ಆದ್ಯೋತ್ ಸುದ್ದಿನಿಧಿ:
ಕೃತಿಯೊಂದು ಪ್ರಕಟವಾಗಿ ಕೇವಲ ಮೂರೇ ತಿಂಗಳಲ್ಲಿ ಆರನೇ ಸಲ ಪ್ರಕಟಗೊಳ್ಳುತ್ತಿದೆ ಎಂದರೆ ಆ ಕೃತಿಯ ಹೆಚ್ಚುಗಾರಿಕೆ ಅರಿವಿಗೆ ಬಂದೀತು. ಇಂತಹ ಅಪರೂಪದ ಕೃತಿ ಭಾವರಾಮಾಯಣದ “ರಾಮಾವತರಣ” ಭಾಗವನ್ನು ಬರೆದವರು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳು.

ವಾಲ್ಮೀಕಿ ರಾಮಾಯಣದ ಮೂಲವನ್ನಿಟ್ಟುಕೊಂಡು ಅದರ ಚೌಕಟ್ಟನ್ನು ಮೀರದಂತೆ ವಿಸ್ತರಿಸಿ ಬರೆದ ರಾಮಾವತರಣದಲ್ಲಿ ವಾಲ್ಮೀಕಿಗಳ ಭಾವವನ್ನೇ ಬೆಂಬತ್ತಿ ಹೋಗಿ ರಸಪಾಕವನ್ನಾಗಿಸಲಾಗಿದೆ. ರಾಮಾವತರಣದಲ್ಲಿ ಆರು ವಿಷಯಗಳನ್ನು ವಿಂಗಡಿಸಿ ಆಯಾ ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಒಗ್ಗೂಡಿಸಿಕೊಂಡು ಕಣ್ಣಿಗೆ ಕಟ್ಟುವಂತೆ ಸಾಂದರ್ಭಿಕ ಕಥೆಗಳನ್ನು ಹೆಣೆದುಕೊಡಲಾಗಿದೆ. ಕೃತಿಯ ಬೆನ್ನುಡಿಯೇ ಹೇಳಿಕೊಂಡAತೆ ಈ ಕೃತಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶ ಬದುಕಿನ ಅದ್ಭುತ ಪಯಣ, ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾ ಲಹರಿಯ ಪುನರನುಸಂಧಾನ, ಶ್ರೀ ರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ.

filter: 0; jpegRotation: 90; fileterIntensity: 0.000000; filterMask: 0;
ಕೃತಿಯಲ್ಲಿ ಖ್ಯಾತ ಕಲಾವಿದ ನೀರ್ನಳ್ಳಿ ಗಣಪತಿಯವರ ರೇಖಾ ಚಿತ್ರಗಳು ಸಾಂದರ್ಭಿಕವಾಗಿ ಮೂಡಿಬಂದಿವೆ. ಪ್ರತಿಯೊಂದು ಚಿತ್ರಗಳೂ ನೂರಾರು ನುಡಿಗಳನ್ನು ಧ್ವನಿಸುವಂತಿದ್ದು ಆಯಾ ಸನ್ನಿವೇಶಗಳನ್ನು ಅಂತರAಗಕ್ಕೆ ತಲುಪಿಸುವಂತಿವೆ. ರಾಮಾವತರಣ ಕೃತಿಯ ಅಧಿಕೃತ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಹೊಸಕೆರೆಹಳ್ಳಿಯ ಪಿ.ಇ.ಎಸ್.ವಿಶ್ವವಿದ್ಯಾಲಯದಲ್ಲಿ ಜೂ.೨೯ ರಂದು ಜರುಗಿತು. ಮಂತ್ರಾಲಯದ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿಯವರು ರಾಮಾವತರಣ ಕೃತಿಯನ್ನು ಲೋಕಾರ್ಪಣಗೊಳಿಸಿದರು.

