ಶಿರಸಿ:ಕದಂಬ ಮಾರ್ಕೆಟಿಂಗ್‌ ಚುನಾವಣೆ – ಹಾಲಿ ಆಡಳಿತ ಮಂಡಳಿಯ ಜಯಭೇರಿ*

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ
ಕದಂಬ ಮಾರ್ಕೆಟಿಂಗ್‌ ಸೌಹಾರ್ದ ಸಹಕಾರಿ ಚುನಾವಣೆ ನಡೆದಿದ್ದು ಹಾಲಿ ಆಡಳಿತ ಮಂಡಳಿಯ ಗಣಪತಿ ನರಸಿಂಹ ಹೆಗಡೆ ಮುರೇಗಾರ, ಗಣಪತಿ ಪರಮೇಶ್ವರ ಭಟ್ಟ ಕಲ್ಮನೆ, ಗುರುಪಾದ ಮಂಜುನಾಥ ಹೆಗಡೆ ಬೊಮ್ನಳ್ಳಿ, ಗೋಪಾಲಕೃಷ್ಣ ಸುಬ್ರಾಯ ಭಟ್ಟ ಹಂಡ್ರಮನೆ, ತಿಮ್ಮಪ್ಪ ವಿಶ್ವೇಶ್ವರ ಹೆಗಡೆ ಬೆದೆಹಕ್ಲು, ನರೇಂದ್ರ ಮಧುಕರ ಹೆಗಡೆ ಕೊಟ್ಟಿಗೆಮನೆ, ನರೇಂದ್ರ ಸೀತಾರಾಮ ಹೆಗಡೆ ಹೊಂಡಗಾಶಿ, ನಾರಾಯಣ ಮಹಾಬಲೇಶ್ವರ ಹೆಗಡೆ ಗಡೀಕೈ, ಮಂಜುನಾಥ ವೆಂಕಟ್ರಮಣ ಭಟ್ಟ ತಟ್ಟೀಕೈ, ಶಂಭುಲಿಂಗ ಗಣಪತಿ ಹೆಗಡೆ ಹೆಬ್ಬಳ್ಳಿ, ಶ್ರೀಪಾದ ಗಣಪತಿ ಹೆಗಡೆ ದೊಡ್ನಳ್ಳಿಯವರು ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಗಳಲ್ಲಿ ಜಯಗಳಿಸಿದರು.
ಪ್ರತಿಭಾ ದೇವ ಬೆಳಲೆ, ಆಶಾಲತಾ ಹೆಗಡೆ ವಡಗೇರಿ ಮಹಿಳಾ ಮೀಸಲು ಹಾಗೂ ಕೇಶವ ನಾಯ್ಕ ಸೋಂದಾರವರು ಹಿಂದುಳಿದ ವರ್ಗದಿಂದ ಅವಿರೋಧವಾಗಿ ಆಯ್ಕೆಯಾದರು. ತನ್ಮೂಲಕ ಈವರೆಗಿದ್ದ ಆಡಳಿತ ಮಂಡಳಿಯೇ ಮುಂದಿನ ಐದು ವರ್ಷಗಳ ಆಡಳಿತ ಚುಕ್ಕಾಣಿ ಹಿಡಿಯಲಿದ್ದು ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆ ನಡೆದದ್ದು ವಿಶೇಷವಾಗಿತ್ತು.
ಗೆದ್ದ ಎಲ್ಲ ಸದಸ್ಯರ ಪರವಾಗಿ ಕದಂಬ ಮಾರ್ಕೆಟಿಂಗ್‌ ಅಧ್ಯಕ್ಷರಾದ ಶಂಭುಲಿಂಗ ಹೆಗಡೆಯವರು ಚುನಾವಣೆಯಲ್ಲಿ ಮತ ಚಲಾಯಿಸಿದ ಸದಸ್ಯರಿಗೆ, ರಿಟರ್ನಿಂಗ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಆರ್‌ ವಿ ಹೆಗಡೆಯವರಿಗೆ,ಚುನಾವಣೆಯನ್ನ ಸುಸೂತ್ರವಾಗಿ ನಡೆಸಿಕೊಟ್ಟ ಟಿ ಆರ್‌ ಸಿ, ಟಿ ಎಸ್‌ ಎಸ್‌, ಟಿಎಂಎಸ್‌, ಉಮ್ಮಚಗಿ ಸೊಸೈಟಿ ಸಿಬ್ಬಂದಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

About the author

Adyot

Leave a Comment