ಸಂತೆಗುಳಿ ಸಮೀಪ ಉಳ್ಳೂರುಮಠದಲ್ಲಿ ಗುಡ್ಡಕುಸಿತ :ಕುಮಟಾ-ಸಿದ್ದಾಪುರ ರಸ್ತೆ ಬಂದ್

ಆದ್ಯೋತ್ ಸುದ್ದಿನಿಧಿ:
ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿ-48ರ ಕುಮಟಾ ಸಿದ್ದಾಪುರ ರಸ್ತೆಯ ಸಂತೆಗುಳಿ ಸಮೀಪದ ಉಳ್ಳೂರು ಮಠದ ಕ್ರಾಸ್ ಹತ್ತಿರ ಸುಮಾರು 300ಮೀಟರನಷ್ಟು ಗುಡ್ಡ ಕುಸಿದಿದ್ದು
ಕುಮಟಾ-ಸಿದ್ದಾಪುರ ರಸ್ತೆ ಬಂದ್ ಆಗಿದೆ.ಇದೇ ರಸ್ತೆಯ ಬಿಳಗಿ ಸಮೀಪವೂ ಗುಡ್ಡ ಕುಸಿದಿದೆ.

ಈಗಾಗಲೇ ಕುಮಟಾ-ಶಿರಸಿ ರಸ್ತೆಯ ರಾಗಿಹೊಸಳ್ಳಿ ಬಳಿ ಗುಡ್ಡಕುಸಿದು ರಸ್ತೆ ಬಂದ್ ಆಗಿದೆ.ಬದಲಿ ರಸ್ತೆಯಾಗಿ ಸಿದ್ದಢಪುರ ಕುಮಟಾ ರಸ್ತೆ ಬಳಸಲಾಗುತ್ತಿತ್ತು.ಆದರೆ ಈಗ ಈ ರಸ್ತೆಯೂ ಬಂದ್ ಆಗಿದ್ದು ಓಡಾಟ ದುಸ್ತರವಾಗಿದೆ.

ಬದಲಿ ಮಾರ್ಗಗಳು
ಸಿದ್ದಾಪುರ ಶಿರಸಿ ಕಡೆಗಳಿಗೆ ತೆರಳುವ ವಾಹನಗಳು ಹೊನ್ನಾವರ- ಮಾವಿನಗುಂಡಿ ಮಾರ್ಗವಾಗಿ ಸಿದ್ದಾಪುರ-ಶಿರಸಿ
ಕೋಡ್ಕಣಿ, ಕಿಮಾನಿ, ಮಾದನಗೇರಿ, ಹಿಲ್ಲೂರು, ಹೊಸಕಂಬಿ, ಯಲ್ಲಾಪುರ ಮೂಲಕ ಶಿರಸಿಗೆ ತೆರಳಬಹುದಾಗಿದೆ.

About the author

Adyot

Leave a Comment