filter: 0; jpegRotation: 90; fileterIntensity: 0.000000; filterMask: 0;
ನಾಡಿನ ದಿಗ್ಗಜ ಸಾಹಿತಿಗಳು, ಗಣ್ಯಾತಿಗಣ್ಯರು, ಇತಿಹಾಸ ಸಂಶೋಧಕರು, ಪತ್ರಿಕಾ ಸಂಪಾದಕರು, ಕಲಾವಿದರು ಸೇರಿದಂತೆ ನೂರಾರು ಗಣ್ಯರು “
ರಾಮಾವತರಣ“ದ ಬಿಡುಗಡೆಗೆ ಸಾಕ್ಷಿಯಾದರು. ಗ್ರಂಥ ಬಿಡುಗಡೆಯೊಂದು ಈ ರೀತಿಯಲ್ಲಿ ವಿಶೇಷವಾಗಿ, ವಿಶಿಷ್ಟವಾಗಿ ನಡೆದದ್ದು ಐತಿಹಾಸಿಕ ದಾಖಲೆ ಎನ್ನುವಂತಾಯಿತು

filter: 0; jpegRotation: 90; fileterIntensity: 0.000000; filterMask: 0;
ರಾಮಾಯಣ-ಮಹಾಭಾರತ ಹಿಂದೂಗಳಿಗೆ ಪವಿತ್ರ ಗ್ರಂಥಗಳು. ಇವೆರಡೂ ಗ್ರಂಥಗಳೂ ಹುಲುಮಾನವರಾದ ನಮಗೆ ಧರ್ಮದ ಮಾರ್ಗವನ್ನು ಬೋಧಿಸಿ ಭವಿಷ್ಯದ ಸನ್ಮಾರ್ಗದ ದಾರಿ ತೋರಿವೆ. ಅದರಲ್ಲೂ ವಾಲ್ಮೀಕಿ ರಾಮಾಯಣವಂತೂ ಸರ್ವ ಶ್ರೇಷ್ಠ ಗ್ರಂಥವೆನಿಸಿದ್ದು ಸಹಸ್ರಾರು ಲೇಖಕರ ಕೃತಿಗಳಿಗೆ ಮೂಲ ವಸ್ತು-ವಿಷಯವನ್ನಿತ್ತಿದೆ. ಈ ಹಿನ್ನೆಲೆಯಲ್ಲಿಯೇ ಪರಮಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅಂತ:ಚಕ್ಷÄವಿಗೆ ಗೋಚರಿಸಿದ ಭಾವರಾಮಾಯಣದ ಪ್ರಥಮ ಭಾಗ “
ರಾಮಾವತರಣ” ಸೃಷ್ಟಿಯಾಗಿದೆ.

