ಸಿದ್ದಾಪುರ: ಖಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಮಳೆ ಹಾನಿ ವೀಕ್ಷಿಸಿದ ಶಾಸಕ ಭೀಮಣ್ಣ ನಾಯ್ಕ

ಆದ್ಯೋತ್ ಸುದ್ದಿನಿಧಿ
ಕಳೆದ ಒಂದು ತಿಂಗಳಿನಿಂದ ಸಿದ್ದಾಪುರ ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಯುತ್ತಿದ್ದು ಹಲವಾರು ಮನೆಗಳು ಕುಸಿದಿದೆ,ರಸ್ತೆಗಳು ಕೊಚ್ಚಿ ಹೋಗಿದೆ,ಗುಡ್ಡಗಳು ಕುಸಿದಿದೆ,ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿದೆ. ಕಲ್ಯಾಣಪುರದ ಐದು ಮನೆಗಳು ಅಪಾಯದಲ್ಲಿದ್ದು ಅಲ್ಲಿಯ ಜನರನ್ನು ಅಕ್ಕುಂಜಿ ಶಾಲೆಯ ಖಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ. ಶಾಸಕ ಭೀಮಣ್ಣ ನಾಯ್ಕ ಶನಿವಾರ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಖಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.

ನಂತರ ತಾಲೂಕಿನ ಪ್ರಸಿದ್ದ ಪ್ರವಾಸಿ ಕೇಂದ್ರ ಹುಸೂರು(ನಿಪ್ಲಿ) ಜಲಪಾತಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ, ಈ ಬಾರಿ ಉತ್ತಮ ಮಳೆಯಾಗಿದೆ
ಮಳೆಯಿಂದ ಸಾಕಷ್ಟು ಹಾನಿಯಾಗಿದೆ ಅನೇಕ ಕಡೆಗಳಲ್ಲಿ ಮನೆ ಹಾನಿಯಾಗಿದೆ.ರಸ್ತೆಗಳು ಕೊಚ್ಚಿ ಹೋಗಿದೆ ಕಲ್ಯಾಣಪುರದ ಐದು ಕುಟುಂಬದವರಿಗೆ ಖಾಳಜಿ ಕೇಂದ್ರವನ್ನೂ ತೆರೆಯಲಾಗಿದೆ ಇವೆಲ್ಲವನ್ನು ಪರೀಶೀಲಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆನೆ ಅನೇಕ ಕಡೆಗಳಲ್ಲಿ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಹೋಗಿದೆ,ಕೊಟ್ಟಿಗೆಯ ಮೇಲೆ ಮರಬಿದ್ದು ರೈತರೊಬ್ಬರ ಜಾನುವಾರು ಸಾವನ್ನಪ್ಪಿದೆ ಎಲ್ಲೆಲ್ಲಿ ಏನೇನು ತೊಂದರೆಯಾಗಿದೆ ಎಂಬುದನ್ನು ಪರಶೀಲಿಸಿ ಸರಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಚರ್ಚಿಸಲಾಗುವುದು ಹಾಗೂ ವಯಕ್ತಿಕವಾಗಿ ಪರಿಹಾರವನ್ನು ನೀಡುತ್ತಿದ್ದೆವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುತ್ತದೆಂಬ ಸೂಚನೆ ಇದೆ ಇದು ಸಂತೋಷದ ವಿಚಾರವಾದರೂ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ನದಿಯ ಅಂಚಿನಲ್ಲಿರುವವರು ಸುರಕ್ಷಿತ ಜಾಗಕ್ಕೆ ಬರಬೇಕು ಇದಕ್ಕೆ ನಮ್ಮ ತಾಲೂಕಿನ ಅಧಿಕಾರಿಗಳು ನೆರವು ನೀಡುತ್ತಾರೆ. ಈಗಾಗಲೇ ಹೆಚ್ಚಿನ ಮಳೆಯಾಗಿರುವುದರಿಂದ ಶಾಲಾ-ಕಾಲೇಜುಗಳಿಗೆಲ್ಲ ರಜೆ ಘೋಷಣೆ ಮಾಡಲಾಗಿದೆ ಅದೇ ರೀತಿ ರೈತರು ಕೂಡ ಈ ದೊಡ್ಡ ಮಳೆಯಲ್ಲಿ ಕೆಲಸವನ್ನು ಮಾಡದೆ ಸ್ವಲ್ಪ ಮಳೆ ಕಡಿಮೆ ಆದ ನಂತರ ಕೃಷಿ ಕೆಲಸದಲ್ಲಿ ತೊಡಗಿಕೊಂಡರೆ ಒಳ್ಳೆಯದು
ರೈತರು ಸ್ವಲ್ಪ ದಿನ ತಮ್ಮ ಕೃಷಿಚಟುವಟಿಕೆಯನ್ನು ಮುಂದೂಡುವುದು ಉತ್ತಮ ಎಂದು ಹೇಳಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ಸಮಯದಲ್ಲಿ ಮನೆಗೆ ನೀರು ನುಗ್ಗಿದರೆ ಹತ್ತುಸಾವಿರರೂ. ನೀಡಲಾಗುತ್ತಿತ್ತು ಈ ಬಾರಿಯೂ ನೀಡಲು ಸರಕಾರಕ್ಕೆ ಆಗ್ರಹ ಮಾಡುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ,
ಮನೆ ಸಂಪೂರ್ಣ ಹಾನಿಯಾದರೆ 1.2೦ಲಕ್ಷರೂ. ನೀಡಲಾಗುತ್ತಿದೆ ಹಾನಿಯಾದರೆ ಯಾವ ಪ್ರಮಾಣದಲ್ಲಿ ಹಾನಿಯಾಗುತ್ತಿದೆಯೋ ಅದಕ್ಕೆ ತಕ್ಕಂತೆ ಪರಿಹಾರ ನೀಡಲಾಗುತ್ತಿದೆ ಎಂದು ಭೀಮಣ್ಣ ನಾಯ್ಕ ಹೇಳಿದರು.

