Adyot suddinidhi
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ “ವಿಶ್ವಾವಸು ಶಂಕರ ಪಂಚಮಿ” ಪೂಜೆ ಮತ್ತು ಉತ್ಸವವನ್ನು ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ ಮತ್ತು ಗೋ ಸ್ವರ್ಗ ಸಂಸ್ಥಾನದವರು ಜಂಟಿಯಾಗಿ ಆಚರಿಸುತ್ತಿದ್ದಾರೆ. ಈ ಕುರಿತ ಆಮಂತ್ರಣ ಪತ್ರಿಕೆಯನ್ನು ಬೆಂಗಳೂರಿನಲ್ಲಿ ಶ್ರೀಗಳು ಲೊಕಾರ್ಪಣ ಮಾಡಿದರು.
ಈ ಸಂದರ್ಭದಲ್ಲಿ ಭಾರತೀ ಪ್ರಕಾಶನದ ಕಾರ್ಯದರ್ಶಿಗಳು, ಉತ್ಸವ ಖಂಡದ ಶ್ರೀ ಸಂಯೋಜಕರು, ಶ್ರೀಪರಿವಾರ, ಸಮಾಜದ ಗಣ್ಯರು ಹಾಗೂ ಶಿಷ್ಯಭಕ್ತರು ಪಾಲ್ಗೊಂಡಿದ್ದರು.ಮೇ ೧ ರಿಂದ ಶುಭಾರಂಭಗೊAಡು ೪ ದಿನ ಪರ್ಯಂತ ನಡೆಯುವ ಶಂಕರ ಪಂಚಮಿಯ ಪೂಜೆ ಮತ್ತು ಉತ್ಸವಾದಿಗಳಲ್ಲಿ ಶ್ರೀ ಶಂಕರ ಭಗವತ್ಪಾದರುಜಗದ ಕಲ್ಯಾಣಕ್ಕಾಗಿ ಕಂಡುಕೊAಡ ತತ್ವಗಳನ್ನು, ಅದ್ವೆöÊತ ಸಿದ್ಧಾಂತದ ಹಲವು ಆಯಾಮಗಳನ್ನು ಜನ ಮಾನಸಕ್ಕೆ ತಲುಪಿಸಲು ಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿಕಜನ ಸಮುದಾಯ ಅನುಭವಿಸುತ್ತಿರುವ ಬವಣೆ, ಬಳಲಿಕೆಗಳ ನಿವಾರಣೆಗಾಗಿ ಸಂಕಲ್ಪಿಸಿ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು,(ಆಚಾರ್ಯ ಶಂಕರರು ಉಪದೇಶಿಸಿದ ಪಂಚಾಯತನ ಪೂಜಾ ) ದೇವರುಗಳ ಪೂಜೆ ಮತ್ತು ಹವನ, ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರ ಕರ ಕಮಲಗಳಿಂದ ಶ್ರೀ ಮಹಾಪಾದುಕಾ ಪೂಜೆ ನೆರವೇರಲಿದೆ. ರುದ್ರಹವನ, ಕಾಮಧೇನು ಹವನ ಇತ್ಯಾದಿ ಹವನಗಳನ್ನೊಳಗೊಂಡAತೆ ಶ್ರೀ ಸುವರ್ಣಭಿಕ್ಷಾಸೇವೆ ಇತ್ಯಾದಿಗಳು ಶಂಕರ ಪಂಚಮಿಯoದು ಯೋಜಿತವಾಗಿವೆ.
೧೯೮೦ ರಲ್ಲಿ ಶ್ರೀ ರಾಮದೇವ ಭಾನ್ಕುಳಿಮಠದಲ್ಲಿ ಶಂಕರ ಪಂಚಮಿಯ ಪೂಜೆ ಪ್ರಾರಂಭಗೊAಡಿದ್ದು ಶ್ರೀ ರಾಮಚಂದ್ರಾಪುರ ಮಹಾಸಂಸ್ಥಾನದ ಅಂದಿನ ಪೀಠಾಧಿಪತಿಗಳಾಗಿದ್ದ ಬ್ರಹ್ಮಲೀನ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ, ಪ್ರೇರಣೆ, ಹಾಗೂ ಪೂಜ್ಯರ ಸಾನ್ನಿಧ್ಯದಲ್ಲಿ ಶಂಕರ ಜಯಂತಿ ಎಂಬುದಾಗಿ ಪ್ರಾರಂಭಗೊAಡ ಶ್ರೀ ಶಂಕರ ಭಗವತ್ಪಾದರ ಪೂಜೆಯು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಕಾಲದಲ್ಲೂ ಮುಂದುವರಿದು ಗೋಕರ್ಣಮಂಡಲದ ಸಕಲ ಭಕ್ತರ ಪಾಲ್ಗೊಳ್ಳುವಿಕೆಯಿಂದ ಅದ್ವೆöÊತ ತತ್ವಾನುಷ್ಠಾನ ಮತ್ತು ಆಚರಣೆಯನ್ನು ಗುರಿಯಾಗಿರಿಸಿಕೊಂಡು ಪ್ರತಿ ವರ್ಷವೂ ಆಚರಣೆಯಲ್ಲಿದೆ. ಬರಲಿರುವ ವಿಶ್ವಾವಸು ಶಂಕರ ಪಂಚಮಿಯ ಆಚರಣೆಗಳಿಗಾಗಿ ಶ್ರೀಗಳ ಮಾರ್ಗದರ್ಶನದಂತೆ ಹವ್ಯಕಮಹಾಮಂಡಲ, ಗೋಸ್ವರ್ಗಸಮಿತಿ, ಭಾನ್ಕುಳಿಮಠದ ಆಡಳಿತ ಕಮಿಟಿಗಳನ್ನೊಳಗೊಂಡ ಶಂಕರಪAಚಮಿ ಸಮಿತಿಯು ರಚನೆಯಾಗಿದ್ದು ಕಾರ್ಯಾರಂಭ ಮಾಡಿದೆ. ಗೋಕರ್ಣಮಂಡಲದ ಸಕಲ ಗುರುಬಂಧುಗಳೂ ಈ ಸೇವಾಕಾರ್ಯದಲ್ಲಿ ಕಾಯಾ-ವಾಚಾ-ಮನಸಾ ತೊಡಗಿಕೊಂಡು ಶಂಕರಪAಚಮೀ ಉತ್ಸವವನ್ನು ಯಶಸ್ವಿಗೊಳಿಸುವಂತೆ ವಿಶ್ವಾವಸು ಶಂಕರ ಪಂಚಮಿ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.