ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಅರಣ್ಯಾಧಿಕಾರಿ ವಿನಾಯಕ ಮಡಿವಾಳರ ವರ್ಗಾವಣೆಗೆ ಮಡಿವಾಳ ಸಮಾಜದ ಯುವಮಡಿವಾಳಸಮಾಜ ಸಂಘಟನೆ ತೀವ್ರವಾಗಿ ವಿರೋಧಿಸಿದ್ದು ವರ್ಗಾವಣೆ ರದ್ದುಪಡಿಸುವಂತೆ ತಹಸೀಲ್ದಾರರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಿದ್ದಾಪುರ ಕಾಂಗ್ರೆಸ್ ನಾಯಕರುಗಳು ಅರಣ್ಯ ಇಲಾಖೆಯ, ದಕ್ಷ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಯಾದ ವಿನಾಯಕ ಪಿ. ಮಡಿವಾಳರವರನ್ನು ಮಡಿವಾಳ ಸಮಾಜದವನು ಎನ್ನುವ ಕಾರಣಕ್ಕೆ ಹಾಗೂ ಕಾಂಗ್ರೆಸನ ಕೆಲ ನಾಯಕರ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿಲ್ಲವೆಂದು ಪದೇ ಪದೇ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾ ಬಂದಿರುತ್ತಾರೆ, ಮಡಿವಾಳ ಸಮಾಜದ ಅಧಿಕಾರಿಗೆ ತೊಂದರೆ ಕೊಡುತ್ತಿರುವುದಲ್ಲದೆ ಅವರನ್ನು ಸುಳ್ಳು ಆರೋಪ ಹೊರಿಸಿ ಸಿದ್ದಾಪುರ ತಾಲೂಕಿನಿಂದಲೇ ವರ್ಗಾವಣೆ ಮಾಡಿಸಲು ಕಾಂಗ್ರೇಸ್ ನಾಯಕರುಗಳು ಷಡ್ಯಂತರ ಮಾಡುತ್ತಿದ್ದಾರೆ.
ವಿನಾಯಕ ಪಿ. ಮಡಿವಾಳ ಇವರು ನಿಜವಾಗಿಯು ಜನ ಸಾಮಾನ್ಯರಿಗೆ ತೊಂದರೆ ಮಾಡಿದ್ದೇ ಆದಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರವೇ ಅಧಿಕಾರದಲ್ಲಿ ಇದ್ದು, ಅವರದೇ ಆದ ಅರಣ್ಯ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿದ್ದಾರೆ. ಕಾಂಗ್ರೇಸ್ ಶಾಸಕರೇ ಕ್ಷೇತ್ರದಲ್ಲಿ ಇರುವುದರಿಂದ ವಿಷಯವನ್ನು ಅವರ ಗಮನಕ್ಕೆ ತಂದು ವರ್ಗಾವಣೆ ಮಾಡಿಸಬಹುದಿತ್ತು. ಆದರೆ,ಕಾಂಗ್ರೇಸ್ ನಾಯಕರ ಉದ್ದೇಶ ಮಡಿವಾಳ ಸಮುದಾಯವನ್ನು ಅವಮಾನಿಸುವುದೇ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದರು. ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿರುತ್ತಾರೆ. ಕಾಂಗ್ರೆಸ್ ನಾಯಕರು ವೈಯಕ್ತಿಕ ಹಿತಾಸಕ್ತಿಗೊಸ್ಕರ. ರಾಜಕೀಯ ಲಾಭಕೋಸ್ಕರ ತಮ್ಮದೇ ಸರಕಾರ ಇದ್ದರು. ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್’ ನಾಯಕರು ಇಷ್ಟೆಲ್ಲಾ ದೌರ್ಜನ್ಯ ನಡೆಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದರು, ಶಾಸಕ ಭೀಮಣ್ಣ ನಾಯ್ಕ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಯಾವುದೇ ಕಾರಣಕ್ಕೂ ಕಾಂಗ್ರೇಸ್ ನಾಯಕರುಗಳ ಒತ್ತಡಕ್ಕೆ ಮಣಿದು ವಿನಾಯಕ ಪಿ. ಮಡಿವಾಳ ರವರನ್ನು ವರ್ಗಾವಣೆ ಮಾಡಬಾರದು ವರ್ಗಾವಣೆ ಮಾಡಿದಲ್ಲಿ ಅಧಿಕಾರಿಗಳು ಹಾಗೂ ಸರಕಾರದ ವಿರುದ್ಧ ಯುವ ಮಡಿವಾಳ ಸಮಾಜವು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು
ಮನವಿಯಲ್ಲಿ ಎಚ್ಚರಿಸಲಾಗಿದೆ.