filter: 0; jpegRotation: 90; fileterIntensity: 0.000000; filterMask: 0;
ಭಾವರಾಮಾಯಣ ರಾಮಾವತರಣ ಕೃತಿಯನ್ನು ಕೈಗೆತ್ತಿಕೊಂಡರೆ ನಾವು ಮನವನ್ನು ಕೇಂದ್ರೀಕರಿಸುವ ಅವಶ್ಯಕತೆಯೆ ಬಾರದೆನ್ನುವುದು ನನ್ನ ಸ್ವಾನುಭವ. ಕೃತಿಯಲ್ಲಿಯ ಸರಳ ಭಾಷೆ, ಸನ್ನಿವೇಶಗಳ ಸಹಜ ವರ್ಣನೆ ನಮ್ಮನ್ನು ಭಾವನೆಯ ಮಾರ್ಗದಲ್ಲಿಯೇ ಆಯಾ ಪ್ರದೇಶಗಳಿಗೆ, ಸನ್ನಿವೇಷಗಳಿಗೆ ಕೊಂಡೊಯ್ದು, ಮನ:ಪಟಲದಲ್ಲಿ ಅವುಗಳ ಸ್ಪಷ್ಟ ಚಿತ್ರಣ ಮೂಡಿಸಿ ಪೂರ್ತಿ ಕೃತಿಯನ್ನು ಓದುವಂತೆ ಪ್ರೇರೇಪಿಸುತ್ತದೆ. ದಶರಥ ಮಹಾರಾಜನ ರಾಜ್ಯ ಕೋಸಲನಾಡಿನ ಸುಭಿಕ್ಷ ಕುರಿತು ವರ್ಣಿನೆ ಓದಿದಾಗ ಸೂರ್ಯವಂಶದ ಮಹತಿ, ಅಲ್ಲಿಯ ಮಣ್ಣಿನ ಮಹತಿ, ಅಲ್ಲಿ ಲಕ್ಷಿö್ಮಯ ಆವಿರ್ಭಾವ, ಸಮೃದ್ಧಿಯ ಜೊತೆಯಿರುವ ಕೋಟೆ, ಯಂತ್ರಾಯುಧಗಳೊAದಿಗಿನ ಸುರಕ್ಷತೆ, ಅಯೋಧ್ಯೆಯ ವೀರ ಸೈನಿಕರು, ಅಯೋಧ್ಯೆಯ ಆದರಾಥಿತ್ಯದ ಪರಿ, ದಾನಶೀಲತೆಯ ಪರಿಕಲ್ಪನೆಯನ್ನು ಬಿಂಬಿಸುತ್ತದೆ. ಅತಿರಥ ದಶರಥ ಚಕ್ರವರ್ತಿಯ ಪರಾಕ್ರಮ, ಧರ್ಮಪ್ರೀತಿ, ಸಿರಿತನ, ಪ್ರಜಾರಂಜಕತೆ, ಧರ್ಮ-ಅರ್ಥ-ಕಾಮ-ಸತ್ಯದ ಬದುಕಿನ ಪರಿಯನ್ನು ವರ್ಣಿಸುತ್ತ “ಧರೆಯೊಳಗೊಂದು ವೈಕುಂಠದ ಖಂಡ” ದಶರಥನ ರಾಜ್ಯವಾಗಿತ್ತು ಎಂಬ ಚಿತ್ರಣವನ್ನು ನೀಡುತ್ತದೆ.

filter: 0; jpegRotation: 90; fileterIntensity: 0.000000; filterMask: 0;
ದಶರಥನಿಗಾದ ಯಾಗ ಪ್ರೇರಣೆ, ಮುಗ್ದ ಮುನಿ ಋಷ್ಯಶೃಂಗರ ಚರಿತ್ರೆ, ಅಶ್ವಮೇಧ-ಪುತ್ರಕಾಮೇಷ್ಟಿ ಯಾಗಗಳ ಸಂಕಲ್ಪ ಇಡೇರಿಕೆ, ಪಾಯಸ ಭಾಗ್ಯದಿಂದ ರಾಮನ ಅವತರಣ ಇವಿಷ್ಟನ್ನೂ ವರ್ಣನಾತ್ಮಕವಾಗಿ ಕಟ್ಟಿಕೊಡುವ ಈ ಕೃತಿಯಲ್ಲಿಯೇ ಹೇಳಿಕೊಂಡAತೆ “ಒಂದೇ ಒಂದು ಪ್ರೇರಣೆ ದಿವಿಯನ್ನು ಭುವಿಗಿಳಿಸಿ, ಭುವಿಯನ್ನು ದಿವಿಗೆತ್ತಿ, ಭುವಿಯನ್ನೇ ದಿವಿಯಾಗಿಸೀತು” ಎಂಬುದನ್ನು ಸಾಬೀತು ಮಾಡಿದೆ. “ಮಂತ್ರಿಯೆAದರೆ ಬುದ್ಧಿಯ ಬೆಳಗು, ಗುರುವೆಂದರೆ ಆತ್ಮದ ಅರಿವು, ಮಡದಿಯೆಂದರೆ ಹೃದಯದ ಹೂವು” ಎನ್ನುವುದನ್ನು ತಿಳಿಸುತ್ತಾ “ಎಡವಿದಲ್ಲಿಯೇ ಅಲ್ಲವೇ ಕೈಯೂರಿ ಮೇಲೇಳಬೇಕಾದುದು” ಎಂಬ ಸಹಜ ಸತ್ಯ ಎಲ್ಲರಿಗೂ ತಿಳಿದೇ ಇದ್ದರೂ ಪುನ: ಬುದ್ಧಿಗೆ ಮನವರಿಕೆ ಮಾಡುತ್ತದೆ. ಮಕ್ಕಳ “ನಗು”ವೇ ತಂದೆ ತಾಯಿಗಳಿಗೆ “ನಗ”ವಲ್ಲವೇ ಎಂಬ ಅಪ್ಪಟ ಸತ್ಯವನ್ನು ತಿಳಿಸಿಕೊಟ್ಟ ಈ ಕೃತಿ “ಅದೆಷ್ಟೋ ಬಾರಿ ಕರುಳೇ ಕಣ್ಣಾಗಿ, ಎಳವೆಯಿಂದ ಧಾರೆಯೆರೆದ ಪ್ರೀತಿಗೆ ಪ್ರತಿಯಾಗಿ, ದೊಡ್ಡ ಶೂನ್ಯವನ್ನೇ ಕಾಣುವ ಹೆತ್ತೊಡಲಿಗೇನೂ ಬರವಿಲ್ಲ” ಎಂಬ ವಾಸ್ತವಿಕ ಕಟು ಸತ್ಯವನ್ನೂ ವಿಷದಪಡಿಸಿದೆ.

