ಆದ್ಯೋತ್ ಸುದ್ದಿನಿಧಿ:
ಕಳೆದ ನಾಲ್ಕೂವರೆ ವರ್ಷದಿಂದ ತೆರೆಯ ಮರೆಗೆ ಸರಿದಿದ್ದ ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಚುನಾವಣೆ ಹತ್ತಿರ ಬರುತ್ತಿರುವಾಗ ಮತ್ತೆ ಕ್ರೀಯಾಶೀಲರಾಗಿದ್ದಾರೆ. ಆರೋಗ್ಯ ಇನ್ನಿತರ ಕಾರಣದಿಂದ ರಾಜಕೀಯವಾಗಿ ದೂರವಾಗುತ್ತೆನೆ ಎನ್ನುತ್ತಿದ್ದ ಹೆಗಡೆ ಮೂಲ ಬಿಜೆಪಿ ಕಾರ್ಯಕರ್ತರ ಒತ್ತಡದಿಂದ ಪುನಃ ಸಕ್ರೀಯ ರಾಜಕಾರಣಕ್ಕೆ ಹಿಂದಿರುಗಿದ್ದಾರೆ. ಕಳೆದ ಮೂರು ದಿನದ ಹಿಂದೆ ಬೆಂಗಳೂರನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದ ಅನಂತಕುಮಾರ ಹೆಗಡೆಯವರಿಗೆ ಟಿಕೆಟ್ ಭರವಸೆ ಸಿಕ್ಕಿದೆಯೇ? ಅಥವಾ ಹೈಕಮಾಂಡ ಟಿಕೆಟ್ ಭರವಸೆ ನೀಡಿದೆಯಾ? ಇದಕ್ಕೆ ಕಾರಣ ಇಂದು ಕುಮಟಾದಲ್ಲಿ ಅವರು ನಡೆಸಿದ ಕಾರ್ಯಕರ್ತರ ಸಭೆ.
ಕುಮಟಾ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತಕುಮಾರ ಹೆಗಡೆ,ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ನಾನು ಚುನಾವಣಾ ರಾಜಕೀಯ ಬೇಡ ಎನ್ನುತ್ತಾ ಬಂದಿದ್ದೇನೆ. ಆದರೆ ಎಲ್ಲರೂ ಈ ಬಗ್ಗೆ ನನ್ನನ್ನು ಬೈಯುತ್ತಾ ಬಂದಿದ್ದಾರೆ. ರಾಜಕಾರಣದಿಂದ ಹೊರಗಿರಬೇಕೆಂದಿದ್ದ ನನಗೆ ಮತ್ತೆ ತಿರುವು ಸಿಕ್ಕಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲಾ. ಈ ಹಿಂದಿನ ಗೆಲುವಿನ ದಾಖಲೆಯನ್ನು ಬಿಜೆಪಿ ಅಳಿಸಲಿದೆ. ಹಿಂದೂ ಧರ್ಮದ ವೈಭವದ ಈ ಕಾಲದಲ್ಲಿ ಅಳಿಸಲಾಗದ ದಾಖಲೆಯ ಗೆಲುವು ಪಡೆಯಲಿದ್ದೇವೆ.ರಾಮಜನ್ಮಭೂಮಿಯ ವಿಶಿಷ್ಟ ಗೆಲುವಿನ ಅಭಿಯಾನ ದೇಶಾದ್ಯಂತ ನಡೆದಿದೆ. ಕಳೆದ ಒಂದುಸಾವಿರ ವರ್ಷದಲ್ಲಿ ಅಲ್ಲಲ್ಲಿ ಗೆಲ್ಲುತ್ತಿದ್ದೆವು ಅಲ್ಲಲ್ಲಿ ಸೋಲುತ್ತಿದ್ದೆವು. ಆದರೆ ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿಜಯದ ಧ್ವನಿ ಮುಳುಗುತ್ತಿರುವ ಕ್ಷಣ.
