟ್ಟುನಿಟ್ಟಿನ ಆದೇಶವನ್ನು ನೀಡಿಲ್ಲ ಇಂತಹ ಸಮಯದಲ್ಲಿ ಅತಿಕ್ರಮಣ ಖುಲ್ಲಾಪಡಿಸಲು ಅಧಿಕಾರಿಗಳು ಮುಂದಾಗಿರುವುದರ ಹಿಂದಿನ ಕಾರಣ ಏನು? ಈ ಜಾಗದ ಮೇಲೆ ಪ್ರಭಾವಿಗಳ ಕಣ್ಣೇನಾದರೂ ಇತ್ತೆ? ಇದೆಲ್ಲದಕ್ಕೂ ಉತ್ತರ ಸಿಗಬೇಕಾಗಿದೆ
.ಅಧಿಕಾರಿಗಳು ಸಚೀವರ ಹಸಿರುನಿಶಾನೆಯಿಂದ ಸ್ಪೂರ್ತಿಗೊಂಡು ಅತಿಕ್ರಮಣ ಖುಲ್ಲಾಪಡಿಸಲು ಮುಂದಾದಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಆತ್ಮಹತ್ಯೆ ನಡೆಯುವುದು ಖಂಡಿತಾ.
———
ದೊಡ್ನಳ್ಳಿ ಗ್ರಾಮದ ರೈತ ಸೋಮಶೇಖರ ಜೋಗಿ ಸಾವಿಗೆ ಕಂದಾಯ ಇಲಾಖೆಯ ಅಧಿಕಾರಿಗಳೇ ನೇರ ಕಾರಣವಾಗಿದ್ದು ಸರಕಾರ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು
ಸರಕಾರದ ಸೂಚನೆ ಇಲ್ಲದಿದ್ದರೂ ಅಧಿಕಾರಿಗಳು ಅತಿಕ್ರಮಣ ಖುಲ್ಲಾಪಡಿಸಲು ಮುಂದಾಗಿರುವುದು ಖಂಡನೀಯವಾಗಿದ್ದು ಮುಂದಿನದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆಯಾಗದಂತೆ ಸರಕಾರ ಕ್ರಮ ತೆಗೆದುಕೊಳ್ಳ ಬೇಕು ಎಂದು ಅರಣ್ಯ ಅತಿಕ್ರಮಣ ಹೋರಾಟವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.