filter: 0; jpegRotation: 90; fileterIntensity: 0.000000; filterMask: 0;
“ಬರಗಾಲದ ಸಾವಿರ ವರ್ಷಗಳ ಬಳಿಕ ಮಳೆ ಬಂದಾಗ ಆ ವರೆಗೆ ಧರೆಯ ಗರ್ಭದಲ್ಲಿ ಹುದುಗಿ, ಕಾದು ಕುಳಿತ ಹುಲ್ಲಿನ ಬೀಜ ಒಮ್ಮೆಲೇ ಚಿಗುರಿ ಹೊರಬರುವಂತೆ” ಋಷ್ಯಶೃಂಗರ ಆಗಮನದಿಂದ ಸುಭಿಕ್ಷ ನೆಲೆಸುವುದೆಂಬ ಮಹತಿಯನ್ನು ಕೃತಿಯಲ್ಲಿ ತಿಳಿಸಲಾಗಿದೆ. “ತನ್ನ ಯೋಗ್ಯತೆಯ ಅರಿವು ತನಗಿರುವುದಾದರೆ ಅಂಥವರು ಬದುಕಿನಲ್ಲಿ ಎಡವುವ ಸಂಭವವು ತೀರಾ ಕಡಿಮೆ” ಎಂಬ ಅಹಂ ರಹಿತ ಸಹಜ ನಡವಳಿಕೆಯ ಮಹತ್ವ ತಿಳಿಸುವ ಕೃತಿ ಮುಗ್ದತೆಯಿರುವಲ್ಲಿ ಮೋಸದ ಸಾಧ್ಯತೆಯೂ ಅಧಿಕವೆಂಬ ಸತ್ಯವನ್ನು ಸಾರುತ್ತದೆ. ಒಟ್ಟಾರೆ ಒಟ್ಟಾರೆಯಾಗಿ ಭಾವರಾಮಾಯಣದ “
ರಾಮಾವತರಣ” ನಾಂದಿಯು “ಗುರುಕರುಣೆಯೊಂದಿರಲು ಕೊರತೆ ಒರತೆಯಾದೀತು” ಎಂಬುದನ್ನು ದೃಢಪಡಿಸುತ್ತ ಸಾಹಿತ್ಯಾಸಕ್ತರನ್ನು ಮುಂದಿನ ಕೃತಿಗಳನ್ನು ಕಾಯುವ ಚಾತಕಪಕ್ಷಿಯಾಗುವಂತೆ ಮಾಡಿದೆ.
######
ಕೆಕ್ಕಾರ ನಾಗರಾಜ ಭಟ್ಟ ಸಿದ್ದಾಪುರ.