ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಶಿರಸಿಯ ಅಂಚೆ ಕಚೇರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಸಂಭ್ರಮಾಚರಣೆ ನಡೆಯಿತು.
ಬಿಜೆಪಿ ಜಿಲ್ಲಾ ಪ್ರದಾನಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ,ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗೆಲ್ಲುವ ಮೂಲಕ ಅಭೂತಪೂರ್ವ ವಿಜಯ ದಾಖಲಿಸಿದೆ. ನರೇಂದ್ರ ಮೋದಿ ನಾಯಕತ್ವವನ್ನು ದೆಹಲಿಯ ಜನ ಬೆಂಬಲಿಸಿದ್ದಾರೆ.ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ದೆಹಲಿಯ ಮತದಾರರು ತೀರ್ಪು ನೀಡಿದ್ದಾರೆ, ಕೇಜ್ರಿವಾಲ್ ಹಾಗೂ ಆಪ್ ಮಾಡಿರುವ ಅವಾಂತರಗಳನ್ನು ಬಿಜೆಪಿ ಸರಿಪಡಿಸಿ ಉತ್ತಮ ಆಡಳಿತವನ್ನು ನೀಡಲಿ ಎಂದು ಬಯಸಿ ಈ ಜನಾದೇಶ ನೀಡಿದ್ದಾರೆ. ಅಣ್ಣಾ ಹಜಾರೆ ಅವರ ಆಂದೋಲನವನ್ನು ದುರ್ಬಳಕೆ ಮಾಡಿಕೊಂಡು, ಭ್ರಷ್ಠಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಅಧಿಕಾರ ಹಿಡಿದ ಕೇಜ್ರಿವಾಲ್ ಹೇಗೆ ಸ್ವತಃ ಭ್ರಷ್ಠಾಚಾರದಲ್ಲಿ ಮುಳುಗಿದರು ಎಂಬುದನ್ನು ದೆಹಲಿಯ ಮತದಾರರು ಅರ್ಥಮಾಡಿಕೊಂಡು ಈ ತೀರ್ಪು ನೀಡಿದ್ದಾರೆ.ಕಾಂಗ್ರೆಸ್ ಶೂನ್ಯ ಸಾಧನೆ ಮಾಡುವುದರ ಮೂಲಕ ಹಿನ್ನಲೆಗೆ ಸರಿದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷ
ಉಷಾ ಹೆಗಡೆ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಹಾಂತೇಶ ಹಾದಿಮನಿ, ಶಿರಸಿ ನಗರ ಸಭೆಯ ಅಧ್ಯಕ್ಷ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಕಾಂತ ಬಳ್ಳಾರಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ
ರವಿಚಂದ್ರ ಶೆಟ್ಟಿ,ಗ್ರಾಮಪಂಚಾಯತ್ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ್ ಶೆಟ್ಟಿ, ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ, ಶಿಲ್ಪಾ ಭಾಸ್ಕರ್ ನಾಯ್ಕ, ಹರೀಶ ಪಾಲೇಕರ್, ವಿಜಯ ಶೆಟ್ಟಿ, ಆನಂದ ಗಾಂವ್ಕರ್, ರವಿ ಗಾಂವ್ಕರ್, ನಾಗರಾಜ್ ನಾಯ್ಕ, ಸುದರ್ಶನ ವೈದ್ಯ, ಉಪಸ್ಥಿತರಿದ್ದರು.