ಆದ್ಯೋತ್ ಸಿನೇಮಾ ಸುದ್ದಿ
ಬೆಳ್ಳಿದೀಪ ಪ್ರೊಡಕ್ಷನ್ಸ್ ಬೆಂಗಳೂರ ಅವರ ‘ಕನ್ನಡಿ’ ಸಾಮಾಜಿಕ ಕಳಕಳಿಯ ಚಲನಚಿತ್ರ ಅಮೆರಿಕ ಕನ್ನಡ ಕೂಟಗÀಳ ಅಗರ ‘ಅಕ್ಕ’ ವಿಶ್ವ ಸಮ್ಮೇಳನ-೨೦೨೪ರ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ .
ಈ ಕುರಿತು ‘ಅಕ್ಕ’ ಸಮ್ಮೇಳನದ ಕಾರ್ಯದರ್ಶಿ ಮಾದೇಶ ಬಸವರಾಜು ತಿಳಿಸಿದ್ದಾರೆ. ವೇಶ್ಯಾವಾಟಿಕೆಯ ಸುತ್ತ ಹೆಣೆದ ಕಥಾನಕ ‘ಕನ್ನಡಿ’ ಚಿತ್ರ . ಏನು ಅರಿಯದೆ ವೇಶ್ಯಾವಾಟಿಕೆಗೆ ಹೋಗಿ ಆ ರಾತ್ರಿ ಆಗುವ ಅವಳ ಅನುಭವ , ಬಂದು ಹೋಗುವ ಒಂದಷ್ಟು ಗಿರಾಕಿ ಎಂಬ ಹೆಸರಿನ ಗಂಡಸರು , ಆ ಎಲ್ಲವುಗಳ ಅರಿತ ನಾಯಕಿ ಪಲ್ಲವಿ ಇದೊಂದು ಪಾಪದ ಕೂಪ ಇರುವ ಕಷ್ಟಗಳಿಗೆ ಇದೊಂದೇ ನಿರ್ಣಾಯಕ ಹಾದಿಯಲ್ಲ , ಬದುಕಲು ನೂರಾರು ಆಯಾಮಗಳು ಇದ್ದಾವೆ, ಬದುಕಿ ತೋರಿಸುವ ಛಲದಿಂದ ಆ ರಾತ್ರಿಯ ಕರಾಳ ರಾತ್ರಿಯಿಂದ ಹೊರಬಂದು ಹೊಸದೊಂದು ಬದುಕಿಗೆ ಹೆಜ್ಜೆ ಇಟ್ಟ ಹೆಣ್ಣು ಮಗಳ ಕಥಾನಕ ಚಿತ್ರ ಕನ್ನಡಿ. ಈಗಾಗಲೇ ಮೈಸೂರು ದಸರಾ ಮಹೋತ್ಸವ , ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಇದೀಗ ಅಕ್ಕ ಸಮ್ಮೇಳನಲ್ಲೂ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಕ್ಕೆ ನಿರ್ಮಾಪಕ ಬೆಳ್ಳಿಚುಕ್ಕಿ ವೀರೇಂದ್ರ ಖುಷಿಯನ್ನು ಚಿತ್ರತಂಡದೊಂದಿಗೆ ಹಂಚಿಕೊಅಂಡರು.
ತಾರಾ ಬಳಗದಲ್ಲಿ- ನಮಿತಾ ರಾವ್, ಶಶಾಂಕ್ ಸಿಂಹ, ಎ .ಗೋವಿಂದ, ನಟರಾಜ್ ಬೆಳ್ಳಿದೀಪ ,ಮೈಕೋಮಂಜು ,ಅಲಕಾನಂದ, ರೇಣುಕಾ ಶಿಕಾರಿ, ಮೈಸೂರು ಮಂಜುಳಾ, ಕಾವೇರಿ ಶ್ರೀಧರ್, ಕವಿತಾ ಕಂಬಾರ್, ಎಸ್ ವಿ ರವಿಶಂಕರ್, ವಿನೋದ್ , ರಾಜೇಶ್ ಅಂಜನಾಪುರ ಇತರರಿದ್ದಾರೆ. ತಾಂತ್ರಿಕವರ್ಗದಲ್ಲಿ-ಛಾಯಾಗ್ರಹಣ ಆರ್ ಗಿರಿ, ಸಂಗೀತ ಶಿವ ಸತ್ಯ ,ವಸ್ತ್ರ ವಿನ್ಯಾಸ ರೇಷ್ಮಾ ಬೆಳ್ಳಿದೀಪ, ಹಿನ್ನೆಲೆ ಗಾಯಕರು ಮಾನಸ ಹೊಳ್ಳ, ಆಕಾಂಕ್ಷ ಬಾದಾಮಿ, ಕಡಬಗೆರೆ ಮುನಿರಾಜು, ಸಂಕಲನ ಮುತ್ತುರಾಜ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ಗೀತ ರಚನೆ ,ನಟನೆ , ನಿರ್ಮಾಣ ಬೆಳ್ಳಿಚುಕ್ಕಿ ವೀರೇಂದ್ರ ಅವರದಿದ್ದು , ಶರಣ್ ಗದ್ವಾಲ್ ನಿರ್ದೇಶಿಸಿದ್ದಾರೆ.