ಸಮಸ್ಯೆಗಳು ಹುಟ್ಟಲು ಅಧರ್ಮವೇ ಕಾರಣ–ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರ ಕಲಗದ್ದೆ ಶ್ರೀನಾಟ್ಯವಿನಾಯಕ ಹಾಗೂ ಲಲಿತಾರಾಜರಾಜೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗಿರುವ ಗಾಯತ್ರಿ ಜಪಯಜ್ಞದಲ್ಲಿ ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ದಿವ್ಯಸಾನ್ನಿಧ್ಯವಹಿಸಿದ್ದರು‌

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು,ಮನುಷ್ಯರಲ್ಲಿ ಅಧರ್ಮವು ಹೆಚ್ಚುತ್ತಿದ್ದು ಇದರಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತಿವೆ‌.ಮನುಷ್ಯನಿಗೆ,ಗಿಡ-ಮರಗಳಿಗೆ,ಪಶು-ಪಕ್ಷಿಗಳಿಗೆ
ರೋಗ ಹೆಚ್ಚಾಗುತ್ತಿದೆ.ಇದೆಲ್ಲದಕ್ಕೂಅಧರ್ಮವೇ ಮೂಲ ಕಾರಣ.ಕೊರೋನಾದಂತಹ ಸಮಸ್ಯೆ ಮನುಷ್ಯನಿಗೆ ಕಾಡುತ್ತಿದೆ. ಮರಕ್ಕೆ ಎಲೆ ಚುಕ್ಕೆ ರೋಗ ಬಂದಿದೆ. ಪರಿಹಾರ ಸಿಕ್ಕಿಲ್ಲ. ದೇವರೇ ಕಾಪಾಡಬೇಕು ಎಂಬ ಸ್ಥಿತಿಯಲ್ಲಿದೆ. ಪೂಜಿಸುವ ಗೋವುಗಳಿಗೆ ಚರ್ಮಗಂಟು ರೋಗ ಬಂದಿದೆ. ಅಧರ್ಮ ಹೆಚ್ಚಿದ್ದು ರೋಗಗಳಿಗೆ ಮೂಲ‌ ಕಾರಣ. ಉತ್ತರ ಕಾಣದ ಸಮಸ್ಯೆ, ರೋಗಗಳಿಗೆ ಅಧರ್ಮ ಕಾರಣ. ಇದರ ನಿವಾರಣೆಗೆ ಗಾಯತ್ರೀ ಮಾತೆ ಉಪಾಸನೆ ‌ಮಾಡಬೇಕು ಎಂದರು.

ಅಶುದ್ಧವಾದ ಮನಸ್ಸು ಅನೇಕ‌ ಸಮಸ್ಯೆಗಳಿಗೆ ಕಾರಣ ಆಗುತ್ತಿದೆ. ಕುಟುಂಬ ಕಲಹಗಳು, ಪತಿ ‌ಪತ್ನಿಯರ ವಿರಸಗಳು ಹೆಚ್ಚಾಗುತ್ತಿದೆ. ಪತಿ ಪತ್ನಿಯರೇ ದೂರವಾದರೆ ಕುಟುಂಬ ವ್ಯವಸ್ಥೆಗೇ‌ ಧಕ್ಕೆ ಆಗಲಿದೆ. ನಮ್ಮ ಮನಸ್ಸು ಶುದ್ದವಾಗಿದ್ದರೆ ಇಂಥ‌ ಕಲಹಗಳು ಇರುವದಿಲ್ಲ. ಮನಸ್ಸು ಶುದ್ದಿಗೆ, ರೋಗ ರುಜಿನೆಗಳ ನಿವಾರಣೆಗೆ, ಆರೋಗ್ಯಕ್ಕೆ, ಭಗವಂತನ ಸಾಕ್ಷಾತ್ಕಾರಕ್ಕೆ ಇಂಥ ಗಾಯತ್ರೀ ಮಾತೆ ಉಪಾಸನೆ ಸದಾ ಆಗಬೇಕು ಎಂದರು.

ಗಾಯತ್ರೀ ಎಂದರೆ ಬ್ರಹ್ಮ ವಿದ್ಯೆ. ಬ್ರಹ್ಮ ಸಾಕ್ಷಾತ್ಕಾರಕ್ಕೆ ಗಾಯತ್ರಿ ಉಪಾಸನೆ ಮಾಡಬೇಕು. ಬ್ರಹ್ಮ ವಿದ್ಯೆಯ ಮೂಲಕ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಪರಮಾತ್ಮನ ಅನುಭವಕ್ಕೆ ಗಾಯತ್ರೀ ಉಪಾಸನೆ ಮಾಡಬೇಕು .
ಗಾಯತ್ರೀ ಉಪಾಸನೆ ನಿತ್ಯವೂ ಆಗಬೇಕಾದ ಅನುಷ್ಠಾನ. ಉಪನೀತರು ಮಾಡಬೇಕಾದ ಮೂಲಭೂತ ಕರ್ತವ್ಯ ಗಾಯತ್ರೀ ಉಪಾಸನೆ ಎಂದು ಹೇಳಿದರು.

ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ರಷ್ಮಿ ಹೆಗಡೆ ದಂಪತಿಗಳು ಶ್ರೀಗಳ ಪಾದ ಪೂಜೆ ನಡೆಸಿದರು.
ಈ ವೇಳ ಗಾಯತ್ರೀ‌ ಮಹಾಸತ್ರದ ಎರಡನೇ ದಿನದ ಪೂರ್ಣಾಹುತಿಯಲ್ಲಿ ಶ್ರೀಗಳು ಪಾಲ್ಗೊಂಡರು. ಮಾತೆಯರು ಲಲಿತಾ ಸಹಸ್ರನಾಮ ಅರ್ಚನೆ‌ ನಡೆಯಿತು.

About the author

Adyot

Leave a Comment