ಸಾವಿರ ವರ್ಷದಲ್ಲಿ ದೇಶದಲ್ಲಿ ಅನೇಕ ಅತ್ಯಾಚಾರ, ಅನ್ಯಾಯ ನಡೆದಿದೆ ರಾಮಜನ್ಮಭೂಮಿ ಹೋರಾಟದಲ್ಲಿ ಲಕ್ಷಾಂತರಜನ ಸತ್ತಿದ್ದಾರೆ. ಆದರೆ ಅವರೆಲ್ಲರ ಬಲಿದಾನದ ಫಲವಾಗಿ ನಾವು ಇಂದು ವಿಜಯದ ಸಂಭ್ರಮದಲ್ಲಿದ್ದೇವೆ.ಈಗ ರಾಮಜನ್ಮಭೂಮಿ ಆಗಿದೆ, ಮುಂದೆ ಕಾಶಿ, ಮಥುರಾ ಸಹ ಆಗಲಿದೆ. ರಾಮಜನ್ಮಭೂಮಿ ಸಾವಿರ ವರ್ಷಗಳಲ್ಲಿ ಹಿಂದೂ ಸಮಾಜದ ಅದ್ಭುತ ಜಾಗೃತಿಯ ಪ್ರತೀಕ ಎಂದು ಹೇಳಿದರು.
ರಾಮಜನ್ಮ ಭೂಮಿಯ ಜೊತೆಗೆ ಭಟ್ಕಳದ ಚಿನ್ನದ ಪಳ್ಳಿಯು ಇದೆ. ಶಿರಸಿಯ ವಿಜಯ ವಿಠ್ಠಲ ದೇವಸ್ಥಾನ ಇಂದು ಸಿ.ಪಿ.ಬಜಾರ್ ಮಸೀದಿಯಾಗಿ ನಿಂತಿದೆ. ಶ್ರೀರಂಗಪಟ್ಟಣ ದೇವಾಲಯ ಸಹ ಮಸೀದಿಯಾಗಿದೆ ಅವುಗಳು ಸಹ ಮುಂದೆ ದೇವಾಲಯಗಳಾಗಲಿವೆ.. ಇಂದು ಹಿಂದೂ ಸಮಾಜ ಎದ್ದು, ರಣಭೈರವನಾಗಿ ನಿಂತಿದೆ. ಸಾವಿರ ವರ್ಷಗಳ ಸೇಡು ತೀರಿಸಿಕೊಳ್ಳದೇ ಈ ಹಿಂದೂ ಸಮಾಜ ಸುಮ್ಮನಿರಲಾರದು ಎಂದು ಕಿಡಿಕಾರಿದ ಹೆಗಡೆ,ಇಂದಿರಾಗಾAಧಿ ಪ್ರಧಾನಿಯಾಗಿದ್ದಾಗ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು, ಆಂದೋಲನದಲ್ಲಿ ಹತ್ತಾರು ಸಂತರು ಸತ್ತರು,ಇಂದಿರಾಗಾAಧಿ ಸಮ್ಮುಖದಲ್ಲಿ ಈ ಹತ್ಯೆ ನಡೆದು ನೂರಾರು ಗೋವುಗಳನ್ನೂ ಗುಂಡಿಟ್ಟು ಕೊಲ್ಲಲಾಯಿತು. ದೊಡ್ಡ ತಪಸ್ವಿ ಕರಪಾತ್ರಿ ಮಹಾರಾಜರು ಇಂದಿರಾಗಾAಧಿಯವರಿಗೆ ಶಾಪ ಕೊಟ್ಟಿದ್ದರು. ಗೋಪಾಷ್ಠಮಿ ದಿನದಂದೇ ನಿನ್ನ ಕುಲ ನಾಶವಾಗಲಿದೆ ಎಂದು ಶಾಪ ನೀಡಿದರು.ಗೋಪಾಷ್ಠಮಿಯಂದೇ ಒಬ್ಬೊಬ್ಬರು ಅಂತ್ಯವಾದರು.ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸತ್ತಿದ್ದು ಗೋಪಾಷ್ಠಮಿಯಂದು ಇಂದಿರಾಗಾAಧಿಗೆ ಗುಂಡಿಟ್ಟು ಕೊಂದಿದ್ದು ಗೋಪಾಷ್ಠಮಿಯಂದೆ ಎಂದು ಹೇಳಿದರು.
