ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹಿರಿಯ ಗುತ್ತಿಗೆದಾರ ಎ.ಜಿ.ನಾಯ್ಕ ಆಯ್ಕೆಯಾಗಿದ್ದು ಶುಕ್ರವಾರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಜವಾಬ್ದಾರಿ ಬೋಧಿಸಿದ
ಲಯನ್ಸ್ ೩೧೭ ಜಿಲ್ಲೆಯ ಮಲ್ಟಿಪಲ್ ಕೌನ್ಸಿಲ್ ಚೆರಮೆನ್ ಲಯನ್ ಕೃಷ್ಣೆಗೌಡ ಮಾತನಾಡಿ,ಜೀವನದಲ್ಲಿ ಅವಕಾಶ ವಂಚಿತರಿಗೆ ಸಹಕರಿಸುವುದು ಒಳ್ಳೆಯದಾಗಿದ್ದು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಪ್ರಮುಖ ಉದ್ದೇಶವೂ ಇದೇ ಆಗಿರುತ್ತದೆ.ಲಯನ್ಸ್ ಸೇವಾ ಸಂಸ್ಥೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ತನ್ನ ಶಾಖೆಗಳ ಮೂಲಕ ಸೇವಾ ಕಾರ್ಯನಿರ್ವಹಿಸುತ್ತಿದೆ. ನೇತ್ರ ಶಸ್ತ್ರ ಚಿಕಿತ್ಸೆಯು ಜನಪ್ರಿಯವಾದ ಸೇವೆಯಾಗಿದ್ದು, ಕೋಟ್ಯಾಂತರ ಜನ ಇದರ ಪ್ರಯೋಜನವನ್ನು ಪಡೆದಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಯವುದೇ ಸಮಸ್ಯೆ ತಲೆದೂರಿದಾಗ ತಕ್ಷಣ ನೇರೆವಿಗೆ ಧಾವಿಸುವುದು ಲಯನ್ಸ್ ಸಂಸ್ಥೆಯಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು ಲಯನ್ಸ್ ಸಂಸ್ಥೆಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ, ಲಯನ್ಸ್ ಸಂಸ್ಥೆಯ ಉದ್ದೇಶಗಳು ಸೇವಾ ಕಾರ್ಯದ ಹಿನ್ನಲೆಯಲ್ಲಿ ಪ್ರಸ್ತುತವಾಗಿದ್ದು ಅದನ್ನು ನೇರವೆರಿಸಲು ಸದಸ್ಯತ್ವವನ್ನು ಹೊಂದುವುದು ಅಭಿಮಾನದ ಸಂಕೇತವಾಗಿದೆ ಎಂದರು.
ನೂತನ ಅಧ್ಯಕ್ಷ ಎ.ಜಿ.ನಾಯ್ಕ ಮಾತನಾಡಿ,ಸೇವೆಯ ಉದ್ದೇಶದಿಂದ ಲಯನ್ಸ ಸಂಸ್ಥೆಯ ಸದಸ್ಯನಾಗಿ ಸೇರ್ಪಡೆಗೊಂಡಿದ್ದು ಸಿದ್ದಾಪುರ ಲಯನ್ಸ್ ಕ್ಲಬ್ಬಿನ ೫೨ನೇ ಅಧ್ಯಕ್ಷನಾಗಿ ಪದಗ್ರಹಣ ಹೊಂದಿದ್ದೆನೆ ಸಂಸ್ಥೆಯ ಆಶಯವನ್ನು ಕಾಪಾಡಿಕೊಂಡು ಬರುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಯಾಗಿ ಕುಮಾರ್ ಗೌಡರ್ ಹೊಸೂರು, ನೂತನ ಕೋಶಾಧ್ಯಕ್ಷರಾಗಿ ಅಶೋಕ ಹೆಗಡೆ ಗುಂಜಗೋಡು, ಉಪಾಧ್ಯಕ್ಷರಾಗಿ ಆರ್. ಎಮ್. ಪಾಟೀಲ್ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಗವರ್ನರ್ ಗಿರೀಶ್ ಕುಚ್ಚಿನಾಡು ಆಶಾಕಾರ್ಯಕರ್ತೆಯರಿಗೆ ಛತ್ರಿಯನ್ನು ವಿತರಿಸಿದರು.ಪ್ರಾದೇಶಿಕ ಅಧ್ಯಕ್ಷ ಆರ್.ಎಚ್. ನಾಯ್ಕ ಗೋಕರ್ಣ, ವಲಯ ಅಧ್ಯಕ್ಷ ಶ್ಯಾಮಲಾ ಹೆಗಡೆ ಹೂವಿನಮನೆ ಮತ್ತು ಅಶೋಕ ಹೆಗಡೆ ಶಿರಸಿ ಮಾತನಾಡಿದರು. ಸವಿತಾ ಅಣ್ಣಪ್ಪ ನಾಯ್ಕ,ಆನಂದ ಶೇಟ್ ಉಪಸ್ಥಿತರಿದ್ದರು.
ಜಗತ್ತಿನಲ್ಲಿಯೇ ಸದಸ್ಯತ್ವದ ಬೆಳವಣಿಗೆಗಾಗಿ ೩ನೇ ಸ್ಥಾನ ಪಡೆದ ಹಾಗೂ ಭಾರತ ದೇಶದಲ್ಲಿ ಮೊದಲ ಸ್ಥಾನ ಪಡೆದ ಕೃಷ್ಣೆಗೌಡ ಅವರನ್ನು ಸನ್ಮಾನಿಸಲಾಯಿತು.
ನಿರ್ಗಮಿತ ಅಧ್ಯಕ್ಷ ಆರ್.ಎಮ್.ಪಾಟೀಲ್ ಹೊಸೂರು ಸ್ವಾಗತಿಸಿದರು. ಅರ್ಚನಾ ಹೆಗಡೆ ದೇವರ ಸ್ತುತಿಯನ್ನು ಪ್ರಸ್ತುತ ಪಡಿಸಿದರು. ಅತಿಥಿ ಪರಿಚಯವನ್ನು ಎಮ್.ಆರ್. ಪಾಟೀಲ್ ಅವರು ನಿರ್ವಹಿಸಿದರು ವೀಣಾ ಶೇಟ್ ನೂತನ ಪದಾಧಿಕಾರಿಗಳ ಪರಿಚಯವನ್ನು ನೀಡಿದರು. ಕಾರ್ಯದರ್ಶಿ ಕುಮಾರ್ ಗೌಡರ್ ವಂದನಾರ್ಪಣೆಗೈದರು. ಜಿ. ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.