ತಹಸೀಲ್ದಾರ ಮಧುಸೂದನ ಕುಲಕಣೀ,ತಾಪಂ ಅಧಿಕಾರಿ ದೇವರಾಜ ಹಿತ್ತಲಕೊಪ್ಪ,ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ,ಕೃಷಿ ಅಧಿಕಾರಿ ಸುಮಾ ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯ ಅನೇಕ ಕಡೆಯಲ್ಲಿ ಗುಡ್ಡಗಳು ಕುಸಿಯುತ್ತಿದೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಅವೈಜ್ಞಾನಿಕ ಕಾಮಗಾರಿಯಿಂದ ಹತ್ತಾರು ಜನರ ಜೀವ ಬಲಿಯಾಗಿದೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.ಹೊಸದಾಗಿ ರಸ್ತೆಯನ್ನು ನಿರ್ಮಿಸುವಾಗ ಸುರಕ್ಷತೆಯ ಬಗ್ಗೆ ಖಾಳಜಿವಹಿಸಬೇಕು ನೀಲನಕ್ಷೆ ತಯಾರಿಸುವಾಗ ಎಲ್ಲೆಲ್ಲಿ ಸುರಕ್ಷತಾ ಕ್ರಮ ಕೈಗೊಳಬೇಕು ಎಂದು ತಿಳಿದುಕೊಳ್ಳಬೇಕು

ಹುಸೂರು ಫಾಲ್ಸ್ ಉತ್ತಮವಾದ ಪ್ರವಾಸಿ ತಾಣವಾಗಿದೆ ಆದರೆ ಮಳೆಗಾಲದಲ್ಲಿ ಮಾತ್ರ ಇಲ್ಲಿ ನೀರು ಇರುತ್ತದೆ ವರ್ಷದ ಎಲ್ಲಾ ಕಾಲದಲ್ಲೂ ನೀರು ಹರಿಯುವಂತಹ ವ್ಯವಸ್ಥೆ ಮಾಡುವ ಬಗ್ಗೆ ಹಾಗು ಈ ಸ್ಥಳದ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೆನೆ

About the author

Adyot

Leave a Comment