ಶಿರಸಿ- ಬೆಂಗಳೂರು ಬಸ್ ನಲ್ಲಿ ಕೊಲೆ ಆರೋಪಿ ಬಂಧನ

ಆದ್ಯೋತ್ ಸುದ್ದಿನಿಧಿ:
ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಇದೀಗ ನಡೆದಿದೆ.
ಗಂಗಾಧರ ಎಂಬಾತ ಕೊಲೆಯಾದ ದುರ್ದೈವಿ.ಈತ ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೊಲೆ ಪಾತಾಕಿಯೂ ಕೂಡಾ ಬಸ್ ಹತ್ತಿ ಹೆಂಡತಿಯೊಂದಿಗೆ ಕುಳಿತಿದ್ದ ಗಂಗಾಧರನೊಂದಿಗೆ ತಗಾದೆ ತೆಗೆದು ಚಾಕುವಿನಿಂದ ಹೃದಯಕ್ಕೆ ಚುಚ್ಚಿ ಕೊಲೆಮಾಡಿದ್ದಾನೆ.ಕೊಲೆಗೆ ಕಾರಣ ತಿಳಿದು ಬಂದಿಲ್ಲ ಬಸ್ ಶಿರಸಿಯಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ಸ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಬಸ್ ನಲ್ಲಿ ಹೆಂಡತಿಯೊಂದಿಗೆ ಸಾಗುತ್ತಿದ್ದ ಗಂಗಾಧರ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆಮಾಡಿದ ಕೊಲೆ ಪಾತಕ ಶಿರಸಿಯ ಪ್ರೀತಮ ಮ್ಯಾನುವಲ್ ಡಿಸೋಜ ಬಸ್ ನಿಂದ ಹಾರಿ ಪರಾರಿಯಾಗಿದ್ದು ಪೋಲಿಸರು ತೀವ್ರ ತನಿಖೆ ನಡೆಸಿದ್ದಾರೆ.ಸುದ್ದಿ ತಿಳಿದ ಡಿವಾಯಸ್ಪಿ ಗಣೇಶ ಕೆ ಎಲ್ ಮತ್ತು ಸಿಪಿಆಯ್ ಶಶಿಕಾಂತ ವರ್ಮಾ ಮತ್ತು ಪಿಎಸ್ಆಯ್ ನಾಗಪ್ಪ ಬಿ ಕೂಡಲೇ ಸರಕಾರಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದು ಆರೋಪಿಯ ಬಂಧನಕ್ಕೆ ತಂಡ ರಚಿಸಿದ್ದಾರೆ.ಗಂಡನನ್ನು ತಪ್ಪಿಸುವ ಸಂದರ್ಭದಲ್ಲಿ ಪೂಜಾ ಗಂಗಾಧರ ಕೈ
ಗೂ ಚಾಕು ಹಾಕಿರುವುದು ಕಂಡು ಬಂದಿದೆ.ಪೂಜಾ ಮತ್ತು ಗಂಗಾಧರ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದರು.ಇವರಿಬ್ಬರೂ ಪೂಜಾ ಅತ್ತೆಮನೆಯಾದ ಅಚನಳ್ಳಿಗೆ ಬಂದು ಇಂದು ಸಂಜೆ 7.30 ರ ಸುಮಾರಿಗೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಬೆಂಗಳೂರಿಗೆ ಸಾಗಲು ಬಸ್ ಹತ್ತಿದ್ದಾರೆ.ಈ ಸಂದರ್ಭದಲ್ಲಿ ಪ್ರೀತಮ ಕೂಡಾ ಬಸ್ ಹತ್ತಿ ಇನ್ನೇನು ಬಸ್ ಸರಕಾರಿ ಆಸ್ಪತ್ರೆ ಹತ್ತಿರ ಬರುತ್ತಿದ್ದಂತೆ ಪ್ರೀತಮ ಚಾಕುವಿನಿಂದ ಗಂಗಾಧರನ ಎದೆಗೆ ಇರಿದು ಕೊಲೆಮಾಡಿದ್ದು ನಂತರ ಬಸ್ ನಿಂದ ಹಾರಿ ಪರಾರಿಯಾಗಿದ್ದ ಆರೋಪಿಯನ್ನು
ಪೊಲೀಸ್ ರು ಬಂಧಿಸಿದ್ದಾರೆ.ಕೊಲೆಗೆ ಕಾರಣ ಇನ್ನೂ ಖಚಿತವಾಗಿಲ್ಲ ಎಂದು ತಿಳಿದು ಬಂದಿದೆ.

About the author

Adyot

Leave a Comment