ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲೆ ಅತಿ ದೊಡ್ಡ ಉಚಿತ ಹೃದಯ ತಪಾಸಣಾ ಶಿಬಿರವನ್ನು ಸಿದ್ದಾಪುರದ ಎಂ ಎಚ್ ಪಿ ಎಸ್ ಬಾಲಿಕೊಪ್ಪ ಶಾಲೆಯಲ್ಲಿ ದಿನಾಂಕ 16ನೇ ಭಾನುವಾರ ಬೆಳಿಗ್ಗೆ 9:30ಯಿಂದ ಆಧಾರ ಸಂಸ್ಥೆ (ರಿ) ಸಿದ್ದಾಪುರ ವತಿಯಿಂದ ಒಮೇಗಾ ಆಸ್ಪತ್ರೆ ಮಂಗಳೂರು , ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ! ಡಿ ಏನ್.ಶೇಟ ಸ್ಮರಣಾರ್ಥ ಆಯೋಜಿಸಲಾಗಿದೆ.
ಶಿಬಿರವನ್ನು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ ನಾಯ್ಕ ಉದ್ಘಾಟಿಸಲಿದ್ದಾರೆ .ಗೌರವ ಉಪಸ್ಥಿತಿ ಕಾವ್ಯ ರಾಣಿ ಕೆ.ವಿ ಉಪ ವಿಭಾಗ ಅಧಿಕಾರಿಗಳು ಸಿರ್ಸಿ, ಎಂ. ಆರ್. ಕುಲಕರ್ಣಿ ತಹಶೀಲ್ದಾರರು ಸಿದ್ದಾಪುರ, ಡಾಕ್ಟರ್ ಕೆ. ಮುಕುಂದ ಹಿರಿಯ ಹೃದಯ ರೋಗ ತಜ್ಞರು , ಡಾಕ್ಟರ್ ಅಮಿತ್ ಕಿರಣ್ ಶಸ್ತ್ರ ಚಿಕಿತ್ಸಾ ತಜ್ಞರು ಮಂಗಳೂರು, ಡಾಕ್ಟರ್ ಮೇಘನಾ ಮುಕುಂದ , ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ , ವಿಠ್ಠಲ್ ಎನ್. ಶೇಟ ಬೆಂಗಳೂರು ರಾಜ್ಯ ಪ್ರಶಸ್ತಿ ಪುರಸ್ಕೃತ ರಜತ ಶಿಲ್ಪಿ .ಹಾಗೂ ಈ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ವಹಿಸಲಿದ್ದಾರೆ
.ಸಾರ್ವಜನಿಕರು ಈ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆಧಾರ ಸಂಸ್ಥೆಯ ,ಉಪಾಧ್ಯಕ್ಷ ಬೈಜು ವಿ. ಜೋಸೆಫ್ , ಶಿಬಿರದ ಸಂಯೋಜಕ ಧರ್ಮ ಮಂಜುನಾಥ ಅಂಬಿಗ,ಹಾಗೂ ದಿ: ಡಿ .ಎನ್.ಶೇಟ ಕುಟುಂಬದ ಸದಸ್ಯ ಪ್ರಶಾಂತ್ ಡಿ.ಶೇಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .