ಆದ್ಯೋತ್ ಸುದ್ದಿನಿಧಿ:
ಕಸ್ತೂರಿರಂಗನ್ ವರದಿಯ ಬಗ್ಗೆ ರಾಜ್ಯದ ಅಭಿಪ್ರಾಯಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ಜನಪ್ರತಿನಿಧಿಗಳ, ಸಚಿವರ ಸಭೆ ಬೆಂಗಳೂರಿನಲ್ಲಿ ಸೆ.19ಕ್ಕೆ ನಿಗದಿ ಪಡಿಸಲಾಗಿದೆ.

CREATOR: gd-jpeg v1.0 (using IJG JPEG v62), quality = 85
ಪ್ರದೇಶದ ಜನಪ್ರತಿನಧಿಗಳ ಮತ್ತು ಸಚಿವರ ವಿಶೇಷ ಸಭೆ ಬೆಂಗಳೂರಿನಲ್ಲಿ ಸಭೆಯ ತೀರ್ಮಾನವನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ಮಂಡಿಸಲು ಸೆ.19ರಂದು
ನಿಗದಿಗೊಳಿಸಿದ್ದು, ಪೂರ್ವ ತಯಾರಿ ಜರುಗಲಿದೆ ಎಂದು ಹೋರಾಟಗಾರ ರವೀಂದ್ರನಾಯ್ಕ ತಿಳಿಸಿದ್ದಾರೆ.

ಕರಡು ಕಸ್ತೂರಿ ರಂಗನ್ ವರದಿಯ ಜಾರಿಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 1೦ ವರ್ಷದಿಂದ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲಾಪಂಚಾಯತ, ವಿವಿಧ ತಾಲೂಕ ಪಂಚಾಯತ, ಗ್ರಾಮ ಪಂಚಾಯತಗಳಲ್ಲಿ ವರದಿಗೆ
ವಿರೋಧವಾಗಿ ಠರಾವು ಸ್ವೀಕರಿಸಲಾಗಿತ್ತು, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು 1 ಲಕ್ಷಕುಂಟುಬಗಳಿಂದ ಕೇಂದ್ರಸರ್ಕಾರಕ್ಕೆ ಆಕ್ಷೇಪಣಾ ಪತ್ರಸಲ್ಲಿಸಲಾಗಿತ್ತು ಎಂದು ರವೀಂದ್ರನಾಯ್ಕ ಹೇಳಿದರು.

ಅಲ್ಲದೇ, ವಿಧಾನ ಸಭೆ ಅಧಿವೇಶನದಲ್ಲಿಯೂ ತಿರಸ್ಕರಿಸಲು
ಸರ್ವಾನುಮತದಿಂದ ಪಕ್ಷತಿತವಾಗಿ ತೀರ್ಮಾನಿಸಿ, ರಾಜ್ಯ ಸರ್ಕಾರದ ವೈಜ್ಞಾನಿಕ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ವಿರೋಧ ಪ್ರಸ್ತವಾವನೆ ಸಲ್ಲಿಸುವುದು ಅವಶ್ಯವಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ತೀರ್ಮಾನದ ಕುರಿತು ಸೂಕ್ಷ್ಮ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

CREATOR: gd-jpeg v1.0 (using IJG JPEG v62), quality = 85
ಜಿಲ್ಲೆಯಲ್ಲಿನ 9 ತಾಲೂಕಗಳಲ್ಲಿ 704 ಹಳ್ಳಿಗಳು ಸೂಕ್ಷ್ಮ
ಪ್ರದೇಶ ವ್ಯಾಪ್ತಿಯಲ್ಲಿ ಬರುತಿದ್ದು, ಜಿಲ್ಲೆಯ ಸುಮಾರು 138 ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಅತೀ ಸೂಕ್ಷ್ಮ ಪ್ರದೇಶಗಳು ಗುರುತಿಸುವಿಕೆಯಾಗಿರುವುದರಿಂದ ಜಿಲ್ಲೆಯ ಭೌಗೋಳಿಕವಾಗಿ ಶೇ.7೦ ರಷ್ಟು ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಗೊಳ್ಳುವು ದರಿಂದ ಜಿಲ್ಲೆಯ ಸಂಪೂರ್ಣ ಜನಜೀವನದ ವ್ಯವ್ಯಸ್ಥೆ ಮತ್ತು ಮೂಲಭೂತಸೌಕರ್ಯಗಳ ಮೇಲೆ ತೀವ್ರ ತರಹದ
ಪರಿಣಾಮ ಬೀರುವುದೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆತಂಕ ವ್ಯಕ್ತಪಡಿಸಿದರು.
