78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದ ಐತಿಹಾಸಿಕ ನೆಹರೂ ಮೈದಾನದಲ್ಲಿ ಸಂಭ್ರಮದಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ,ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳಿಂದ ಪಥಸಂಚಲನ,ಸನ್ಮಾನ ಕಾರ್ಯಕ್ರಮ ನಡೆಯಿತು

ಧ್ವಜಾರೋಹಣ ನಡೆಸಿ ಸಂದೇಶ ನೀಡಿದ ತಹಶೀಲ್ದಾರ ಎಂ.ಆರ್.ಕುಲಕರ್ಣಿ,ಭೂಮಿಯಲ್ಲಿರುವ ಪ್ರತಿಯೊಂದು ಜೀವಜಂತುಗಳು ಸ್ವಾತಂತ್ರö್ಯವನ್ನು ಬಯಸುತ್ತವೆ ಯಾರೂ ಬಂಧನದಲ್ಲಿ ಇರಲು ಇಷ್ಟಪಡುವುದಿಲ್ಲ.ಶತಮಾನಗಳ ಕಾಲ ಬ್ರಿಟೀಷರು ನಮ್ಮನ್ನು ಬಂಧನದಲ್ಲಿಟ್ಟು ನಮ್ಮ ಸ್ವಾತಂತ್ರö್ಯವನ್ನು ಕಸಿದುಕೊಂಡಿದ್ದರು. ಸಾವಿರಾರು ದೇಶಭಕ್ತರು ಸತತ ಹೋರಾಟ ನಡೆಸಿ ನಮ್ಮದೇಶವನ್ನು ಬ್ರಿಟೀಷ್ ಸಂಕೋಲೆಯಿAದ ಮುಕ್ತಿಗೊಳಿಸಿದರು. ಸಿದ್ದಾಪುರ ತಾಲೂಕು ಸ್ವತಂತ್ರ ಹೋರಾಟದಲ್ಲಿ ರಾಜ್ಯದಲ್ಲೆ ಮಂಚೂಣಿಯಲ್ಲಿತ್ತು ವಿಶೇಷವೆಂದರೆ ತಾಲೂಕಿನಲ್ಲಿ ಕೇವಲ ಗಂಡಸರಷ್ಟೆ ಭಾಗವಹಿಸಿರಲಿಲ್ಲ ಮಹಿಳೆಯರು,ಗರ್ಭಿಣಿಯರು,ಮಕ್ಕಳು,ವೃದ್ಧರು ಭಾಗವಹಿಸಿ ಅಂದಿನ ಸರಕಾರಕ್ಕೆ ನಡುಕ ಹುಟ್ಟಿಸಿದ್ದರು. ದೇಶಭಕ್ತರ ಈ ಹೋರಾಟದಿಂದ ಗಳಿಸಿದ್ದ ಸ್ವಾತಂತ್ರö್ಯವನ್ನು ನಾವು ಪ್ರಾಮಾಣಿಕತೆಯಿಂದ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಪುಸ್ತಕ ರಚಿಸಿ ಪ್ರದಾನಿ ನರೇಂದ್ರ ಮೋದಿಯವರಿಂದ ಪ್ರಶಂಸಾ ಪತ್ರ ಪಡೆದ ಕೆಕ್ಕಾರ ನಾಗರಾಜ ಭಟ್ಟರನ್ನು ಸ್ಥಳೀಯ ಆಡಳಿತವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್,ಸಂಕಲ್ಪ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಹೊಸೂರು, ಪಪಂ ಸದಸ್ಯರಾದ ಕೆ.ಜಿ.ನಾಯ್ಕ ಹಣಜೀಬೈಲ್,ಸುಧೀರ್ ನಾಯ್ಕ,ರವಿಕುಮಾರ ನಾಯ್ಕ,ನಂದನ ಬೋರ್ಕರ್, ಯಶೋಧ ಮಡಿವಾಳ,ರಾಧಿಕಾ ಕಾನಗೋಡ,ವೆಂಕೋಬ, ಮುಂತಾದವರು ಉಪಸ್ಥಿತರಿದ್ದರು.
#########
ಲಯನ್ಸ್ ಸಂಸ್ಥೆಯಿಂದ ಸ್ವಾತಂತ್ರ್ಯ ದಿನಾಚರಣೆ
ದೇಶದ ರಕ್ಷಣೆಗಾಗಿ ಎಲ್ಲರೂ ಒಗಟ್ಟಿನಿಂದ ಶ್ರಮಿಸಬೇಕು-
ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವವನ್ನು ರಕ್ಷಿಸುವ ಕೆಲಸ ನಮ್ಮೆಲ್ಲರದಾಗಿದೆ.ಹಿಂದಿನ ತಲೆಮಾರಿನವರೂ ಕಲ್ಪಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರಬೇಕಾಗಿದೆ. ಅಪಾರವಾದ ತ್ಯಾಗ ಬಲಿದಾನದೊಂದಿಗೆ ಸ್ವಾತಂತ್ರ್ಯ ಬಂದಿದೆ. ಇದರ ಮೌಲ್ಯವನ್ನು ಅರ್ಥ ಮಾಡಿಕೊಂಡು ಬದುಕಬೇಕಾಗಿದೆ ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಹೇಳಿದರು.