ಶಾಸಕ ದಿನಕರ ಶೆಟ್ಟಿಮಾತನಾಡಿ,
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವಂತೆ ನಾನು ವೈಯಕ್ತಿಕವಾಗಿ ಹೆಗಡೆಯವರಿಗೆ ಹಲವು ಬಾರಿ ವಿನಂತಿಸಿದ್ದೇನೆ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಅವರ ಮಾತಿನಲ್ಲಿ ಹೇಳಬೇಕೆಂದರೆ ಅಭಿವೃದ್ಧಿ ಎಂದರೆ ಕೇವಲ ರಸ್ತೆ ನೀರು ಮಾತ್ರವಲ್ಲ ಎಂದಿದ್ದಾರೆ. ನಾನು ಸಹ ನಮ್ಮ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂಸದರು ಅವರ ಅವಧಿಯಲ್ಲಿ ಯಾರಿಗೂ ತೊಂದರೆ ಮಾಡಿಲ್ಲ ಇದು ಬಹಳ ಮುಖ್ಯ, ಜಿಲ್ಲೆಗೆ ಅವರು ತಂದ ಅನೇಕ ಯೋಜನೆಗಳು ಪರಿಸರವಾದಿಗಳು ಮತ್ತಿತರ ಕಾರಣಕ್ಕಾಗಿ ನಿಂತಿದೆ. ಅನಂತಕುಮಾರ್ ಹೆಗಡೆ ರವರು ಮತ್ತೆ ಸಂಸದರಾದರೆ ಮಾತ್ರ ಅಭಿವೃದ್ಧಿ ಸಾಧ್ಯ.ಕಾಂಗ್ರೆಸ್ ನಮ್ಮ ಸಂಸದರು ನಿಲ್ಲುವ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಅವರು ನಿಲ್ಲದಿದ್ದರೆ ಮಾತ್ರ ಕಾಂಗ್ರೆಸ್ ನಲ್ಲಿ ನೂರಾರು ಆಕಾಂಕ್ಷಿಗಳು ಎದ್ದೇಳುತ್ತಾರೆ.
ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ,೧೯೯೩ ರಲ್ಲಿ ಹಿಂದೂ ಜಾಗರಣ ವೇದಿಕೆಯ ಮೂಲಕ ಅನಂತಕುಮಾರ ಹೆಗಡೆ ಭಟ್ಕಳಕ್ಕೆ ಕಾಲಿಡುವವರೆಗೆ ನಮಗೆ ನಾಯಕತ್ವದ ಕೊರತೆ ಇತ್ತು ಇವರು ಕಾಲಿಟ್ಟ ನಂತರ ಭಟ್ಕಳದಲ್ಲಿ ಹಿಂದುಗಳ ನರಮೇಧ ನಿಂತಿತು.ಜಿಲ್ಲೆಯ ಜನ ರಾಷ್ಟ್ರೀಯ ವಿಚಾರ ಮತ್ತು ಹಿಂದುತ್ವದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅನಂತಕುಮಾರ್ ರವರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಕೆಲವು ದಿನಗಳಿಂದ ಅವರು ಕ್ಷೇತ್ರದಲ್ಲಿ ಓಡಾಡಿಲ್ಲ. ಆದರೆ ದೇಶದ್ರೋಹಿಗಳ ಜೊತೆ ಎಂದೂ ಕರ್ಜೂರ ತಿಂದವರಲ್ಲ. ಅನಂತ ಕುಮಾರ ರವರೇ ನಮ್ಮ ಸಂಸದರಾಗಬೇಕೆAಬುದು ನಮ್ಮೆಲ್ಲರ ಆಶಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕುಮಟಾ ಮಂಡಲಾಧ್ಯಕ್ಷ ಹೇಮಂತಗಾAವಕರ, ಎನ್.ಎಸ್.ಹೆಗಡೆ, ಕುಮಾರ್ ಮಾರ್ಕಾಂಡೇಯ, ನಾಗರಾಜ ನಾಯಕ ತೊರ್ಕೆ ಮುಂತಾದವರು ಉಪಸ್ಥಿತರಿದ್ದರು.