ಗಂಗಾಂಬಿಕಾ ಶೋಭಾಯಾತ್ರೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ಭೀಮಣ್ಣ

ಆದ್ಯೋತ್ ಸುದ್ದಿನಿಧಿ:
ಗಂಗಾಷ್ಟಮಿಯ ಪ್ರಯುಕ್ತ ಸಿದ್ದಾಪುರದ ಗಂಗಾಮಾತಾ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಂಡು ಸ್ವತಃ ಟ್ರ್ಯಾಕ್ಟರ್ ಚಲಾಯಿಸಿದರು.

ಸೋಮವಾರ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭೀಮಣ್ಣ ನಾಯ್ಕ ಯಾತ್ರೆಯ ಟ್ರ್ಯಾಕ್ಟರನ್ನು ತಾವೇ ಚಲಾಯಿಸಿ ಯಾತ್ರೆಗೆ ಚಾಲನೆ ನೀಡುವ ಮೂಲಕ ಗಮನ ಸೆಳೆದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ನಾಗರಾಜ, ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ ಸೇರಿದಂತೆ ಗಂಗಾಮಾತಾ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About the author

Adyot

Leave a Comment