ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ನಿಡಗೋಡು ಉಪವಲಯ ಅರಣ್ಯಾಧಿಕಾರಿ ವಿನಾಯಕ ಮಡಿವಾಳರನ್ನು ತಾಲೂಕಿನಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೇತೃತ್ವದಲ್ಲಿ ಶುಕ್ರವಾರ ಎಸಿಎಪ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಆದರೆ ಎಸಿಎಪ್ ಪ್ರವೀಣ ಬಸ್ರೂರರವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ವಲಯ ಅರಣ್ಯಾಧಿಕಾರಿಗಳನ್ನು ವಗಾವಣೆ ಮಾಡುವ ಅಧಿಕಾರ ನನಗಿಲ್ಲ ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸುತ್ತೇನೆ ಎಂದು ಹೇಳಿದರು ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ಡಿಎಪ್ಓಕರೆಯಿಸಿರಿ ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು ಸುಮಾರು ಒಂದು ಗಂಟೆಕಳೆದರೂ ಡಿಎಪ್ಓ ಬರದ ಕಾರಣ ಪ್ರತಿಭಟನಾಕಾರರು ಬಸ್ ನಿಲ್ದಾಣದ ಎದುರು ರಸ್ತೆ ತಡೆ ನಡೆಸಿದರು. ನಂತರ ಎಸಿಎಪ್ ಸ್ಥಳಕ್ಕೆ ಆಗಮಿಸಿ ಒಂದುವಾರದಲ್ಲಿ ವಿನಾಯಕ ಮಡಿವಾಳರನ್ನು ಬೇರೆ ತಾಲೂಕಿಗೆ ವರ್ಗಾ ಮಾಡಲು ಡಿಎಪ್ಓ ಒಪ್ಪಿದ್ದಾರೆ ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ವಸಂತ ನಾಯ್ಕ ಮಾತನಾಡಿ, ನಾವು ನಡೆಸುತ್ತಿರುವ ಪ್ರತಿಭಟನೆ ನಮ್ಮ ಸರ್ಕಾರದ ವಿರುದ್ಧ ಅಥವಾ ನಮ್ಮ ಶಾಸಕರ ವಿರುದ್ಧ ಹಾಗೂ ಯಾವುದೇ ಜನಪ್ರತಿನಿಧಿಗಳ ವಿರುದ್ಧ ಅಲ್ಲ. ಸಾರ್ವಜನಿಕರ ಅಹವಾಲುಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದೆವೆ. ತಾಲೂಕಿನ ಅರಣ್ಯಾಧಿಕಾರಿ ವಿನಾಯಕ ಮಡಿವಾಳ ಸೇರಿದಂತೆ ಮೂವರು ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು ಇವರನ್ನು ವರ್ಗಾಯಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಮಾಡುತ್ತಿದ್ದೆವೆ ತಾಲೂಕಿನಲ್ಲಿ ಕಳೆದ ೫೦-೬೦ ವರ್ಷದಿಮದ ಅರಣ್ಯ ಪ್ರದೇಶದಲ್ಲಿ ಕೃಷಿ ನಡೆಸಿ ಜೀವನ ನಡೆಸುತ್ತಿದ್ದಾರೆ ಆದರೆ ಅರಣ್ಯಾಧಿಕಾರಿಗಳು ೩-೫ ಗುಂಟೆ ಜಿಪಿಎಸ್ ಮಾಡಿ ಉಳಿದ ಕಡೆ ಕೃಷಿ ಚಟುವಟಿಕೆ ನಡೆಸಲು ಅಡ್ಡಿಪಡಿಸುತ್ತಿದ್ದಾರೆ ಇದೆಲ್ಲವನ್ನು ಬಂದ್ ಮಾಡಬೇಕು ಒಂದು ವಾರದಲ್ಲಿ ಈ ಅರಣ್ಯಾಧಿಕಾರಿಯನ್ನು ತಾಲೂಕಿನಿಂದ ವರ್ಗಾಯಿಸದಿದ್ದರೆ ಮುಂದಿನವಾರ ಉಗ್ರಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.