ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಹದಿನಾರನೇ ಮೈಲ್ಕಲ್ ನ ಸುರೇಶ ನಾಯ್ಕ-ವನಿತಾ ನಾಯ್ಕ ದಂಪತಿಗಳಿಗೆ ಸ್ಟಿಲ್ ಖರೀದಿಯಲ್ಲಿ ಅದೃಷ್ಟ ಖುಲಾಯಿಸಿದೆ
ಹುಬ್ಬಳ್ಳಿಯ ಕಮಲ್ ಸ್ಟೀಲ್ ಪ್ರಾಡಕ್ಟ್ಸ್ ಇವರ ಅಡಿಯಲ್ಲಿ ಜೆಎಸ್‌ಡಬ್ಲು ನಿಯೋಸ್ಟೀಲ್‌ನ ಅಧಿಕೃತ ವಿತರಕರಾಗಿರುವ ಸಿದ್ದಾಪುರ ಪಟ್ಟಣದ ವಿಮಲ್ ಸ್ಟೀಲ್ ಅವರಿಂದ ತಾಲೂಕಿನ ಹದಿನಾರನೇ ಮೈಲಿಕಲ್ಲಿನ ಸಂಪಗೋಡದ ವನಿತಾ ಸುರೇಶ ನಾಯ್ಕ ಅವರು ಮನೆಕಟ್ಟಲು ಅವಶ್ಯವಿದ್ದ ಜೆಎಸ್‌ಡಬ್ಲು ನಿಯೋಸ್ಟೀಲ್ ಕಂಪನಿಯ ಟಿಎಂಟಿ ಬಾರ್‌ಗಳನ್ನು ಖರೀದಿಸಿದ್ದು ಅವರಿಗೆ ಕಂಪನಿಯ ಕನ್ಸೂಮರ್ ಪ್ರೀಮೀಯರ್ ಸ್ಕೀಂನಲ್ಲಿ 2೦ ಗ್ರಾಂ ತೂಕದ ಶುದ್ಧ ಬಂಗಾರದ ನಾಣ್ಯ (ಇಂದಿನ ದರದಂತೆ ಸುಮಾರು 1 ಲಕ್ಷ 44 ಸಾವಿರ ರೂ.ಬೆಲೆ) ದೊರೆತಿದೆ.
ಕಂಪನಿಯ ವತಿಯಿಂದ ಪ್ರಶಾಂತ ಶಾನಭಾಗ ಹಾಗೂ ವಿಮಲ್ ಸ್ಟೀಲ್‌ನ ಮಾಲಿಕ ವೆಂಕಟಗಿರಿ ಹೆಗಡೆ ವನಿತಾ ಸುರೇಶ ನಾಯ್ಕ ದಂಪತಿಗಳಿಗೆ ಗುರುವಾರ ಬಂಗಾರದ ನಾಣ್ಯವನ್ನು ಹಸ್ತಾಂತರಿಸಿದ್ದಾರೆ. ತಮಗೆ ಅನಿರೀಕ್ಷಿತವಾಗಿ ಈ ಕೊಡುಗೆ ದೊರೆತಿರುವ ಕುರಿತು ವನಿತಾ ಸುರೇಶ ನಾಯ್ಕ ದಂಪತಿಗಳು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.