ಆದ್ಯೋತ್ ಸುದ್ದಿನಿಧಿ:
ಧಾರವಾಡದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕ ಏರ್ಪಡಿಸಿದ “ಶಿಕ್ಷಣ ಪುನಶ್ಚೇತನ ಶಿಬಿರ” ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬೈಲೂರು ನಿಷ್ಕಳ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಜಿ ಮಾತನಾಡಿ,ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರುಗಳನ್ನು ಗೌರವಿಸಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಶಿಕ್ಷಕ-ಶಿಕ್ಷಣ ಸಂಸ್ಕೃತಿಯ ಸಾಕಾರ ರೂಪವಾಗಿದ್ದು, ಇಂತಹ ಶಿಕ್ಷಕರುಗಳನ್ನು ಗುರುತಿಸಿ ಗೌರವಿಸಬೇಕೆಂದರು. ಮಾನವ ಕುಲದ ಅಸ್ಮತೆಯ ಕೇಂದ್ರ ಶಾಲೆ, ಶಿಕ್ಷಕರು ಸಹನಶೀಲರು, ಸಾಧಕರು, ಧಾರ್ಮಿಕ ಧರ್ಮ ಗುರುಗಳು ಸಹ ಸಮಾಜ ಸುದಾರಣೆಯ ಶಿಕ್ಷಕರು. ನಾನು ಸಹ ಶಿಕ್ಷಕ. ಪವಾಡ ನಂಬಿಕೆ, ಮೌಡ್ಯಗಳಿಂದ ಹೊರ ಬಂದು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದರು.
ಅಖಿಲ ಭಾರತ ಶಿಕ್ಷಕರ ಫೆಡರೇಷನ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ,ಸಾಮಾಜಿಕ ನ್ಯಾಯ ಪರಿಪಾಲನೆ, ಸಮ ಸಮಾಜದ ನಿರ್ಮಾಣ ಮಾಡುವ ಗುರಿಯನ್ನು ಪರಮ ಪೂಜ್ಯ ಶ್ರೀ ನಿಜಗುಣಾಂದ ಮಹಾಸ್ವಾಮಿಗಳು ಹೊಂದಿದ್ದಾರೆ. ಪ್ರಗತಿ ಪರ ವಿಚಾರ ಧಾರೆಯು ನಮ್ಮಲ್ಲರಿಗೆ ಸ್ಪೂರ್ತಿದಾಯಕವಾಗಿದೆ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರುಗಳಿಗೆ ಕಾರ್ಯದ ಒತ್ತಡ ಜಾಸ್ತಿ ಇದ್ದು, ಇದರಿಂದ ಗುಣಾತ್ಮಕ ಶಿಕ್ಷಣ ನೀಡುವುದು ಕಷ್ಟಸಾಧ್ಯವಾಗುತ್ತದೆ. ಶಿಕ್ಷಣ ಪುನಶ್ಚೇತನ ಶಿಬಿರದಿಂದ ಶಿಕ್ಷಕರಿಗೆ ಅನುಕೂಲವಾಗಿದ್ದು ಶಿಕ್ಷಣೇತರ ಕಾರ್ಯಗಳಿಂದ ಶಿಕ್ಷಕರುಗಳನ್ನು ಮುಕ್ತಗೊಳಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಾ.ಶಿ ಇಲಾಖೆಯ ಉಪನಿರ್ದೇಶಕ ಎಸ್.ಎಸ್ ಕೆಳದಿಮಠ, ಇದ್ದ ವ್ಯವಸ್ಥೆಯನ್ನು ಸರಿಮಾಡಿಕೊಂಡು ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.
ಜಿಲ್ಲಾಧ್ಯಕ್ಷ ವಿ.ಎಫ್ ಚುಳಕಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಯಶ್ರೀ ಕಾರೇಕರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ, ರಾಮಕೃಷ್ಣ ಸದಲಗಿ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ಧನಗೌಡರ, ರಾಜ್ಯ ಉಪಾಧ್ಯಕ್ಷ ವಾಯ್.ಎಚ ಬಣವಿ, ಕಾಂಚನಾ ರಾಯ್ಕರ, ಖಾನವಿ, ಬಡೇಖಾನವರ, ಎಚ್.ಪಿ ನದಾಫ, ಜಗದೀಶ ವಿರಕ್ತಮಠ, ಶಾಂತಾ ಶೀಲವಂತ, ಎಮ್.ಆರ್ ಕಬ್ಬೇರ, ಎ.ಆರ್ ದೇಸಾಯಿ, ಎನ್.ಎಸ್ ಕಮ್ಮಾರ, ಮಂಜುನಾಥ ಜಂಗಲಿ, ಯು.ಬಿ ಶಿರಹಟ್ಟಿ, ಎಮ್.ಎಮ್ ಘೋಡಕೆ, ಎಸ್.ಡಿ ಕೋರಿ, ಎ.ಎಸ್ ಹುಬ್ಬಳ್ಳಿ, ಜೆ.ಕೆ ಉಳ್ಳಟ್ಟಿ ಎಸ್.ಎ ಚಿಕ್ಕನರ್ತಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ವಿ.ಎಫ್ ಚುಳಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ ಕೇಸರಿ ಕಾರ್ಯಕ್ರಮ ನಿರೂಪಿಸಿದರು.