ರಾಜ್ಯಸರಕಾರದ ವಿರುದ್ದ ಸಂಸದ ರಾಘವೇಂದ್ರ ಕಿಡಿ

ಆದ್ಯೋತ್ ಸುದ್ದಿನಿಧಿ:
ರಾಷ್ಟ್ರ ಕಂಡ ಧೀಮಂತ ನಾಯಕ ದಿ.ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜಯಂತಿ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಮಕೃಷ್ಣ ಹೆಗಡೆ ವೃತ್ತದಲ್ಲಿರೋ ರಾಮಕೃಷ್ಣ ಹೆಗಡೆ ಪ್ರತಿಮೆಗೆ ಶಿವಮೊಗ್ಗ ಸಂಸದ ರಾಘವೇಂದ್ರ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ರಾಘವೇಂದ್ರ, ಚುನಾವಣೆಗೆ ಮುನ್ನ ಮಾರಿಕಾಂಬೆ ಆಶೀರ್ವಾದ ಬೇಡಿಕೊಂಡು ಹೋಗಿದ್ದೆ. ಈಗ ಮತ್ತೊಮ್ಮೆ 4ನೇ ಬಾರಿ ಆಯ್ಕೆಯಾಗಿರುವುದರಿಂದ
ಈಗ ದರ್ಶನಕ್ಕೆ ಬಂದಿದ್ದೆನೆ.ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 98ನೇ ಜಯಂತಿ ಇದೆ. ಅವರ ಮೂರ್ತಿ ಎಲ್ಲ ಕಡೆ ಇಲ್ಲ. ಇಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೇವೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿ ತುಂಬಿದ ಪವಿತ್ರ ಸ್ಥಳ ಶಿರಸಿಗೆ ಬಂದಿದ್ದು ಸಂತೋಷವಾಗಿದೆ ಎಂದು ಹೇಳಿದರು.

ಸರ್ಕಾರ ಬದಲಾವಣೆಯಾದಾಗ ತಮ್ಮ ಕೆಲಸಕ್ಕಾಗಿ ಛತ್ರಿ ಹಿಡಿಯುವ ಶಾಸಕರು ಇದ್ದಾರೆ. ಅಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಬೇರೆ ಬೇರೆ ಹೇಳಿಕೆ ಕೊಡುತ್ತಾರೆ. ಅದರಲ್ಲಿ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರು. ಕಮಲದ ಹೂವಿನ ಚಿಹ್ನೆಯಲ್ಲಿ ಗೆದ್ದವರು ಪಕ್ಷ ವಿರೋಧಿ ಹೇಳಿಕೆ ನೀಡಬಾರದು ನಮ್ಮ ಜೀವನದಲ್ಲಿ ನಾವು ಯಾರೂ ಕೂಡ ದ್ವೇಷದ ರಾಜಕಾರಣ ಮಾಡಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು ಆದರೆ ಈಗ ಹಗರಣಗಳ ಸರಮಾಲೆಯೇ ಇದೆ.ಅನುಮಾನ ಇರುವುದರಿಂದ
ತನಿಖೆ ಮಾಡಬೇಕಾಗಿದೆ. ಮೂಡಾ, ವಾಲ್ಮೀಕಿ ಹಗರಣದ ದೂರು ಬಂದಾಗ ತನಿಖೆಗೆ ರಾಜ್ಯಪಾಲರು ಆದೇಶ ಮಾಡಿದ್ದಾರೆ. ಯಾವುದೇ ಒಬ್ಬ ಮುಖ್ಯಮಂತ್ರಿ ಇಳಿಸೋಕೆ ನಾವು ರಾಜಕಾರಣ ಮಾಡ್ತಿಲ್ಲ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ಹೇಳಿದರು

ರಾಜ್ಯ ಸರ್ಕಾರ ವಿರೋಧ ಪಕ್ಷದ ವಿರುದ್ಧ ಸಮಾವೇಶ ಮಾಡಿದ ಕೀರ್ತಿ ಡಿಕೆಶಿ ಗೆ ಸಲ್ಲುತ್ತೆ. ಇವರು ಸರ್ಕಾರ ನಡೆಸೋಕೆ ನಾಲಾಯಕ್ ಆಗಿದ್ದಾರೆ. ಜನರಿಗೆ ದ್ರೋಹ ಎಸಗಿದ್ದಾರೆ.
. ಯಾರೋ ಬೀದಿಲಿ ಹೋಗೋರು ಕಂಪ್ಲೇಂಟ್ ಕೊಟ್ಟಿರೋದು ಅಂತ ಮಾತಾಡ್ತಾರೆ. ಬೀದಿಲಿ ಇರೋರ ಮತ ಪಡೆದೇ ನೀವು ಅಧಿಕಾರಕ್ಕೆ ಬಂದಿರೋದು. ನೈತಿಕ ಮೌಲ್ಯಗಳಿಗೆ ಬೆಲೆ ಕೊಡಿ ಅಂತ ವಿನಂತಿ ಮಾಡ್ತೀನಿ. ಸಂವಿಧಾನ ಯಾವುದೋ ವ್ಯಕ್ತಿಗೊಸ್ಕರ ಬದಲಾವಣೆ ಆಗಲ್ಲ. ಇದು ಎಲ್ಲರಿಗೂ ಒಂದೇ. ಯಾವುದೇ ವಿಚಾರ ತನಿಖೆ ಮಾಡಲಿ, ನಾವೂ ಕೂಡ ಎದುರಿಸುತ್ತೇವೆ ಅಂತ ಬಿ.ವೈ ರಾಘವೇಂದ್ರ ಕಾಂಗ್ರೆಸ್ ಸರ್ಕಾರ ವಿರುದ್ಧ ಹರಿಹಾಯ್ದರು.

About the author

Adyot

Leave a Comment