ಗಾಯತ್ರಿ ಮಂತ್ರದ ಅಕ್ಷರಗಳು ಬೆಳಕನ್ನು ನೀಡುತ್ತದೆ.-ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿ ಶ್ರೀರಾಮದೇವರ ಮಠದಲ್ಲಿ ಕಳೆದ ಮೂರು ದಿನದಿಂದ ಶ್ರೀರಾಘವೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದ ಅಂಗವಾಗಿ ರವಿವಾರ ಧರ್ಮಸಭೆ ನಡೆಯಿತು.

ಧರ್ಮಸಭೆಯಲ್ಲಿ ಗಾಯತ್ರಿದೇವಿ ವಿಷಯವನ್ನಾಧರಿಸಿ ಉಪನ್ಯಾಸ ನೀಡಿದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ,ಗಾಯತ್ರಿ ಕೇವಲ ಮಂತ್ರವಲ್ಲ ಎಲ್ಲಾ ಮಂತ್ರಗಳ ತಾಯಿಯಂತೆ. ಈ ಮಂತ್ರ ಕೇವಲ ಶಕ್ತಿಯನ್ನಷ್ಟೆ ಅಸಾಧಾರಣ ಶಕ್ತಿಯನ್ನು ನೀಡುವಂತಹದ್ದು.ಗಾಯತ್ರಿ ಮಂತ್ರದ ಪ್ರತಿ ಅಕ್ಷರವೂ ಬೆಳಕನ್ನು ನೀಡುತ್ತದೆ.ನಮ್ಮ ಪರಂಪರೆಯನ್ನು,ಸಂಸ್ಕೃತಿಯನ್ನು ಕೊಂಡಾಡಿರುವ ಮಂತ್ರವಾಗಿದ್ದು ಇದರ ಅನುಷ್ಠಾನ ಸಿದ್ದಿಯನ್ನು ಕೊಡುವಂತಹದ್ದು ಎಂದು ಹೇಳಿದರು.

ಗಾಯತ್ರಿ ಮಂತ್ರ ವೇದದ ಮೂಲವಾಗಿದೆ. ನಾಲ್ಕೂ ವೇದಗಳಿಗೂ ಗಾಯತ್ರಿ ಮಂತ್ರ ತಾಯಿ ಇದ್ದಂತೆ. ಇಂತಹ ಗಾಯತ್ರಿ ಮಂತ್ರವನ್ನು ಉಪಾಸನೆ ಮಾಡುವಾಗ ಅಕ್ಷರ, ಸ್ವರದಲ್ಲಿ ವ್ಯತ್ಯಾಸವಾಗದಂತೆ ಉಚ್ಚಾರವನ್ನು ಸರಿಯಾಗಿ ಮಾಡಬೇಕು ಗಂಗೆ, ಗಾಯತ್ರಿ, ಗುರು, ಗೋವು ಇವೆಲ್ಲವೂ ನಮ್ಮ ಪಾಲಿಗಿದೆ. ತಡೆ ಒಡ್ಡುವವರು ಯಾರೂ ಇಲ್ಲ. ಗಾಯತ್ರಿ ಮಂತ್ರ ಅಮೃತ ಸೇತುವೆಯಾಗಿದೆ .ನಾವು ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹಿರಿಯರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಬೇಕು. ಪುರುಷರು ಗಾಯತ್ರಿಮಂತ್ರವನ್ನು ಜಪಿಸುವ ಹಾಗೆ ಮಹಿಳೆಯರು ಪ್ರೇರೇಪಣೆ ನೀಡಬೇಕು.

filter: 0; jpegRotation: 0; fileterIntensity: 0.000000; filterMask: 0;

ಪತಿಯಾದವನು ಗಾಯತ್ರಿ ಮಂತ್ರವನ್ನು ಜಪಿಸಿದ ಅರ್ಧ ಪುಣ್ಯ ಮಡದಿಗೆ ಬರುತ್ತದೆ. ಮಹಿಳೆಯರು ಗಾಯತ್ರಿಮಂತ್ರವನ್ನು ಅಭ್ಯಾಸ ಮಾಡಲಿಕ್ಕೆ ಹೋಗಬಾರದು ಯಾರೂ ಅಯೋಗ್ಯರಲ್ಲ. ಎಲ್ಲರೂ ಯೋಗ್ಯರು. ಗುರುತಿಸುವ ಗುರುಶಕ್ತಿ ಬೇಕು. ಅಸಾಧ್ಯವಾದದ್ದು ಎನ್ನುವುದು ಯಾವುದೂ ಇಲ್ಲ.ಎಂದು ಶ್ರೀಗಳು ನುಡಿದರು.

ಇದೇ ಸಂದರ್ಭದಲ್ಲಿ ಹತ್ತು ವರ್ಷದೊಳಗಿನ ಹತ್ತು ವಟುಗಳ ಪಾದಪೂಜೆ ನಡೆಯಿತು. ಶತರುದ್ರಹವನ,ಅಕ್ಷರಲಕ್ಷ ಗಾಯತ್ರೀಜಪಮಹಾಯಜ್ಞ ನಡೆಯಿತು.
ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ದಂಪತಿ ಸಭಾಪೂಜೆ ನೆರವೇರಿಸಿದರು.
ಶಂಕರ ಪಂಚಮಿ ಉತ್ಸವ ಸಮಿತಿ ಅಧ್ಯಕ್ಷ ಜಯರಾಮ ಭಟ್ಟ ಗುಂಜಗೋಡ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

About the author

Adyot

Leave a Comment