ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಇಲಾಖೆಯವರಿಂದ ತೊಂದರೆ ಉಂಟಾಗುತ್ತಿದ್ದು ಅರಣ್ಯವಾಸಿಗಳಿಗೆ ಬೆಂಬಲವಾಗಿ ನಿಂತಿರುವ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೊಂದರೆಗೊಳಗಾದವರ ರಕ್ಷಣೆಗೆ ತಕ್ಷಣ ಸ್ಪಂದಿಸಲು ಅರಣ್ಯವಾಸಿಗಳ ಕಾವಲು ಪಡೆ ರಚಿಸಲು ತೀರ್ಮಾನಿಸಿದೆ.
ಈ ಕುರಿತು ಸಿದ್ದಾಪುರದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಅರಣ್ಯಭೂಮಿಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದ್ದಾರೆ.
ಅರಣ್ಯವಾಸಿಗಳ ಸಾಗುವಳಿ ಭೂಮಿಗೆ ಸಂಬಂಧಿಸಿ ಹಾಗೂ ಅರಣ್ಯವಾಸಿಯ ಹಿತ ಕಾಪಾಡುವ ದೃಷ್ಟಿಯಿಂದ ಅರಣ್ಯವಾಸಿಗಳ ಕಾವಲು ಪಡೆ ರಚಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರಿಗೆ ಅರಣ್ಯ ಸಿಬ್ಬಂದಿಗಳಿAದ ದೌರ್ಜನ್ಯ, ಕಿರುಕುಳ, ಅರಣ್ಯ ಭೂಮಿ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕ್ಷೇತ್ರಕ್ಕೆ ಸಂಬಂಧಿಸಿ ಸಮಸ್ಯೆ ಉಂಟಾದಾಗ ಅಂತಹ ಅರಣ್ಯವಾಸಿಗಳು ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನ ಹೋರಾಟಗಾರರ ವೇದಿಕೆಯ ಕಾರ್ಯಾಲಯ ವಾಟ್ಸ ಆಫ್ ನಂ ಗೆ ಮಾಹಿತಿ ನೀಡತಕ್ಕದ್ದು. ಇಂತಹ ಪ್ರಕರಣಕ್ಕೆ ಹೋರಾಟಗಾರರ ವೇದಿಕೆಯು ಸ್ಫಂದಿಸುವುದು ಎಂದು ರವೀಂದ್ರ ನಾಯ್ಕ ಹೇಳಿದರು.
ಕಳೆದ ೩೩ ವರ್ಷದಿಂದ ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರವಾಗಿ ಹೋರಾಟ ಜರುಗಿಸುತ್ತಿದ್ದೆವೆ ಯಾವುದೇ ಸರಕಾರವಿದ್ದರೂ ನಮ್ಮ ಹೋರಾಟ ನಿಂತಿಲ್ಲ ಕಟ್ಟಕಡೆಯ ಅರಣ್ಯವಾಸಿಗಳಿಗೂ ಭೂಮಿ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಿರುತ್ತದೆ ಸುಮಾರು ೩೮೫೧೧ ಕುಟುಂಬದವರು ನಮ್ಮ ಹೋರಾಟ ವೇದಿಕೆಯ ಸದಸ್ಯತ್ವ ಪಡೆದಿದ್ದಾರೆ ಯಾವುದೇ ರೀತಿಯ ಸದಸ್ಯತ್ವ ಶುಲ್ಕವನ್ನು ಪಡೆದಿಲ್ಲ ಇಂತಹ ಸಂಘಟನೆ ಬೇರೆ ಯಾವುದೂ ಇಲ್ಲ. ನಮ್ಮ ಸಂಘಟನೆ ಸುಶೀಕ್ಷಿತರನ್ನು ಹೊಂದಿಲ್ಲ ಆರ್ಥಿಕವಾಗಿ,ಶ್ಗೆöÊಕ್ಷಣಿಕವಾಗಿ,ಸಾಮಾಜಿಕವಾಗಿ ಹಿಂದುಳಿದವರೆಲ್ಲರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಅರಣ್ಯವಾಸಿಗಳ ಕೇಸ್ ಸುಪ್ರಿಂಕೋರ್ಟನಲ್ಲಿದೆ ಸುಮಾರು 36 ಸಂಘಟನೆಯವರು ತಮ್ಮನ್ನು ಪಾರ್ಟಿಯಾಗಿ ಸ್ವೀಕರಿಸಬೇಕು ಎಂದು ಸುಪ್ರಿಂನಲ್ಲಿ ಅರ್ಜಿ ಸಲ್ಲಿಸಿದ್ದರು ಆದರೆ ನಮ್ಮ ಸಂಘÀಟನೆಗೆ ಮಾತ್ರ ಅವಕಾಶ ಸಿಕ್ಕಿದೆ. ನಾವು ಯಾವುದೇ ಹಿಂಸಾಚರಣೆಯ ಹೋರಾಟ ಮಾಡಿಲ್ಲ ಶಾಂತಿಯುತವಾಗಿ ಕಾನೂನು ಬದ್ದವಾಗಿ ಹೋರಾಟಮಾಡುತ್ತಿದ್ದೆವೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆನೆ ಆದರೆ ನಮ್ಮ ಹೋರಾಟ ಪಕ್ಷಾತೀತವಾಗಿದೆ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಮುರುಡೇಶ್ವರದಿಂದ ಕಾರವಾರದವರೆಗೆ ಪಾದಯಾತ್ರೆ ನಡೆಸಿ ಹೋರಾಟ ಮಾಡಿದ್ದೆವೆ. ನಮ್ಮ ಹೋರಾಟ ಜಾತಿ,ಧರ್ಮ,ಪಕ್ಷವನ್ನು ಮೀರಿದ್ದಾಗಿದ್ದು ಅನ್ಯಾಯಕ್ಕೊಳಗಾದ ಅರಣ್ಯವಾಸಿಗಳ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮುಂಡಗೋಡು ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ,ಯಲ್ಲಾಪುರ ತಾಲೂಕಾಧ್ಯಕ್ಷ ಭೀಮ್ಸಿ ವಾಲ್ಮಿಕಿÀ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಮಂಜುನಾಥ ಮಡಿವಾಳ ಹಾರ್ಸಿಕಟ್ಟಾ, ಸುನಿಲ್ ನಾಯ್ಕ ಸಂಪಖAಡ, ವಿಜಯ ನಾಯ್ಕ ಕಾನಗೋಡ, ದಿನೇಶ್ ನಾಯ್ಕ ಬೇಡ್ಕಣಿ, ಬಾಲಕೃಷ್ಣ ನಾಯ್ಕ ಕೊಲಸಿರ್ಸಿ, ರಾಘವೇಂದ್ರ ಕವಂಚೂರು, ಇಸ್ಮಾಯಿಲ್ ಶೇಖ್ ಹೆರೂರ್, ಮಾದೇವಿ ನಾಯ್ಕ, ಜೈವಂತ ಕಾನಗೋಡ, ಎಮ್ ಆರ್ ನಾಯ್ಕ ಬೇಡ್ಕಣಿ, ವಿಜಯ ನಿಡಗೋಡ, ರವಿ ನಾಯ್ಕ ಹಂಜಗಿ, ರುಕ್ಮಿಣಿ ಈಶ್ವರ ನಾಯ್ಕ, ನೇತ್ರಾವತಿ ದಿನಕರ ಬಾಂಧಿ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ ಮುಂತಾದವರು ಉಪಸ್ಥಿತರಿದ್ದರು.
——
ಅರಣ್ಯ ಭೂಮಿ ಹಕ್ಕಿನ ಹೋರಾಟ ಜಾತಿ, ಮತ, ಧರ್ಮ, ಪಕ್ಷ, ಬೇಧ-ಭಾವ ಆಧಾರಿತವಲ್ಲ. ಅರಣ್ಯವಾಸಿಗಳ ಸಮಸ್ಯೆಗೆ ಅರಣ್ಯ ಭೂಮಿ ಹಕ್ಕು ನೀಡುವುದೇ ಮೂಲಭೂತ ಉದ್ದೇಶ.ಅರಣ್ಯ ಭೂಮಿ ಹೋರಾಟದ ೩೩ ವರ್ಷದ ಇತಿಹಾಸದಲ್ಲಿ ಕಾನೂನು ಬಾಹಿರ ಕೃತ್ಯವನ್ನಾಗಲೀ, ಅರಣ್ಯವಾಸಿಗಳಿಗೆ ಉತ್ತೇಜಿಸಿ ಗಲಭೆ, ದೊಂಬೆ ರಹಿತ ಹೋರಾಟ ಮಾಡಲಾಗಿದೆ ಆದರೆ ಬಿಜೆಪಿಯ ಕೆಲವು ಮುಖಂಡರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಹೋರಾಟದ ಸ್ಮರಣ ಸಂಚಿಕೆಯನ್ನು ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಬಿಡುಗಡೆಗೊಳಿಸಿದ್ದೆವೆ,ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ನಮ್ಮ ಹೋರಾಟ ನಡೆದಿದೆ.ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಭೂಕಬಳಿಕೆ ಕಾನೂನು ಜಾರಿಗೆ ತಂದು ಬಡವರ ಮೇಲೆ ಚಪ್ಪಡಿ ಎಳೆದಿದೆ ಇಂತಹ ಹೇಳಿಕೆಗಳಿಂದ ನಮ್ಮ ಹೋರಾಟಕ್ಕೆ ತೊಂದರೆ ಇಲ್ಲ ರವೀಂದ್ರ ನಾಯ್ಕ
ಅಧ್ಯಕ್ಷರು
ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