ಆದ್ಯೋತ್ ಸುದ್ದಿನಿಧಿ
ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ಇವರು ನವೆಂಬರ್ 8 ರಿಂದ ಕರೆ ನೀಡಿರುವ ಅಸಹಕಾರ ಚಳವಳಿಗೆ ತಾಲ್ಲೂಕು ಘಟಕ ಸಿದ್ದಾಪುರ ಪರವಾಗಿ ಕಾರ್ಯ ನಿರ್ವಾಹಕ ಅಧಿಕಾರಿ ದೇವರಾಜ ಹಿತ್ಲಕೊಪ್ಪ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಚಳವಳಿಯ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸುವುದು, ಮೇಲಾಧಿಕಾರಿಗಳ ಸಭೆಗೆ ಗೈರು ಹಾಜರಾಗುವುದು, ಇಲಾಖೆಯ ಎಲ್ಲ ವಾಟ್ಸಾಪ್ ಟೆಲಿಗ್ರಾಮ್ ಗ್ರೂಪ್ ಗಳಿಂದ ಹೊರಬರುವುದು ಸೇರಿದೆ. ಕೇವಲ ಜನರ ಮೂಲಭೂತ ಸೇವೆಗಳನ್ನು ಮಾತ್ರ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಪಿಡಿಒ ಸಂಘದ ತಾಲ್ಲೂಕಾ ಅಧ್ಯಕ್ಷ ಹರ್ಷ ರಾಠೋಡ, ತಾಲ್ಲೂಕಾ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಖಜಾಂಚಿ ಈರಣ್ಣ ಇಲಾಳ ಸೇರಿದಂತೆ ವಿವಿಧ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
#####
ಉತ್ತರಕನ್ನಡ ಜಿಲ್ಲಾ ರೈತಸಂಘದ ಮಾದ್ಯಮ ವಕ್ತಾರರನ್ನಾಗಿ ಸಿದ್ದಾಪುರ ಹಾಳದಕಟ್ಟಾದ ಇಲಿಯಾಸ್ ಇಬ್ರಾಹಿಂ ಸಾಬ್ ರನ್ನು ನೇಮಕ ಮಾಡಲಾಗಿದೆ.ಈ ಕುರಿತು ರೈತಸಂಘದ ಅಧ್ಯಕ್ಷ ಕೆರಿಯಪ್ಪ ಗಣಪತಿ ನಾಯ್ಕ ಪ್ರಕಟಣೆ ನೀಡಿರುತ್ತಾರೆ.