ಸ್ಥಳೀಯ ಬಾಲಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಧ್ವಜಾರೋಹಣದ ಬಳಿಕ ಗಿಡವನ್ನು ನೆಟ್ಟು ವನಮಹೋತ್ಸವವನ್ನು ಆರಂಭಿಸಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಅಧ್ಯಕ್ಷ ಎ.ಜಿ.ನಾಯ್ಕ ಮಾತನಾಡಿ,ನಾವೆಲ್ಲರೂ ಒಗಟ್ಟಿನಿಂದ ದೇಶವನ್ನು ಮುನ್ನಡೆಸುವಲ್ಲಿ ಸಹಕರಿಸಬೇಕು ಎಂದು ಹೇಳಿದರು.
ವಲಯ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ, ಸಾಹಿತಿಗಳಾದ ಜಿ.ಜಿ ಹೆಗಡೆ ಬಾಳಗೋಡ ಮಾತನಾಡಿದರು.
ಕಾರ್ಯದರ್ಶಿ ಕುಮಾರ ಗೌಡರ್ ಸ್ವಾಗತಿಸಿ ವಂದಿಸಿದರು.

########
ಎಲ್‌ಐಸಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ದೇಶದ ಹಿರಿಯರು ತಮ್ಮತ್ಯಾಗ, ಬಲಿದಾನ, ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಸ್ವಾತಂತ್ರ್ಯಾ ನಂ
ತರ ರಾಷ್ಟ್ರವು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಭಾರತೀಯ ಜೀವವಿಮಾ ನಿಗಮದ ಸ್ಥಳೀಯ ಶಾಖೆಯ ಶಾಖಾಧಿಕಾರಿ ಎಸ್.ವಿ.ಹೆಗಡೆ ಹೇಳಿದ್ದಾರೆ.

ದೇಶದಲ್ಲಿ ೬೩ ಶೇಕಡಾದಷ್ಟು ಯುವ ಶಕ್ತಿಯಿದೆ. ೬೫ ಶೇಕಡಾದಷ್ಟು ಜನ ಡಿಜಿಟಲ್ ಪೇಮೆಂಟ್ ಮಾಡುತ್ತಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಅನೇಕ ವಸ್ತುಗಳನ್ನು ನಮ್ಮ ದೇಶದಲ್ಲೆ ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ವಿಮಾನವನ್ನೂ ಸ್ವದೇಶದಲ್ಲಿಯೇ ತಯಾರಿಸುವ ಹೆಚ್ಚುಗಾರಿಕೆ ನಮಗಿದೆ. ದೇಶ ಕಟ್ಟುವಲ್ಲಿ ಎಲ್‌ಐಸಿ ತನ್ನ ಕೈ ಜೋಡಿಸುತ್ತಿದ್ದು ೫೦ ಲಕ್ಷ ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿದೆ. ಎಲ್‌ಐಸಿ ಇಂದು ವಿಮಾಕ್ಷೇತ್ರದಲ್ಲಿ ಪ್ರಪಂಚದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ಅಭಿವೃದ್ಧಿ ಅಧಿಕಾರಿಗಳಾದ ದೀಪಕ ಹೆಗಡೆ, ಅಮಿತ ನಾಯ್ಕ, ಸಿದ್ದಾರ್ಥ ಬರ‍್ಕರ್, ಕಿರಣ ನಿಂಗಣ್ಣವರ, ಸಿಬ್ಬಂದಿಗಳಾದ ಭರತ ಶಹಾ, ವಿನಾಯಕ ಮಡಿವಾಳ ಸೇರಿದಂತೆ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿನಿಧಿಗಳಿಗೆ ಸ್ಮರಣಿಕೆ ಹಾಗೂ ಮೆಡಲ್ ಪ್ರದಾನ ಮಾಡಲಾಯಿತು.

About the author

Adyot

Leave a Comment