ಸೌಥ್ ಆಫ್ರಿಕಾ : ಸೌಥ್ ಆಫ್ರಿಕಾದ ಓವಲ್ ನಲ್ಲಿ ನಡೆಯುತ್ತಿರೋ 19 ವರ್ಷ ಒಳಗಿನ ವಯೋಮಿತಿಯ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಕ್ರಿಕೆಟ್ ಶಿಶು ಜಪಾನ್ ತಂಡವನ್ನ ಸುಲಭವಾಗಿ ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಪಾನ್ ತಂಡ 22.5 ಓವರ್ ಗಳಲ್ಲಿ 41 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರವಿ ಬಿಷ್ನೋಯಿ 8 ಓವರ್ ಗೆ 5 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಕಾರ್ತಿಕ್ ತ್ಯಾಗಿ 6 ಓವರ್ ಗೆ 10 ರನ್ ನೀಡಿ 3 ವಿಕೆಟ್ ಕಬಳಿಸಿದರು. 42 ರನ್ ಗಳ ಸುಲಭ ಗುರಿ ಬೆನ್ನತ್ತಿದ ಭಾರತ ತಂಡ 4.5 ಓವರ್ ಗಳಲ್ಲಿ 42 ರನ್ ಗಳಿಸಿ 10 ವಿಕೆಟ್ ಗಳ ಸುಲಭ ಜಯ ದಾಖಲಿಸಿತು.