“ಮಾದರಿ ಕೆಲಸ ನಿಂಗಾಣಿ ಸಾಹಸ” ಅರಣ್ಯಾಧಿಕಾರಿಯ ಖಾಳಜಿಯ ಕತೆ

ಆದ್ಯೋತ್ ಸುದ್ದಿನಿಧಿ:
ಮಾನವೀಯ ಸಂವೇದನೆ, ಇಚ್ಛಾಶಕ್ತಿ ಮತ್ತು ಕರ್ತವ್ಯ ಪ್ರಜ್ಞೆ ಈ ಮೂರು ಅಂಶಗಳು ಒಬ್ಬ ಅರಣ್ಯ ಇಲಾಖೆ ಅಧಿಕಾರಿಯಲ್ಲಿ ಮೇಳೈಸಿದಾಗ ಹೊರಹೊಮ್ಮುವ ಫಲಿತಾಂಶ ಇಡೀ ಸಮಾಜವೇ ಮೆಚ್ಚುವಂತಾಗಿರುತ್ತದೆ.

ಇಲಾಖೆಯ ಘನತೆ ಹೆಚ್ಚುವುದರ ಜತೆಗೆ ವನ್ಯಜೀವಿಗಳ ರಕ್ಷಣೆ, ಪೋಷಣೆಯೂ ಅಗುತ್ತದೆ. ಈ ನಿಟ್ಟಿನಲ್ಲಿ ಎಸ್.ಎಸ್. ನಿಂಗಾಣಿ ಎಂಬ ವಲಯ ಅರಣ್ಯ ಅಧಿಕಾರಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಳವ ಗ್ರಾಮದಿಂದ 1 ಕಿಮೀ ದೂರದಲ್ಲಿ ಹಳ್ಳಕ್ಕೆ ತಡೆಗೋಡೆ ಕಟ್ಟಿ ನಿರ್ಮಿಸಿದ ಕೆರೆ ಇಂದಿಗೂ ವನ್ಯಜೀವಿಗಳ ಜಲದಾಹ ತೀರಿಸುತ್ತಿದೆ. ಇದು ನಿಂಗಾಣಿಯವರ ದೂರದೃಷ್ಟಿಯ ಫಲ. ಬರ ಹಾಗೂ ಬಿರು ಬಿಸಿಲಲ್ಲೂ ಈ ಕೆರೆ ಜಲಸಮೃದ್ಧಿಯಿಂದ ನಳನಳಿಸುತ್ತಿದೆ. ದಶಕದ ಹಿಂದೆ ಅರಣ್ಯ ನಿರ್ವಹಣೆ ಮತ್ತು ಯೋಜನೆ ಪ್ರಾಧಿಕಾರ ಯೋಜನೆಯಡಿ 4.9 ಲಕ್ಷ ರೂ ವೆಚ್ಚದಲ್ಲಿ 60 ಮೀ ಅಗಲ 4 ಮೀ ಆಳದಲ್ಲಿ ನಿರ್ಮಿಸಿದ ಈ ಕೆರೆ ವನ್ಯಜೀವಿಗಳಿಗೆ ಆಸರೆಯಾಗಿದೆ. ಸುತ್ತಲಿನ ಗ್ರಾಮಗಳಿಗೂ ಇಲ್ಲಿನ ನೀರು ಅನುಕೂಲ ಕಲ್ಪಿಸಿದೆ. ಇಲ್ಲಿ ಪ್ರಾಣಿಗಳಷ್ಟೇ ಅಲ್ಲ ನಾನಾ ಮಾದರಿ ಪಕ್ಷಿಗಳ ಕಲರವವನ್ನೂ ಕಾಣಬಹುದು.

ಇಂತಹ ಅಧಿಕಾರಿಗಳು ಇಲಾಖೆಯ ಹಾಗೂ ನಾಡಿನ ಹೆಮ್ಮೆ ಇವರ ಕೆಲಸ ಅನುಕರಣೀಯ. ಎಸ್.ಎಸ್. ನಿಂಗಾಣಿ ಅವರು ಇಂದು ಪದೋನ್ನತಿ ಹೊಂದಿ ಹೊನ್ಬಾವರದಲ್ಲಿ ಎಸಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಈ ಹಿಂದೆ ಇಲ್ಲಿದ್ದಾಗ ಮಾಡಿದ ಅನುಪಮ ಕೆಲಸವನ್ನು ಇಲ್ಲಿನ ಜನ ಇಂದಿಗೂ ನೆನೆಸುತ್ತಾರೆ.

About the author

Adyot

Leave a Comment